For Quick Alerts
  ALLOW NOTIFICATIONS  
  For Daily Alerts

  ಈ ಶುಕ್ರವಾರ ಮೂರು ಕನ್ನಡ ಚಿತ್ರಗಳು ರಿಲೀಸ್

  |

  ಪ್ರತಿ ಶುಕ್ರವಾರ ಹೊಸ ಹೊಸ ಕನ್ನಡ ಸಿನಿಮಾಗಳು ಬಿಡುಗಡೆಯಾಗುತ್ತಿರುತ್ತವೆ. ಆದರೆ, ಈ ವಾರ ಈಗಾಗಲೇ ಎರಡು ಚಿತ್ರಗಳು ಬಿಡುಗಡೆಯಾಗಿದ್ದು, ನಾಳೆ (ಶುಕ್ರವಾರ) ಮೂರು ಸಿನಿಮಾಗಳು ತೆರೆಗೆ ಬರುತ್ತಿದೆ.

  ನಿನ್ನೆ (ಬುಧವಾರ) ಗಣೇಶ್ ಅಭಿನಯದ '99' ಸಿನಿಮಾ ಬಿಡುಗಡೆಯಾಗಿತ್ತು. ಜೊತೆಗೆ 'ಕಾಂಚನಾ 3' ಡಬ್ಬಿಂಗ್ ಸಿನಿಮಾ ಕೂಡ ಕರ್ನಾಟಕದಲ್ಲಿ ರಿಲೀಸ್ ಆಗಿತ್ತು. ಒಂದು ರಿಮೇಕ್ ಹಾಗೂ ಒಂದು ಡಬ್ಬಿಂಗ್ ಸಿನಿಮಾಗಳ ನಂತರ ಈ ಶುಕ್ರವಾರ ಮೂರು ಹೊಸ ಸಿನಿಮಾಗಳ ಚಿತ್ರಮಂದಿರಕ್ಕೆ ಕಾಲಿಡುತ್ತಿದೆ.

  ಪ್ರೀಮಿಯರ್ ಕ್ಲಾಸ್ ನಲ್ಲಿ ಪದ್ಮಿನಿಯೊಂದಿಗೆ ಸುಖಕರವಾದ ಪ್ರಯಾಣ

  ಖ್ಯಾತ ನಿರೂಪಕ, ಬಿಗ್ ಬಾಸ್ ಸ್ಪರ್ಧಿ ರೆಹಮಾನ್ 'ಗರ', 'ಲೋಫರ್ಸ್' ಹಾಗೂ ಸೆಂಚುರಿ ಗೌಡ ನಟನೆಯ 'ಒಂಬತ್ತನೇ ಅದ್ಬುತ' ಸಿನಿಮಾಗಳು ಈ ಶುಕ್ರವಾರ ಬಿಡುಗಡೆಯಾಗುತ್ತಿವೆ. ಮುಂದೆ ಓದಿ...

  ರೆಹಮಾನ್ ನಟನೆಯ 'ಗರ' ಸಿನಿಮಾ

  ರೆಹಮಾನ್ ನಟನೆಯ 'ಗರ' ಸಿನಿಮಾ

  ಖ್ಯಾತ ನಿರೂಪಕ, ಬಿಗ್ ಬಾಸ್ ಸ್ಪರ್ಧಿ ರೆಹಮಾನ್ ಅಭಿನಯದ 'ಗರ' ಸಿನಿಮಾ ನಾಳೆ ಬಿಡುಗಡೆಯಾಗುತ್ತಿದೆ. ಕೆ.ಆರ್.ಮುರಳಿಕೃಷ್ಣ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಹಾಸ್ಯ ನಟ ಜಾನಿಲೀವರ್ ಹಾಗೂ ಸಾಧು ಕೋಕಿಲ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆರ್ಯನ್, ಆವಂತಿಕಾ, ಪ್ರಶಾಂತ್ ಸಿದ್ದಿ, ನೇಹಾ ಪಾಟೀಲ್ ರಾಮಕೃಷ್ಣ, ರೂಪಾದೇವಿ, ಸೋನು, ದಯಾನಂದ್ ಸೇರಿದಂತೆ ಸಾಕಷ್ಟು ಕಲಾವಿದರು ನಟಿಸಿದ್ದಾರೆ.

  ಇವ್ರೆಲ್ಲ 'ಲೋಫರ್ಸ್'ಗಳು

  ಇವ್ರೆಲ್ಲ 'ಲೋಫರ್ಸ್'ಗಳು

  'ಲೋಫರ್ಸ್' ಎನ್ನುವ ಬೈಗುಳದ ಟೈಟಲ್ ಮೂಲಕ ಚಿತ್ರವೊಂದು ಸುದ್ದಿ ಮಾಡುತ್ತಿದೆ. ಈ ಸಿನಿಮಾ ನಾಳೆ ಅದೃಷ್ಟ ಪರೀಕ್ಷೆಗೆ ಇಳಿದಿದೆ. ಹಾರರ್ ಕಥೆ ಹೊಂದಿರುವ ಈ ಸಿನಿಮಾ ಕೇವಲ ಏಳು ಮಂದಿಯ ಸುತ್ತಾ ಸುತ್ತುವ ಸುತ್ತುತ್ತದೆಯಂತೆ. ಎಸ್ ಮೋಹನ್ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಮೂರು ನಾಯಕ, ನಾಯಕಿಯರು ಸಿನಿಮಾದಲ್ಲಿ ನಟಿಸಿದ್ದಾರೆ.

  Premier padmini reveiw: ಬಂಧ-ಅನುಬಂಧಗಳ ಭಾವನಾತ್ಮಕ ಮಿಶ್ರಣ

  ಇದು 'ಒಂಬತ್ತನೇ ಅದ್ಭುತ'

  ಇದು 'ಒಂಬತ್ತನೇ ಅದ್ಭುತ'

  'ಒಂಬತ್ತನೇ ಅದ್ಭುತ' ನಟ ಸಂತೋಷ್ ಕುಮಾರ್ ಬಟಗೇರಿ ಕಥೆ ಹಾಗೂ ನಿರ್ದೇಶನದ ಚಿತ್ರವಾಗಿದೆ. ಟೈಟಲ್ ಕೆಳಗೆ ‘ಮತ್ತೆ ಹುಟ್ಟಿ ಬಾ ನಮೋ' ಎಂದು ಸೇರಿದ್ದು, ಮೋದಿಯವರಿಗೆ ಈ ಚಿತ್ರದ ಬಗ್ಗೆ ಸಂಬಂಧ ಇದ್ಯಾ ಎನ್ನುವುದಕ್ಕೆ ಉತ್ತರ ಚಿತ್ರದಲ್ಲಿ ಇದೆಯಂತೆ. ಈ ಸಿನಿಮಾದ ಒಂದು ಪಾತ್ರದಲ್ಲಿ ತಿಥಿ ಖ್ಯಾತಿಯ ಸೆಂಚುರಿ ಗೌಡ ಅಭಿನಯಿಸಿದ್ದಾರೆ. ನಯನಾ ಸಾಯಿ ಚಿತ್ರದ ನಾಯಕಿಯಾಗಿದ್ದಾರೆ.

  ಒಂದು ರಿಮೇಕ್, ಒಂದು ಡಬ್ಬಿಂಗ್

  ಒಂದು ರಿಮೇಕ್, ಒಂದು ಡಬ್ಬಿಂಗ್

  ಈ ಮೂರು ಚಿತ್ರಗಳು ನಾಳೆ (ಶುಕ್ರವಾರ) ಬಿಡುಗಡೆಯಾಗುತ್ತಿವೆ. ಆದರೆ, ಈ ವಾರ ಈಗಾಗಲೇ ಎರಡು ಚಿತ್ರಗಳು ಚಿತ್ರಮಂದಿರದ ಪ್ರವೇಶ ಮಾಡಿವೆ. '96' ತಮಿಳು ಸಿನಿಮಾದ ರಿಮೇಕ್ '99' ಹೆಸರಿನಲ್ಲಿ ಕನ್ನಡಕ್ಕೆ ಬಂದಿದೆ. ಗಣೇಶ್ ಹಾಗೂ ಭಾವನ ಸಿನಿಮಾದಲ್ಲಿ ನಟಿಸಿದ್ದಾರೆ. 'ಕಾಂಚನಾ 3' ಸಹ ತಮಿಳಿನಿಂದ ಕನ್ನಡಕ್ಕೆ ಡಬ್ ಆಗಿ ರಿಲೀಸ್ ಆಗಿದೆ.

  English summary
  'Gara', 'Ombathane Adbutha' 'Loafers' 3 kanada movies will be releasing on may 3rd.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X