»   » ಈ ವಾರ ಗಣೇಶ್ 'ಮುಗುಳುನಗೆ' ಚಿತ್ರದೊಂದಿಗೆ ಇನ್ನೆರಡು ಚಿತ್ರಗಳು ಬಿಡುಗಡೆ

ಈ ವಾರ ಗಣೇಶ್ 'ಮುಗುಳುನಗೆ' ಚಿತ್ರದೊಂದಿಗೆ ಇನ್ನೆರಡು ಚಿತ್ರಗಳು ಬಿಡುಗಡೆ

Posted By:
Subscribe to Filmibeat Kannada

ಗಾಂಧಿನಗರದಲ್ಲಿ ಪ್ರತಿ ಶುಕ್ರವಾರ ಸಿನಿಮಾಗಳ ಹಬ್ಬ ನಡೆಯುತ್ತದೆ. ಈಗೀಗ ಕನ್ನಡದಲ್ಲಿ ಒಂದೇ ದಿನ ನಾಲ್ಕೈದು ಸಿನಿಮಾಗಳು ಬಿಡುಗಡೆಯಾಗುತ್ತದೆ. ಸದ್ಯ ಈ ವಾರ ಮೂರು ಸಿನಿಮಾಗಳು ತೆರೆಗೆ ಬರುವುದಕ್ಕೆ ಸಿದ್ಧವಾಗಿದೆ.

ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 'ಮುಗುಳುನಗೆ' ಸಿನಿಮಾ ನಾಳೆ (ಸೆಪ್ಟೆಂಬರ್ 1) ರಂದು ರಿಲೀಸ್ ಆಗುತ್ತಿದೆ. ಈಗಾಗಲೇ ಹಾಡುಗಳ ಮೂಲಕ ದೊಡ್ಡ ನಿರೀಕ್ಷೆಯನ್ನು ಈ ಸಿನಿಮಾ ಹುಟ್ಟಿಸಿದೆ. ಈ ಚಿತ್ರದ ಜೊತೆಗೆ ಸೃಜನ್ ಲೋಕೇಶ್ ನಟನೆಯ 'ಹ್ಯಾಪಿ ಜರ್ನಿ' ಮತ್ತು ಡಬ್ಬಿಂಗ್ ಸಿನಿಮಾ 'ವೇಗ ಮತ್ತು ಉದ್ವೇಗ' ಕೂಡ ಅದೇ ದಿನ ರಿಲೀಸ್ ಆಗಲಿದೆ.

ಈ ವಾರ ಬಿಡುಗಡೆಯಾಗುತ್ತಿರುವ ಮೂರು ಸಿನಿಮಾಗಳ ಒಂದಷ್ಟು ವಿವರ ಇಲ್ಲಿದೆ ನೋಡಿ...

'ಮುಗುಳುನಗೆ' ರಿಲೀಸ್

ಗಣೇಶ್ ನಟನೆಯ 'ಮುಗುಳು ನಗೆ' ಸಿನಿಮಾ ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಯೋಗರಾಜ್ ಭಟ್ ಮತ್ತು ಗಣೇಶ್ ಕಾಂಬಿನೇಶನ್ ಮೂರನೇ ಸಿನಿಮಾ ಇದಾಗಿದ್ದು, ಪ್ರೇಕ್ಷಕರು ಸಿನಿಮಾದ ಬಗ್ಗೆ ದೊಡ್ಡ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹರಿಕೃಷ್ಣ ಸಂಗೀತ ನಿರ್ದೇಶನದ ನೂರನೇ ಸಿನಿಮಾ ಇದಾಗಿದ್ದು, ಹಾಡುಗಳು ಈಗಾಗಲೇ ಸೂಪರ್ ಹಿಟ್ ಆಗಿದೆ.

ಗೋಲ್ಡನ್ ಸ್ಟಾರ್ ಗಣೇಶ್ 'ಮುಗುಳುನಗೆ'ಗೆ ಇಷ್ಟೊಂದು ಡಿಮ್ಯಾಂಡ್ ಇದೆ

ನಾಲ್ಕು ನಾಯಕಿಯರು

'ಮುಗುಳುನಗೆ' ಚಿತ್ರದಲ್ಲಿ ನಾಲ್ಕು ಜನ ನಾಯಕಿಯರಿದ್ದು, ಆಶಿಕಾ ರಂಗನಾಥ್, ನಿಖಿತಾ ನಾರಾಯಣ್, ಅಪೂರ್ವ ಆರೋರ, ಮತ್ತು ವಿಶೇಷ ಪಾತ್ರದಲ್ಲಿ ಅಮೂಲ್ಯ ಕಾಣಿಸಿಕೊಂಡಿದ್ದಾರೆ. ಬೆಂಗಳೂರಿನ ಸಂತೋಷ್ ಸೇರಿದಂತೆ ರಾಜ್ಯದ 250 ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ಸಿನಿಮಾ ಪ್ರದರ್ಶನವಾಗಲಿದೆ.

'ಹ್ಯಾಪಿ ಜರ್ನಿ'

ಸೃಜನ್ ಲೋಕೇಶ್ ಅಭಿನಯದ 'ಹ್ಯಾಪಿ ಜರ್ನಿ' ಸಿನಿಮಾ ಕೂಡ ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ. ಶ್ಯಾಮ್ ಶಿವಮೊಗ್ಗ ಈ ಚಿತ್ರವನ್ನು ನಿರ್ದೇಶನ ಮಾಡಿದ್ದು, ಅಮಿತಾ ಸದಾಶಿವ್ ಚಿತ್ರದ ನಾಯಕಿಯಾಗಿದ್ದಾರೆ. ಕುರಿ ಪ್ರತಾಪ್ ಚಿತ್ರದ ಹಾಸ್ಯ ಪಾತ್ರದಲ್ಲಿ ನಟಿಸಿದ್ದಾರೆ.

'ವೇಗ ಮತ್ತು ಉದ್ವೇಗ'

ಹಾಲಿವುಡ್‌ನ ಸೂಪರ್‌ಹಿಟ್‌ ಚಿತ್ರ 'ಫಾಸ್ಟ್‌ ಯಂಡ್ ಫ್ಯೂರಿಯಸ್-8' ಕನ್ನಡಕ್ಕೆ 'ವೇಗ ಮತ್ತು ಉದ್ವೇಗ' ಹೆಸರಿನಲ್ಲಿ ಡಬ್ ಆಗಿದ್ದು, ಸೆಪ್ಟೆಂಬರ್‌ 1ಕ್ಕೆ ರಿಲೀಸ್ ಆಗಲಿದೆ. ವಿಶೇಷ ಅಂದರೆ ಇದು ಹಾಲಿವುಡ್‌ನಿಂದ ಕನ್ನಡಕ್ಕೆ ಡಬ್ ಆಗಿರುವ ಮೊದಲ ಸಿನಿಮಾವಾಗಿದೆ.

ಯಾವ ಸಿನಿಮಾವನ್ನು ನೋಡುತ್ತೀರಾ..?

ಈ ಮೂರು ಚಿತ್ರಗಳಲ್ಲಿ ನಿಮ್ಮ ಆಯ್ಕೆ ಯಾವುದು? ಯಾವ ಸಿನಿಮಾವನ್ನು ಮೊದಲ ದಿನ, ಮೊದಲ ಶೋ ನೋಡುತ್ತೀರಾ ಎಂದು ಕೆಳಗೆ ನೀಡಿರುವ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ....

English summary
Kannada Actor Golden Star Ganesh starrer 'Mugulu Nage', Srujan Lokesh's 'Happy Journey' and 'Fast And Furious 8' dubbed version 'Vega Mattu Udvega' movies are releasing on september 1st.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada