ಈ ಶುಭ ಶುಕ್ರವಾರ ಚಿತ್ರಮಂದಿರದ ಅಂಗಳದಲ್ಲಿ ಮೂರು ಕನ್ನಡ ಸಿನಿಮಾಗಳು

By Naveen

ಸಿನಿಮಾಭಿಮಾನಿಗಳಿಗೆ ಶುಕ್ರವಾರ ಅಂದರೆ ಹಬ್ಬದ ದಿನದ ರೀತಿ. ಆ ದಿನ ಬಂದರೆ ಸಾಕು ತಮ್ಮ ಮೆಚ್ಚಿನ ನಟರ ಸಿನಿಮಾ ನೋಡಲು ಅನೇಕರು ಕಾಯುತ್ತಿರುತ್ತಾರೆ. ಅಂತಹ ಚಿತ್ರ ಪ್ರೇಕ್ಷಕರಿಗಾಗಿ ಈ ವಾರ ಮೂರು ಕನ್ನಡ ಸಿನಿಮಾಗಳು ರಿಲೀಸ್ ಆಗುತ್ತಿದೆ.

ಶಿವರಾಜ್ ಕುಮಾರ್ ಅಭಿನಯದ 'ಮಾಸ್ ಲೀಡರ್', 'ವಿಜಯ ರಾಘವೇಂದ್ರ' ಅವರ ಜಾನಿ ಮತ್ತು ಹೊಸಬರ 'ಇ1' ಮೂರು ಸಿನಿಮಾಗಳು ಒಂದೇ ದಿನ ಬಿಡುಗಡೆಯಾಗುತ್ತಿದೆ. ಅಂದಹಾಗೆ, ಈ ಶುಕ್ರವಾರ ತೆರೆಗೆ ಬರುತ್ತಿರುವುದಕ್ಕೆ ಸಿದ್ದವಾಗಿರುವ ಮೂರು ಕನ್ನಡ ಸಿನಿಮಾಗಳ ಒಂದಷ್ಟು ವಿವರ ಇಲ್ಲಿದೆ ಓದಿ...

'ಮಾಸ್ ಲೀಡರ್'

'ಮಾಸ್ ಲೀಡರ್'

ಶಿವರಾಜ್ ಕುಮಾರ್ ಅಭಿನಯದ 'ಮಾಸ್ ಲೀಡರ್' ಸಿನಿಮಾ ಇದೇ ವಾರ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿದೆ. ನರಸಿಂಹ ನಿರ್ದೇಶನ ಈ ಚಿತ್ರವನ್ನು ತರುಣ್ ಶಿವಪ್ಪ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಆರ್ಮಿ ಆಫೀಸರ್ ಆಗಿ ಶಿವಣ್ಣ ಕಾಣಿಸಿಕೊಂಡಿದ್ದು, ಪ್ರಣೀತಾ, ವಿಜಯ ರಾಘವೇಂದ್ರ, ಲೂಸ್ ಮಾದ ಯೋಗೀಶ್, ಗುರು ಜಗ್ಗೇಶ್, ಶರ್ಮಿಳಾ ಮಾಂಡ್ರೆ, ಆಶಿಕಾ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.

'ಜಾನಿ'

'ಜಾನಿ'

ವಿಜಯ ರಾಘವೇಂದ್ರ ನಟನೆಯ 'ಜಾನಿ' ಸಿನಿಮಾ ಈ ಶುಕ್ರವಾರ ಬಿಡುಗಡೆ ಆಗುತ್ತಿದೆ. ಪಿಕೆಎಚ್ ದಾಸ್‌ ಚೊಚ್ಚಲ ನಿರ್ದೇಶನದ ಚಿತ್ರ ಇದಾಗಿದ್ದು, ಬಹುಭಾಷ ನಟ ಸುಮನ್ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಆಕ್ಷನ್ ಮತ್ತು ಕಾಮಿಡಿ ಡ್ರಾಮಾ ಚಿತ್ರದಲ್ಲಿದ್ದು, ಮಲಯಾಳಂ ನಟಿ ಜನನಿ ಮತ್ತು ಮಿಲನ ನಾಗರಾಜ್‌ ನಾಯಕಿಯರಾಗಿದ್ದಾರೆ.

'ಇ1'

'ಇ1'

ವಿಭಿನ್ನ ಟೈಟಲ್ ಮೂಲಕವೇ ಕುತೂಹಲ ಹುಟ್ಟಿಸಿರುವ 'ಇ1' ಸಿನಿಮಾ ಆಗಸ್ಟ್ 11ಕ್ಕೆ ಬಿಡುಗಡೆ ಆಗುತ್ತಿದೆ. ಎ.ಆರ್.ರಮೇಶ್ ನಿರ್ದೇಶನದ ಈ ಚಿತ್ರದಲ್ಲಿ ಸಂಹಿತಾ ಶಾ ಮತ್ತು ಮೋಹನ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

ನಿಮ್ಮ ಆಯ್ಕೆ ಯಾವುದು.?

ನಿಮ್ಮ ಆಯ್ಕೆ ಯಾವುದು.?

'ಮಾಸ್ ಲೀಡರ್', 'ಜಾನಿ', 'ಇ1' ಚಿತ್ರಗಳ ಪೈಕಿ ನಿಮ್ಮ ಆಯ್ಕೆ ಯಾವುದು ಎಂಬುದನ್ನು ನಮಗೆ ತಿಳಿಸಿ... ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ...

More from Filmibeat

English summary
Shivarajkumar starrer 'Mass Leader', Vijaya Raghavendra's 'Jaani' and 'E1' movie is Releasing on August 11th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X