»   » 'ಎ' ಸರ್ಟಿಫಿಕೇಟ್‌ ಹಣೆಪಟ್ಟಿಯಿಂದ ರವಿ ಶ್ರೀವತ್ಸ ಮುಕ್ತ

'ಎ' ಸರ್ಟಿಫಿಕೇಟ್‌ ಹಣೆಪಟ್ಟಿಯಿಂದ ರವಿ ಶ್ರೀವತ್ಸ ಮುಕ್ತ

Posted By:
Subscribe to Filmibeat Kannada

'ಎ' ಸರ್ಟಿಫಿಕೇಟ್ ನಿರ್ದೇಶಕ ಎಂಬ ಹಣೆಪಟ್ಟಿಯಿಂದ ರವಿ ಶ್ರೀವತ್ಸ ಮುಕ್ತರಾಗಿದ್ದಾರೆ. ಇದೇ ಮೊದಲ ಬಾರಿಗೆ ಅವರ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಚಿತ್ರದ ಹೆಸರು ಕ್ರೇಜಿಸ್ಟಾರ್ ರವಿಚಂದ್ರನ್ ಮುಖ್ಯಭೂಮಿಕೆಯಲ್ಲಿರುವ ದಶಮುಖ.

ಈ ಹಿಂದೆ ರವಿ ಶ್ರೀವತ್ಸ ಆಕ್ಷನ್ ಕಟ್ ಹೇಳಿದ್ದ ಡೆಡ್ಲಿ ಸೋಮ, ರಾಜೀವ್ ಸೇರಿದಂತೆ ಮಾದೇಶ ಚಿತ್ರಗಳು ಸೆನ್ಸಾರ್‌ನಲ್ಲಿ 'ಎ' ಸರ್ಟಿಫಿಕೇಟ್ ಪಡೆದಿದ್ದವು. ಆದರೆ ದಶಮುಖ ಚಿತ್ರಕ್ಕೆ ಯು ಸರ್ಟಿಫಿಕೇಟ್ ಸಿಗಬೇಕಿತ್ತು. ಆದರೆ ಚಿತ್ರದಲ್ಲಿ ದೇವರಾಜ್ ಸಿಗರೇಟ್ ಸೇದುವ ಸೀನ್ ಇರುವ ಕಾರಣ ಯು/ಎ ಪ್ರಮಾಣ ಪತ್ರ ಸಿಕ್ಕಿದೆ.

ಸಿಗರೇಟನ್ನು ಕೈಯಲ್ಲಿ ಹಿಡಿದುಕೊಳ್ಳುವ ಹಾಗೂ ಸೇದುವ ಸೀನ್‌ಗಳಿಗೆ ಸೆನ್ಸಾರ್ ಮಂಡಳಿ ತೀವ್ರ ಆಕ್ಷೇಪಗಳನ್ನು ವ್ಯಕ್ತಪಡಿಸುತ್ತಿದೆ. ಈ ಹಿನ್ನೆಲೆಯಲ್ಲಿ ದಶಮುಖ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಈ ಚಿತ್ರದಲ್ಲಿ ರವಿಚಂದ್ರನ್ ಜೊತೆಗೆ ದೇವರಾಜ್, ಸರಿತಾ, ಅನಂತನಾಗ್, ಮಾಳವಿಕಾ, ಅವಿನಾಶ್, ದತ್ತಣ್ಣ, ಅಚ್ಯುತಕುಮಾರ್, ಸತೀಶ್ ಹಾಗೂ ರವಿಕಾಳೆ ಅಭಿನಯಿಸಿದ್ದಾರೆ. ಚಿತ್ರದ ನಿರ್ಮಾಪಕರು ಸೂರಪ್ಪ ಬಾಬು. (ಏಜೆನ್ಸೀಸ್)

English summary
Crazy Star Ravichandra lead Dashamukha, an action thriller has got a U/A certificate from the regional censor board directed by Ravi Srivatsa. For first time Ravi Srivatsa directed movie got U/A certificate. His all earlier movies got A certificate.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada