Don't Miss!
- Sports
ಗೆದ್ದ ಜಯ್ ಶಾ ಹಠ, ಪಾಕ್ಗೆ ಹಿನ್ನೆಡೆ; ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್ ಆಯೋಜಿಸಲು ನಿರ್ಧಾರ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸಂಕ್ರಾಂತಿ ಸಂಭ್ರಮದಲ್ಲಿ ಬಿಡುಗಡೆ ಆಗಿರುವ ಕನ್ನಡ ಸಿನಿಮಾಗಳ ಪಟ್ಟಿ
ಹಳೇ ವರ್ಷ ಕಳೆದು ಹೊಸ ವರ್ಷ ಬಂದಿದ್ದಾಯ್ತು. ಕಳೆದ ವರ್ಷ ಭಾರತೀಯ ಚಿತ್ರರಂಗದಲ್ಲಿ ಕನ್ನಡ ಸಿನಿಮಾಗಳ ಕಾರುಬಾರು ಜೋರಾಗಿತ್ತು. ಈ ವರ್ಷವೂ ಒಂದಷ್ಟು ಕನ್ನಡ ಸಿನಿಮಾಗಳು ಭಾರೀ ನಿರೀಕ್ಷೆ ಮೂಡಿಸಿವೆ. ಜನವರಿ 2ನೇ ವಾರ ಕನ್ನಡದಲ್ಲಿ 3 ಸಿನಿಮಾಗಳು ಪ್ರೇಕ್ಷಕರ ಮುಂದೆ ಬಂದಿವೆ.
ಸಂಕ್ರಾಂತಿ ಸಂಭ್ರಮದಲ್ಲಿ ತೆಲುಗು, ತಮಿಳಿನಲ್ಲಿ ದೊಡ್ಡ ದೊಡ್ಡ ಸಿನಿಮಾಗಳು ಬಿಡುಗಡೆ ಆಗಿದೆ. ತಮಿಳಿನ 'ವಾರಿಸು', 'ಥುನಿವು' ಹಾಗೂ ತೆಲುಗಿನ 'ವೀರಸಿಂಹ ರೆಡ್ಡಿ' ಹಾಗೂ 'ವಾಲ್ತೇರು ವೀರಯ್ಯ' ಸಿನಿಮಾಗಳು ಈಗಾಗಲೇ ತೆರೆಕಂಡು ಸಖತ್ ಸದ್ದು ಮಾಡ್ತಿವೆ. ಕರ್ನಾಟಕದಲ್ಲೂ ಈ ನಾಲ್ಕು ಸಿನಿಮಾಗಳ ಆರ್ಭಟ ಜೋರಾಗಿದೆ. ಬಹುತೇಕ ಸ್ಕ್ರೀನ್‌ಗಳನ್ನು ಈ ಸಿನಿಮಾಗಳೇ ಆವರಿಸಿಕೊಂಡಿವೆ. ಇನ್ನುಳಿದ ಕೆಲವು ಥಿಯೇಟರ್‌ಗಳಲ್ಲಿ ಕನ್ನಡದ 3 ಸಿನಿಮಾಗಳು ತೆರೆಕಂಡಿವೆ.
"ನನಗೆ
ಹೊಡೆದವರ
ಮೇಲೆ
FIR
ಮಾಡಿಸಿದ್ದೀನಿ":ಅಪ್ಪು
ಫ್ಯಾನ್ಸ್
ವಿರುದ್ಧ
ದೂರು
ದಾಖಲಿಸಿದ
ದರ್ಶನ್
ಫ್ಯಾನ್!
ಕನ್ನಡ ಚಿತ್ರರಂಗದಲ್ಲಿ 2023ರ ಆರಂಭ ನೀರಸವಾಗಿದೆ ಎಂದೇ ಹೇಳಬೇಕು. ಕಳೆದ ವಾರ 8 ಸಿನಿಮಾಗಳು ಬಂದು ಹೋಗಿದ್ದೇ ಗೊತ್ತಾಗಲಿಲ್ಲ. ಸಂಕ್ರಾಂತಿ ಹಬ್ಬಕ್ಕೂ ದೊಡ್ಡ ಸಿನಿಮಾಗಳು ಬರದೇ ಇರುವುದು ಅಚ್ಚರಿ ಮೂಡಿಸಿದೆ.

'ಆರ್ಕೇಸ್ಟ್ರಾ ಮೈಸೂರು' ಕಹಾನಿ
ಈ ವಾರ ಬಿಡುಗಡೆಯಾದ ಸಿನಿಮಾಗಳಲ್ಲಿ 'ಆರ್ಕೇಸ್ಟ್ರಾ ಮೈಸೂರು' ಕೊಂಚ ಮಟ್ಟಿಗೆ ಭರವಸೆ ಮೂಡಿಸಿದೆ. ಸುನೀಲ್ ಮೈಸೂರು ನಿರ್ದೇಶನದ ಈ ಚಿತ್ರದಲ್ಲಿ ಪೂರ್ಣಚಂದ್ರ ಮೈಸೂರು ಲೀಡ್ ರೋಲ್‌ನಲ್ಲಿ ನಟಿಸಿದ್ದಾರೆ. ನೈಜ ಘಟನೆಗಳನ್ನು ಆಧರಿಸಿ ಸಿನಿಮಾ ನಿರ್ಮಾಣವಾಗಿದ್ದು ರಾಜಲಕ್ಷ್ಮಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಆರ್ಕೆಸ್ಟ್ರಾ ಗಾಯಕನಾಗಬೇಕು ಎಂದು ಕನಸು ಕಾಣುವ ಯುವಕನ ಕಥೆಯನ್ನು ಚಿತ್ರದಲ್ಲಿ ಹೇಳಲಾಗಿದೆ. ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಅವರ ಕೆಆರ್‌ಜಿ ಸ್ಟುಡಿಯೋಸ್ ಮತ್ತು ಧನಂಜಯ್ ಅವರ ಡಾಲಿ ಪಿಕ್ಚರ್ಸ್ ತಂಡದ ಬೆಂಬಲಕ್ಕೆ ನಿಂತಿದೆ. ಒಂದು ದಿನ ಮೊದಲೇ ಸಿನಿಮಾ ರಿಲೀಸ್ ಆಗಿ ಉತ್ತಮ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ.

'ವಿರಾಟಪುರ ವಿರಾಗಿ'ಗೆ ಜೈಕಾರ
ಹಾನಗಲ್ಲ ಕುಮಾರಸ್ವಾಮಿ ಜೀವನ ಚರಿತ್ರೆ ಆಧರಿಸಿ ಬಿ. ಎಸ್ ಲಿಂಗದೇವರು ನಿರ್ದೇಶನದ 'ವಿರಾಟಪುರ ವಿರಾಗಿ' ಸಿನಿಮಾ ಕೂಡ ರಿಲೀಸ್ ಆಗಿದೆ. ಹಾನಗಲ್ಲ ಶ್ರೀಗಳ ಪಾತ್ರದಲ್ಲಿ ನಟ ಸುಚೇಂದ್ರ ಪ್ರಸಾದ್ ನಟಿಸಿದ್ದಾರೆ. ಸಿನಿಮಾ ರಿಲೀಸ್‌ಗೂ ಮೊದಲೇ 75 ಸಾವಿರ ಟಿಕೆಟ್‌ಗಳು ಮಾರಾಟ ಆಗಿತ್ತು. ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಆಗುವ ಬದಲು ಜಾತ್ರೆ, ಮಠಗಳ ಮೂಲಕ ಪಾಸ್‌ಗಳ ರೀತಿ ಟಿಕೆಟ್ ಹಂಚಲಾಗಿತ್ತು. ಉತ್ತರ ಕರ್ನಾಕಟದಲ್ಲೇ ಸಿನಿಮಾ ಚಿತ್ರೀಕರಣ ನಡೆದಿತ್ತು.

ಹೀರೊ ಆಗಿ ರೂಪೇಶ್ ಶೆಟ್ಟಿ ಎಂಟ್ರಿ
ಬಿಗ್‌ಬಾಸ್ ಕನ್ನಡ ಸೀಸನ್-9ರ ವಿನ್ನರ್ ರೂಪೇಶ್ ಶೆಟ್ಟಿ ನಟನೆಯ 'ಮಂಕುಭಾಯ್ ಫಾಕ್ಸಿರಾಣಿ' ಸಿನಿಮಾ ಕೂಡ ಬಿಡುಗಡೆ ಆಗಿದೆ. ಜೋಶು ಕ್ರಸ್ಟಾ ನಿರ್ದೇಶನದ ಈ ಚಿತ್ರಕ್ಕೆ ಗಗನ್ ಆಕ್ಷನ್ ಕಟ್ ಹೇಳಿದ್ದಾರೆ. 'ಬ್ರಹ್ಮಗಂಟು' ಧಾರಾವಾಹಿ ಖ್ಯಾತಿಯ ಗೀತಾ ಭಾರತಿ ಭಟ್ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ತುಳು ಭಾಷೆಯಲ್ಲಿ ಒಂದಷ್ಟು ಸಿನಿಮಾಗಳಲ್ಲಿ ನಟಿಸಿರುವ ರೂಪೇಶ್ ಶೆಟ್ಟಿ 'ಮಂಕುಭಾಯ್ ಫಾಕ್ಸಿರಾಣಿ' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ.

ಮಿ & ಮಿ ರಾಮಾಚಾರಿ ರೀ ರಿಲೀಸ್
ಇತ್ತೀಚೆಗೆ ಯಶ್ ಹುಟ್ಟುಹಬ್ಬದ ಸಂಭ್ರಮದಲ್ಲಿ 'ಮಿ & ಮಿ ರಾಮಾಚಾರಿ' ಸಿನಿಮಾ ರೀ ರಿಲೀಸ್ ಆಗಿತ್ತು. ಸಂಕ್ರಾಂತಿ ಸಂಭ್ರಮದಲ್ಲಿ ಮತ್ತೊಮ್ಮೆ ನಗರದ ಸಂತೋಷ್ ಥಿಯೇಟರ್‌ನಲ್ಲಿ ರಾಮಾಚಾರಿ ಆರ್ಭಟ ಶುರುವಾಗಿದೆ. ಸಂತೋಷ್ ಆನಂದ್‌ರಾಮ್ ನಿರ್ದೇಶನದ ಈ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ನಟಿಸಿದ್ದಾರೆ. ಜಯಣ್ಣ ಕಂಬೈನ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾ 8 ವರ್ಷಗಳ ಹಿಂದೆ 50 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು.