»   »  ಕ್ರೇಜಿ ಸ್ಟಾರ್ ರವಿಚಂದ್ರನ್ ಗೆ ಹುಟ್ಟುಹಬ್ಬದ ಸಂಭ್ರಮ

ಕ್ರೇಜಿ ಸ್ಟಾರ್ ರವಿಚಂದ್ರನ್ ಗೆ ಹುಟ್ಟುಹಬ್ಬದ ಸಂಭ್ರಮ

Subscribe to Filmibeat Kannada
Ravichandran celebrates 49th birthday
ಕ್ರೇಜಿ ಸ್ಟಾರ್ ರವಿಚಂದ್ರನ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಶನಿವಾರ(ಮೇ.30) ಅವರು 49ನೇ ವಸಂತಕ್ಕೆ ಅಡಿಯಿಟ್ಟರು. ಬೆಂಗಳೂರು ರಾಜಾಜಿನಗರದ ಮನೆಯ ಮುಂದೆ ಅಪಾರ ಅಭಿಮಾನಿಗಳ ಸಂಭ್ರಮ, ಸಡಗರ ಮುಗಿಲು ಮುಟ್ಟಿತ್ತು. ರವಿಚಂದ್ರನ್ ಅಭಿಮಾನಿಗಳ ಸಮ್ಮುಖದಲ್ಲಿ ತಮ್ಮ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕಆಚರಿಸಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ರವಿಚಂದ್ರನ್, ನನ್ನ ಹೆಂಡತಿ, ಮಕ್ಕಳು ರಾತ್ರಿ 12 ಗಂಟೆಗೆ ನನ್ನ ಹುಟ್ಟುಹಬ್ಬವನ್ನು ಆಚರಿಸಿದರು. ಕನಸುಗಾರ ರವಿಚಂದ್ರನ್ ಅವರ ಮುಂದಿನ ಕನಸೇನು ಎಂದು ಕೇಳಿದರೆ, ಸದ್ಯಕ್ಕೆ ಮಂಜಿನ ಹನಿ ದೊಡ್ಡ ಕನಸು. ಆ ಚಿತ್ರ ಮುಗಿದ ನಂತರ ಮುಂದಿನ ಕನಸು. ಮಂಜಿನ ಹನಿ ಚಿತ್ರೀಕರಣ ಅರ್ಧ ಮುಗಿದಿದೆ ಎಂದರು.

ರವಿಚಂದ್ರನ್ ಗೆ ವಯಸ್ಸಾಗುತ್ತಿದೆ ಅನ್ನಿಸುವುದಿಲ್ಲವೇ ಎಂಬ ಪ್ರಶ್ನೆಗೆ ರವಿ ಉತ್ತರಿಸಿದ್ದ್ದು ಹೀಗೆ... ರವಿಗೆ ವಯಸ್ಸು ಯಾವತ್ತು ಆಗುವುದಿಲ್ಲ. ನನಗೆ ವಯಸ್ಸಿನ ಬಗ್ಗೆ ಯಾವುದೇ ಭಯನೂ ಇಲ್ಲ ಎಂದರು. ಈ ಹುಟ್ಟುಹಬ್ಬದ ದಿನ ನೀವು ಕೊಡುವ ಸಂದೇಶ? ಹುಟ್ಟುಹಬ್ಬ ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಲು ಒಂದು ನೆಪ ಮಾತ್ರ ಅಷ್ಟೆ ಎಂದು ಪ್ರತಿಕ್ರಿಯಿಸಿದರು.

''ಸಿನಿಮಾ ಸಿನಿಮಾ ಸಿನಿಮಾ...ಇದು ಬಿಟ್ಟು ನನಗೆ ಬೇರೆ ಏನು ಗೊತ್ತಿಲ್ಲ. ಹುಟ್ಟುಹಬ್ಬ ಎಲ್ಲ ನನ್ನ ಅಭಿಮಾನಿಗಳಿಗೆ,ನನಗಲ್ಲ. ಯಾವತ್ತೂ ಖುಷಿಯಾಗಿರಿ, ನಗುನಗುತ್ತಾ ಬಾಳಿರಿ, ಎಲ್ಲರನ್ನೂ ಪ್ರೇಮಿಸಿ...'' ಇದು ರವಿಚಂದ್ರನ್ ತಮ್ಮ ಹುಟ್ಟುಹಬ್ಬದ ದಿನ ಕೊಟ್ಟಂತಹ ಸಂದೇಶ. ಮಂಜಿನ ಹನಿ ಚಿತ್ರೀಕರಣಕ್ಕಾಗಿ ಮುಂದಿನ ತಿಂಗಳು ಸಕಲೇಶಪುರಕ್ಕೆ ಹೋಗುತ್ತಿದ್ದೇನೆ. ಸದ್ಯಕ್ಕೆ ಅದೊಂದೇ ನನ್ನ ಮುಂದಿರುವ ದೊಡ್ಡ ಕನಸು, ಗುರಿ ಎಂದು ರವಿ ಮಾತಿಗೆ ವಿರಾಮ ಕೊಟ್ಟರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada