For Quick Alerts
  ALLOW NOTIFICATIONS  
  For Daily Alerts

  ಈ ಶುಕ್ರವಾರ ಮೂರು ಸಿನಿಮಾಗಳ ಬಿಡುಗಡೆ

  |

  ಈ ಶುಕ್ರವಾರ ಹೊಸ ಸಿನಿಮಾ ನೋಡಬೇಕು ಎನ್ನುವವರಿಗಾಗಿ ಕನ್ನಡದ ಮೂರು ಚಿತ್ರಗಳು ಸಿದ್ಧವಾಗಿವೆ. 'ಹಫ್ತಾ', 'ಕೃಷ್ಣ ಗಾರ್ಮೆಂಟ್ಸ್' ಹಾಗೂ 'ಸಾರ್ವಜನಿಕರಲಿ ವಿನಂತಿ' ಸಿನಿಮಾಗಳು ನಾಳೆ (ಶುಕ್ರವಾರ) ರಿಲೀಸ್ ಆಗುತ್ತಿವೆ.

  'ಹಫ್ತಾ' ಟ್ರೇಲರ್ ಮೆಚ್ಚಿಕೊಂಡ ಸ್ಯಾಂಡಲ್ ವುಡ್ ಸ್ಟಾರ್ಸ್

  'ಹಫ್ತಾ' ವರ್ಧನ್ ತೀರ್ಥಹಳ್ಳಿ ನಟನೆಯ ಮೊದಲ ಸಿನಿಮಾವಾಗಿದೆ. ಈ ಹಿಂದೆ ಸಾಕಷ್ಟು ಚಿತ್ರದಲ್ಲಿ ಖಳನಟನಾಗಿ ಕಾಣಿಸಿಕೊಂಡಿದ್ದ ಈ ನಟ ಈಗ ಹೀರೋ ಆಗಿದ್ದಾರೆ. ಭೂಗತ ಲೋಕದ ಕಥೆ ಹೊಂದಿರುವ ಈ ಸಿನಿಮಾ ಪಕ್ಕಾ ಮಾಸ್ ಸ್ಟೈಲ್ ನಲ್ಲಿ ಇದೆ. ವರ್ಧನ್ ಎರಡು ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ.

  'ಕೃಷ್ಣ ಗಾರ್ಮೆಂಟ್ಸ್' ಸಿನಿಮಾ ಕೂಡ ಇದೇ ವಾರ ತೆರೆಗೆ ಬರುತ್ತಿದೆ. ಸಿದ್ದು ಪೂರ್ಣಚಂದ್ರ ನಿರ್ದೇಶನದ ಥ್ರಿಲ್ಲರ್ ಚಿತ್ರ ಇದಾಗಿದೆ. ರಶ್ಮಿತ್, ಚಂದು ಗೌಡ, ವರ್ಧನ್ ತೀರ್ಥಹಳ್ಳಿ ಮತ್ತು ರಾಜೇಶ್ ನಟರಂಗ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ‍ಷಣ್ಮುಖ ಜಿ ಬೆಂಡಿಗೇರಿ ಚಿತ್ರಕ್ಕೆ ಬಂಡವಾಳ ಹೂಡಿದ್ದರೆ, ರಘು ಧನ್ವಂತರಿ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

  'ಸಾರ್ವಜನಿಕರಲಿ ವಿನಂತಿ' ಸಿನಿಮಾ ಜೂನ್ 21 ರಂದು ಬಿಡುಗಡೆಯಾಗುತ್ತಿದೆ. ಮದನ್ ರಾಜ್, ಅಮೃತಾ ಕೆ ಮಂಡ್ಯ ರಮೇಶ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂಜು ಬಸಯ್ಯ, ನಾಗೇಶ್ ಮಯ್ಯಾ, ರಮೇಶ್ ಪಂಡಿತ್ ಸಿನಿಮಾದಲ್ಲಿ ನಟಿಸಿದ್ದಾರೆ.

  ಈ ಮೂರು ಚಿತ್ರಗಳು ಶುಕ್ರವಾರ ಬಿಡುಗಡೆಯಾಗುತ್ತಿದ್ದು, ಯಾವ ಸಿನಿಮಾಗೆ ಪ್ರೇಕ್ಷಕರು ಜೈಕಾರ ಹಾಕಲಿದ್ದಾರೆ ಎನ್ನುವುದು ನಾಳೆ ತಿಳಿಯಲಿದೆ.

  English summary
  3 Kannada movies will be releasing on june 21st. Sarvajanika Ralli Vinanthi, Krishna Garments, Haftha movies will release on tommorow.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X