»   »  ಹಿಂದಿ ಸೈನೈಡ್ ನಲ್ಲಿ ನಟಿಸಲು ಅಮಿತಾಬ್ ನಕಾರ

ಹಿಂದಿ ಸೈನೈಡ್ ನಲ್ಲಿ ನಟಿಸಲು ಅಮಿತಾಬ್ ನಕಾರ

Subscribe to Filmibeat Kannada
Movie still Cyanide
ತಮ್ಮ 'ಸೈನೈಡ್' ಚಿತ್ರವನ್ನು ಹಿಂದಿ ಭಾಷೆಗೆ ಮಾಡುವ ಸಾಹಸಕ್ಕೆ ಎ ಎಂ ಆರ್ ರಮೇಶ್ ಕೈಹಾಕಿದ್ದರು. ಆದರೆ ಈಗ ಆ ಯೋಜನೆ ಕೊಂಚ ತಡವಾಗಲಿದೆ. ಕಾರಣ ಸೈನೈಡ್ ಹಿಂದಿ ಅವತರಣಿಕೆಯಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ನಟಿಸುವುದಿಲ್ಲವಂತೆ.

ಆ ಕಾರಣಕ್ಕಾಗಿ ಹಿಂದಿ ಸೈನೈಡ್ ಚಿತ್ರದ ತಾರಾಬಳಗವನ್ನು ಕೊಂಚ ಬದಲಾಯಿಸುವಲ್ಲಿ ರಮೇಶ್ ಬ್ಯುಸಿಯಾಗಿದ್ದಾರೆ. ಅಮಿತಾಬ್ ಬಚ್ಚನ್ ಈ ಚಿತ್ರದಲ್ಲಿ ನಟಿಸಲು ನಿರಾಕರಿಸಿಸಲು ಕಾರಣ ಕೇಳಿದ್ದಕ್ಕೆ ಅವರು ಹೀಗೆಂದರಂತೆ, ''ರಾಜೀವ್ ಗಾಂಧಿ ಕುಟುಂಬದ ಕತೆಯುಳ್ಳ ಯಾವುದೇ ಚಿತ್ರದಲ್ಲೂ ತಾವು ನಟಿಸುವುದಿಲ್ಲ'' ಎಂದು ಅಮಿತಾಬ್ ಖಂಡತುಂಡವಾಗಿ ಹೇಳಿದರಂತೆ.

ಹಾಗಾಗಿ ಎ ಎಂ ಆರ್ ರಮೇಶ್ ವಿಧಿ ಇಲ್ಲದೆ ಓಂ ಪುರಿ, ಸಹಿ ಗೋಸ್ವಾಮಿ, ಸೀಮಾ ಬಿಸ್ವಾಸ್ ರನ್ನು ಆಯ್ಕೆ ಮಾಡಿರುವುದಾಗಿ ತಿಳಿಸಿದರು. ಪ್ರಸ್ತುತ ಅವರು ನಿರ್ದೇಶಿಸುತ್ತಿರುವ ದ್ವಿಭಾಷಾ ಪೊಲೀಸ್ ಕ್ವಾರ್ಟರ್ಸ್ ಚಿತ್ರ ಪೂರ್ಣವಾದ ಬಳಿಕ ಹಿಂದಿಯ ಸೈನೈಡ್ ನ್ನು ಕೈಗೆತ್ತಿಕೊಳ್ಳಲಿದ್ದಾರೆ. ಕಾಡುಗಳ್ಳ, ನರಹಂತಕ ವೀರಪ್ಪನ್ ಕುರಿತ ಚಿತ್ರ ತೆಗೆಯುವ ಯೋಚನೆಯೂ ರಮೇಶ್ ತಲೆಯಲ್ಲಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಇದನ್ನೂ ಓದಿ
ಸೈನೈಡ್ ಖ್ಯಾತಿಯ ರಮೇಶ್ ರ ಪೊಲೀಸ್ ಕ್ವಾರ್ಟರ್ಸ್
ಹಿಂದಿಯ 'ಸೈನೈಡ್‌"ನಲ್ಲಿ ಅಮಿತಾಭ್‌, ನಾನಾ ಗ್ಯಾರಂಟಿ
'ಸೈನೈಡ್‌" ಮುಗೀತು! ಇನ್ಮುಂದೆ ವೀರಪ್ಪನ್‌ಬೇಟೆ!

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada