»   »  ಸಬ್ಸಿಡಿ ಚಿತ್ರಗಳ ಪಟ್ಟಿಯಲ್ಲಿ ಅವ್ವ, ಆ ದಿನಗಳಿಗೆ ಸ್ಥಾನ

ಸಬ್ಸಿಡಿ ಚಿತ್ರಗಳ ಪಟ್ಟಿಯಲ್ಲಿ ಅವ್ವ, ಆ ದಿನಗಳಿಗೆ ಸ್ಥಾನ

Subscribe to Filmibeat Kannada

ಇಪ್ಪತ್ತಾರು ಕನ್ನಡ ಚಲನಚಿತ್ರಗಳನ್ನು ಸಬ್ಸಿಡಿ ಆಯ್ಕೆ ಸಮಿತಿ ಗುಣಾತ್ಮಕ ಚಲನಚಿತ್ರಗಳೆಂದು ಆಯ್ಕೆ ಮಾಡಿದೆ. ನಿರೀಕ್ಷಿಸಿದಂತೆ ಪಟ್ಟಿಯಲ್ಲಿ ದಾಟು, ಜನಪದ, ಆ ದಿನಗಳು, ಮೀರಾ ಮಾದವ ರಾಘವ, ಅವ್ವ , ಪಲ್ಲಕ್ಕಿ, ಮಿಲನ, ಲಂಚ ಸಾಮ್ರಾಜ್ಯ, ಕರುನಾಡು, ಧೀಮಂತ ಮನುಷ್ಯ, ಕುಸುಮ, ಬಿರ್ಸೆ(ತುಳು), ಯುಗಯುಗಗಳೆಸಾಗಲಿ, ನಿನದೇ ನೆನಪು, ಅಮೃತವಾಣಿ, ಸ್ನೇಹಪರ್ವ, ಸೌಂದರ್ಯ, ಗಂಡನಮನೆ, ಈ ಪ್ರೀತಿ ಒಂಥರಾ, ನಾನು ಗಾಂಧಿ, ಲಡ್ಡು ಮುತ್ಯಾ, ಮಹಾ ಮಹಿಮೆ, ಕೈ ತುತ್ತು, ಬೆಳದಿಂಗಳಾಗಿ ಬಾ, ಶಿವಾನಿ, ಹೊಂಗನಸು ಮತ್ತು ಹನಿ ಹನಿ ಚಿತ್ರಗಳು ಸ್ಥಾನ ಪಡೆದಿವೆ.

ಜೊತೆಗೆ ಮಕ್ಕಳ ಚಲನಚಿತ್ರಗಳಾದ ಚಿಲಿಪಿಲಿ ಹಕ್ಕಿಗಳು, ಏಕಲವ್ಯ ಚಿತ್ರಗಳು ಸಬ್ಸಿಡಿಗೆ ಆಯ್ಕೆಯಾಗಿವೆ. ಐತಿಹಾಸಿಕ ಮತ್ತು ಪರಂಪರೆ ಕಥಾವಸ್ತುವುಳ್ಳ ಚಲನಚಿತ್ರಗಳಾದ ಶ್ರೀ ದಾನಮ್ಮದೇವಿ, ನವಶಕ್ತಿ ವೈಭವ, ರೇಣುಕಾಚಾರ್ಯ ಮಹಾತ್ಮೆ ಆಯ್ಕೆಗೊಂಡಿವೆ.26 ಗುಣಾತ್ಮಕ ಚಲನಚಿತ್ರಗಳಿಗೆ ತಲಾ 10 ಲಕ್ಷ ರೂಪಾಯಿಗಳಂತೆ, ಎರಡು ಮಕ್ಕಳ ಚಲನಚಿತ್ರಗಳಿಗೆ ತಲಾ 25 ಲಕ್ಷ ರೂಪಾಯಿಗಳಂತೆ ಹಾಗೂ ಮೂರು ಐತಿಹಾಸಿಕ ಪರಂಪರೆಯ ಕಥಾವಸ್ತುವುಳ್ಳ ಚಲನಚಿತ್ರಗಳಿಗೆ ತಲಾ 25 ಲಕ್ಷ ರೂಪಾಯಿಗಳಂತೆ ಧನ ಸಹಾಯ ನೀಡಲು ಸರ್ಕಾರವು ಮಂಜೂರಾತಿ ನೀಡಿರುತ್ತದೆ .

2007-08ನೇ ಸಾಲಿನ ಗುಣಾತ್ಮಕ ಚಲನಚಿತ್ರಗಳ ಆಯ್ಕೆ ಸಲಹಾ ಸಮಿತಿಯು ಈ 26 ಗುಣಾತ್ಮಕ ಚಲನಚಿತ್ರಗಳನ್ನು ಹಾಗೂ ಎರಡು ಮಕ್ಕಳ ಚಿತ್ರಗಳು ಮತ್ತು ಮೂರು ಐತಿಹಾಸಿಕ ಮತ್ತು ಪರಂಪರೆಯ ಕಥಾವಸ್ತುವುಳ್ಳ ಚಲನಚಿತ್ರಗಳನ್ನು ಆಯ್ಕೆ ಮಾಡಿದೆ. ಈ ಸಮಿತಿಯ ಶಿಫಾರಸ್ಸಿನಂತೆ ಸರ್ಕಾರದಿಂದ ಸಹಾಯಧನವನ್ನು ಬಿಡುಗಡೆ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada