»   » ಕನ್ನಡದ ಅತಿಹೆಚ್ಚು ಬಜೆಟ್ ಚಿತ್ರ 'ಆಪ್ತ ರಕ್ಷಕ'

ಕನ್ನಡದ ಅತಿಹೆಚ್ಚು ಬಜೆಟ್ ಚಿತ್ರ 'ಆಪ್ತ ರಕ್ಷಕ'

Posted By:
Subscribe to Filmibeat Kannada

ವಿಷ್ಣುವರ್ಧನ್, ವಿಮಲಾ ರಾಮನ್, ಅವಿನಾಶ್, ಲಕ್ಷ್ಮಿ ಗೋಪಾಲಸ್ವಾಮಿ ಮತ್ತು ಕೋಮಲ್ ಅಭಿನಯದ 'ಆಪ್ತ ರಕ್ಷಕ' ಚಿತ್ರ 2010ರ ಜನವರಿಗೆ ಬಿಡುಗಡೆಯಾಗಲಿದೆ. ಪಿ ವಾಸು ನಿರ್ದೇಶಿರುವ 'ಆಪ್ತ ರಕ್ಷಕ' ಚಿತ್ರ ಸದ್ಯಕ್ಕೆ ನಿರ್ಮಾಣ ನಂತರದ ಕಾರ್ಯಗಳಲ್ಲಿ ತೊಡಗಿಕೊಂಡಿದೆ.

''ಕನ್ನಡದ ಮಟ್ಟಿಗೆ ಅತಿ ಹೆಚ್ಚು ಬಜೆಟ್ ಚಿತ್ರ ಎಂಬ ಹೆಗ್ಗಳಿಕೆಗೆ 'ಆಪ್ತ ರಕ್ಷಕ' ಪಾತ್ರವಾಗಿದೆ. ಈ ಚಿತ್ರವನ್ನು ರು.8 ಕೋಟಿ ಬಜೆಟ್ ನಲ್ಲಿ ನಿರ್ಮಿಸಲಾಗಿದೆ. ಮೈನವಿರೇಳಿಸುವ ಕ್ಲೈಮ್ಯಾಕ್ಸ್ ಸನ್ನಿವೇಶಕ್ಕೆ ಕಂಪ್ಯೂಟರ್ ಗ್ರಾಫಿಕ್ಸ್ ಅಳವಡಿಸಲಾಗಿದೆ. ಚಿತ್ರದಲ್ಲಿನ ದೃಶ್ಯ ವೈಭವ ಅದ್ಭುತವಾಗಿದೆ'' ಎಂದು ವಾಸು ವಿವರ ನೀಡಿದ್ದಾರೆ. 2004ರಲ್ಲಿ ಕನ್ನಡ ಚಿತ್ರರಂಗದಲ್ಲಿ ಅದ್ಭುತ ಯಶಸ್ಸು ದಾಖಲಿಸಿದ ಆಪ್ತಮಿತ್ರ ಚಿತ್ರದ ಮುಂದಿನ ಭಾಗ ಆಪ್ತ ರಕ್ಷಕ.

'ಆಪ್ತ ಮಿತ್ರ' ಚಿತ್ರಕ್ಕಿಂತಲೂ ಭಿನ್ನವಾಗಿದೆ 'ಆಪ್ತ ರಕ್ಷಕ'. ಇದನ್ನು ಆಪ್ತಮಿತ್ರ ಚಿತ್ರದ ಮುಂದುವರಿದ ಭಾಗ ಎಂದು ಹೇಳಲು ಸಾಧ್ಯವಿಲ್ಲ. ಮೂಲ ಚಿತ್ರದ ಎರಡು ಕೊಂಡಿಗಳು 'ಆಪ್ತ ರಕ್ಷಕ'ನಲ್ಲಿವೆ. ಮೂಲ ಚಿತ್ರದಲ್ಲಿನ ನನ್ನ ಹಾಗೂ ಅವಿನಾಶ್ ಪಾತ್ರಗಳು ಇಲ್ಲೂ ಇವೆ. ಉಳಿದ ಪಾತ್ರಗಳಾದ ಶ್ರೀನಿವಾಸ ಮೂರ್ತಿ, ಕೋಮಲ್ ಮತ್ತು ರಮೇಶ್ ಭಟ್ ಪಾತ್ರಗಳು ಹೊಸದಾಗಿವೆ. ಚಿತ್ರದಲ್ಲಿ ಐದು ಮಹಿಳಾ ಪಾತ್ರಗಳಿವೆ ಎನ್ನುತ್ತಾರೆ ವಿಷ್ಣು. ಒಟ್ಟಿನಲ್ಲಿ ಆಪ್ತ ರಕ್ಷಕ ತೀವ್ರ ಕುತೂಹಲ ಕೆರಳಿಸಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada