Just In
Don't Miss!
- News
ಕೇಂದ್ರ ಬಜೆಟ್ 2021:ಬೆಂಗಳೂರಿನ ನಿರೀಕ್ಷೆಗಳೇನು?
- Sports
ಟೆಸ್ಟ್ ಪದಾರ್ಪಣೆ ಹಾಗೂ ಸರಣಿ ಗೆಲುವು, ಕನಸು ನನಸಾದ ಸಂದರ್ಭ: ವಾಶಿಂಗ್ಟನ್ ಸುಂದರ್
- Finance
"ಟಿಕ್ ಟಾಕ್ ಸೇರಿ ಚೀನಾದ ಕೆಲವು ಆಪ್ ಗಳಿಗೆ ಭಾರತದಲ್ಲಿ ಶಾಶ್ವತ ನಿಷೇಧ"
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
3 ಹೆಣ್ಣು ಮಕ್ಕಳಿಗೂ ಹ್ಯಾಂಡ್ಸಮ್ ಗಂಡುಗಳನ್ನು ಆಯ್ಕೆ ಮಾಡಿದ ಸಿಂಗ್ ದಂಪತಿ
ನಟ ಜೈ ಜಗದೀಶ್ ಅವರ ಪತ್ನಿ, ನಟಿ-ನಿರ್ಮಾಪಕಿ ಮತ್ತು ನಿರ್ದೇಶಕಿಯಾಗಿ ಗುರುತಿಸಿಕೊಂಡಿರುವ ವಿಜಯಲಕ್ಷ್ಮಿ ಸಿಂಗ್ ಅವರ, ಮೂವರು ಮುದ್ದಾದ ಹೆಣ್ಣು ಮಕ್ಕಳು ಚಿತ್ರರಂಗಕ್ಕೆ ಕಾಲಿಡುತ್ತಿರೋ ವಿಚಾರವನ್ನು ನಾವೇ ನಿಮಗೆ ಹೇಳಿದ್ವಿ.
ಸಿಂಗ್ ದಂಪತಿಗಳ ಮೂವರು ಹೆಣ್ಣು ಮಕ್ಕಳಾದ ವೈಭವಿ, ವೈನಿಧಿ, ವೈಸಿರಿ 'ಯಾನ' ಎಂಬ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.[ಚಿತ್ರಪುಟ; ಸ್ಯಾಂಡಲ್ ವುಡ್ ನಲ್ಲಿ ವಿಜಯಲಕ್ಷ್ಮಿ ಸಿಂಗ್ ಮಕ್ಕಳ 'ಯಾನ']
ಪ್ರವಾಸದ ಹಿನ್ನಲೆಯುಳ್ಳ ಕಥೆಯೊಂದನ್ನು ತಯಾರಿಸಿ, 'ಆ' ಪ್ರವಾಸ ಕಥನಕ್ಕೆ ತಮ್ಮ ಮೂವರು ಹೆಣ್ಣು ಮಕ್ಕಳನ್ನೇ ಸೂತ್ರಧಾರಿಗಳಾಗಿ ಮಾಡಲು ವಿಜಯಲಕ್ಷ್ಮಿ ಸಿಂಗ್ ಅವರು ಮನಸ್ಸು ಮಾಡಿದ್ದಾರೆ.
ಮಗಳಂದಿರ ಫೋಟೋ ಶೂಟ್ ನಡೆಸಿ, ಚಿತ್ರಕ್ಕೆ ಮುಹೂರ್ತ ಕೂಡ ಗ್ರ್ಯಾಂಡ್ ಆಗಿ ಮಾಡಿದ್ದರು. ಜೊತೆಗೆ ತಮ್ಮ ಮೂವರು ಹೆಣ್ಣು ಮಕ್ಕಳಿಗೆ ಹೀರೋಗಳನ್ನು ಹುಡುಕೋ ಕೆಲಸದಲ್ಲಿ ಬಿಜಿಯಾಗಿದ್ದರು.
ಇದೀಗ ಮೂವರು ನಾಯಕಿಯರಿಗೆ ಅಷ್ಟೇ ಹ್ಯಾಂಡ್ಸಮ್ ಆಗಿರೋ ನಾಯಕರು ಸಿಕ್ಕಿದ್ದು, ಕ್ಯಾಮೆರಾಮೆನ್ ಭುವನ್ ಗೌಡ ಅವರ ಸಾರಥ್ಯದಲ್ಲಿ ಒಟ್ಟು ಆರು ಜನರ ಫೋಟೋ ಶೂಟ್ ಕೂಡ ಯಶಸ್ವಿಯಾಗಿ ನೆರವೇರಿದೆ. ಮಾತ್ರವಲ್ಲದೇ ಖುದ್ದಾಗಿ ವಿಜಯಲಕ್ಷ್ಮಿ ಸಿಂಗ್ ಅವರೇ ಸುದ್ದಿಗೋಷ್ಠಿ ನಡೆಸಿ, ಮಾಧ್ಯಮಕ್ಕೆ ಮೂವರು ನಾಯಕರ ಪರಿಚಯ ಮಾಡಿ ಕೊಟ್ಟಿದ್ದಾರೆ. ಮುಂದೆ ಓದಿ...

ಮೂವರು ಸುಂದರ ನಾಯಕರು
ಮೂವರು ಸುಂದರಿಯರಾದ ವೈಭವಿ, ವೈನಿಧಿ, ವೈಸಿರಿ ಅವರಿಗೆ, ಸಖತ್ ಹ್ಯಾಂಡ್ಸಮ್ ಆಗಿರೋ ಹುಡುಗರನ್ನು, ನಟಿ-ನಿರ್ಮಾಪಕಿ-ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಅವರು ಆಯ್ಕೆ ಮಾಡಿದ್ದಾರೆ. ಅವರೇ ಚಕ್ರವರ್ತಿ, ಸುಮುಖ್ ಮತ್ತು ಅಭಿಷೇಕ್.[3 ಮಗಳಂದಿರ ಜೊತೆ ವಿಜಯಲಕ್ಷ್ಮಿ ಸಿಂಗ್ ದಂಪತಿಗಳ ಹೊಸ ಮ್ಯಾಜಿಕ್]

ಚಕ್ರವರ್ತಿ-ಸುಮುಖ್ ಮತ್ತು ಅಭಿಷೇಕ್
ಕೊನೆಯಲ್ಲಿ ವೈಭವಿ ಜೊತೆ ನಿಂತಿರುವ ಹ್ಯಾಂಡ್ಸಮ್ ಹುಡುಗ 'ಅಭಿಷೇಕ್', ಮಧ್ಯದಲ್ಲಿ ವೈಸಿರಿ ಜೊತೆ ನಿಂತಿರುವ ಹುಡುಗ 'ಚಕ್ರವರ್ತಿ' ಮತ್ತು ಮೊದಲು ವೈನಿಧಿ ಜೊತೆ ನಿಂತಿರುವ ಕ್ಯೂಟ್ ಅಂಡ್ ಚಾಕ್ಲೇಟ್ ಬಾಯ್ 'ಸುಮುಖ್'.

ಮೂವರಿಗೂ ಚೊಚ್ಚಲ ಚಿತ್ರ
ಒಬ್ಬರಿಗಿಂತ ಒಬ್ಬರು ಸಖತ್ ಕ್ಯೂಟ್ ಮತ್ತು ಸುರ-ಸುಂದರರಂತಿರುವ ಅಭಿಷೇಕ್, ಚಕ್ರವರ್ತಿ ಮತ್ತು ಸುಮುಖ್ ಈ ಮೂವರಿಗೂ ಇದು ಮೊದಲ ಸಿನಿಮಾ. ವಿಜಯಲಕ್ಷ್ಮಿ ಸಿಂಗ್ ಪರಿವಾರದ 'ಯಾನ' ಚಿತ್ರದ ಮೂಲಕ ಮೊಟ್ಟ ಮೊದಲ ಬಾರಿಗೆ ಬೆಳ್ಳಿ ತೆರೆಗೆ ಎಂಟ್ರಿ ಕೊಡುತ್ತಿದ್ದಾರೆ.

ಸುಮುಖ್ ಗೆ ಬಣ್ಣದ ಬದುಕಿನ ಟಚ್ ಇದೆ
ಇನ್ನು ಇದ್ರಲ್ಲಿ ನಟ ಸುಮುಖ್ ಅವರಿಗೆ ಕೊಂಚ ಬಣ್ಣದ ಬದುಕಿನ ಟಚ್ ಇದೆ. ಸುಮುಖ್ ಅವರು ಕಿರುತೆರೆ ನಟ ಶಶಿಕುಮಾರ್ ಅವರ ಮಗ ಎನ್ನಲಾಗುತ್ತಿದೆ. ಮುಂಬೈನಲ್ಲಿ ರಂಗಭೂಮಿಯಲ್ಲಿ ಕೆಲವು ಸಮಯಗಳ ಕಾಲ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಸುಮುಖ್ ಅವರು, ಇದೀಗ ಸಂಪೂರ್ಣ ತಯಾರಿ ನಡೆಸಿಕೊಂಡೇ ಅಖಾಡಕ್ಕೆ ಇಳಿದಿದ್ದಾರೆ.

'ಬೆಣ್ಣೆ ದೋಸೆ' ನಾಡಿನ ಅಭಿಷೇಕ್
ನಟ ಅಭಿಷೇಕ್ ಅವರು ಮೂಲತಃ ದಾವಣಗೆರೆಯವರು. 'ಬೆಣ್ಣೆ ದೋಸೆ'ಗೆ ಖ್ಯಾತಿ ಗಳಿಸಿರುವ ದಾವಣೆಗೆರೆಯ ಹುಡುಗ ಅಭಿಷೇಕ್ ಅವರಿಗೆ ಬಣ್ಣದ ಬದುಕು ಹೊಸದು. ಬೆಣ್ಣೆ ದೋಸೆ ತಿಂದು ಅಚ್ಚ ಬೆಣ್ಣೆ ಕಲರ್ ನಂತೆ ಇದ್ದಾರೆ ಅಭಿಷೇಕ್ ಅವರು. 'ಯಾನ' ಚಿತ್ರಕ್ಕೆ ನಾಯಕನಾಗಿ ಆಯ್ಕೆಯಾಗಿ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆ ಮಾಡಲು ಸಜ್ಜಾಗಿದ್ದಾರೆ.

ರೈತ ಕುಟುಂಬದ ಚಕ್ರವರ್ತಿ
ಸುಮುಖ್ ಅವರಿಗೆ ಒಂದು ಚಿಕ್ಕ ಬ್ಯಾಕ್ ಗ್ರೌಂಡ್ ಇದ್ದರೆ, ಅಭಿಷೇಕ್ ಮತ್ತು ಚಕ್ರವರ್ತಿ ಅವರಿಗೆ ಏನೂ ಇಲ್ಲ. ಶುದ್ಧ ರೈತ ಕುಟುಂಬದಿಂದ ನೇರವಾಗಿ ಚಿತ್ರರಂಗಕ್ಕೆ ಧುಮುಕಿದವರು ನಟ ಚಕ್ರವರ್ತಿ. ಅಪ್ಪಟ ಮಣ್ಣಿನ ಮಗನಾದ ಚಕ್ರವರ್ತಿ ಅವರು ನೋಡಲು ಅಷ್ಟೇ ಸುಂದರವಾಗಿದ್ದಾರೆ.

ಲವ್ ಲೈಫ್-ವಿಜಯಲಕ್ಷ್ಮಿ ಸಿಂಗ್ ಕಥೆ
ಪ್ರವಾಸ ಕಥನದ ಜೊತೆ ಲವ್ ಲೈಫನ್ನು ಸಿನಿಮಾ ಒಳಗೊಂಡಿದೆ. ಚಿತ್ರಕ್ಕೆ ಖುದ್ದು ವಿಜಯಲಕ್ಷ್ಮಿ ಸಿಂಗ್ ಅವರೇ ಕಥೆ ಬರೆಯುವುದರ ಜೊತೆಗೆ ನಿರ್ದೇಶನ ಕೂಡ ಮಾಡಲಿದ್ದಾರೆ.

ನಿರ್ಮಾಣ ಯಾರದ್ದು
ಚಿತ್ರಕ್ಕೆ ನಟ ಕಮ್ ನಿರ್ಮಾಪಕ ಜೈ ಜಗದೀಶ್ ಅವರು ಬಂಡವಾಳ ಹೂಡಲಿದ್ದಾರೆ. ತಮ್ಮ ನಿರ್ಮಾಣದ ಮೂಲಕವೇ ಮೂವರು ಹೆಣ್ಣು ಮಕ್ಕಳನ್ನು ನಾಯಕಿಯರಾಗಿ ಚಿತ್ರರಂಗಕ್ಕೆ, ಜೈ ಜಗದೀಶ್ ಅವರು ಪರಿಚಯ ಮಾಡಿ ಕೊಡುತ್ತಿದ್ದಾರೆ.

ತಂತ್ರಜ್ಞಾನ
ಚಿತ್ರಕ್ಕೆ ಸುಹಾಸ್ ಗಂಗಾಧರ್ ಅವರು ಚಿತ್ರಕಥೆ ಬರೆಯಲಿದ್ದು, ನಿರ್ದೇಶಕ ಸಿಂಪಲ್ ಸುನಿ ಅವರು ಡೈಲಾಗ್ ಬರೆಯಲಿದ್ದಾರೆ. ಭುವನ್ ಗೌಡ ಅವರು ಕ್ಯಾಮೆರಾ ಕೈ ಚಳಕ ತೋರಲಿದ್ದಾರೆ. ಜೋಶ್ವಾ ಶ್ರೀಧರ್ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. (ಚಿತ್ರಕೃಪೆ: ಭುವನ್ ಗೌಡ)