For Quick Alerts
  ALLOW NOTIFICATIONS  
  For Daily Alerts

  ಅಣ್ಣಾಬಾಂಡ್ ಆರ್ಭಟಕ್ಕೆ ಗೋವಿಂದಾಯ ನಮಃ ಬಲಿ?

  |
  <ul id="pagination-digg"><li class="next"><a href="/news/30-annabond-movie-release-govindaya-namaha-out-aid0172.html">Next »</a></li></ul>

  ಮತ್ತೆ ಸ್ಯಾಂಡಲ್ ವುಡ್ ನಲ್ಲಿ ಅನ್ಯಾಯದ ಕೂಗು ಕೇಳಿಬರುತ್ತಿದೆ. ದೊಡ್ಡ ಬ್ಯಾನರ್ ಚಿತ್ರವೊಂದು ತೆರೆಗೆ ಬರುವಾಗ ಅದೇ ದಿನ ಬರಲಿರುವ ಚಿಕ್ಕ ಬ್ಯಾನರ್ ಚಿತ್ರಗಳನ್ನು ಬರದಂತೆ ಮಾಡುವುದಲ್ಲದೇ ಈಗಾಗಲೇ ಯಶಸ್ವಿಯಾಗಿ ಪ್ರದರ್ಶನವಾಗುತ್ತಿರುವ ಚಿತ್ರದ ಚಿತ್ರಮಂದಿರವನ್ನೂ ನುಂಗಿ ನೀರು ಕುಡಿಯುವುದು ಕನ್ನಡ ಚಿತ್ರರಂಗದ ದುರಾದೃಷ್ಟ ಎಂದೇ ಬಿಂಬಿಸಲಾಗುತ್ತಿದೆ. ಈಗ ಅಣ್ಣಾಬಾಂಡ್ ಚಿತ್ರದಿಂದ ಗೋವಿಂದಾಯ ನಮಃ ಚಿತ್ರಕ್ಕೆ ಅದೇ ದುರ್ಗತಿ ಒದಗಿದೆ ಎನ್ನಲಾಗಿದೆ.

  ನಾಳೆ (ಮೇ 1, 2012) ಬಿಡುಗಡೆಯಾಗಲಿರುವ ಅಣ್ಣಾಬಾಂಡ್ ಚಿತ್ರಕ್ಕೆ ದಾರಿ ಮಾಡಿಕೊಡುವ ಉದ್ದೇಶದಿಂದ ಚಿತ್ರಮಂದಿರಗಳ ಮಾಲೀಕರು ಚೆನ್ನಾಗಿ ಪ್ರದರ್ಶನವಾಗುತ್ತಿದ್ದ ಕೋಮಲ್ ಅಭಿನಯದ 'ಗೋವಿಂದಾಯ ನಮಃ' ಚಿತ್ರವನ್ನು ಕಿತ್ತು ಹಾಕಲಿದ್ದಾರೆ. ಇದಕ್ಕೆ ಗೋವಿಂದಾಯ ನಮಃ ಚಿತ್ರದ ನಿರ್ಮಾಪಕ ಸುರೇಶ್ ಬಾಬು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ತೀವ್ರ ಪ್ರತಿಭಟನೆ ಮಾಡಲಾಗುವುದೆಂದೂ ಹೇಳಿದ್ದಾರೆ.

  "ಈ ಬೆಳವಣಿಗೆ ಕೆಎಫ್ ಸಿಸಿ ನಿಯಮಕ್ಕೆ ವಿರುದ್ಧವಾಗಿದೆ. ಥಿಯೇಟರ್ ಬಾಡಿಗೆ ಹಾಗೂ ನಿರ್ಮಾಪಕರ ಷೇರುಗಳು ಬರುತ್ತಿರುವಾಗ ಚಿತ್ರವನ್ನು ಕಿತ್ತುಹಾಕುವಂತಿಲ್ಲ. ನಮ್ಮ ಗೋವಿಂದಾಯ ನಮಃ ಚಿತ್ರದಿಂದ ನನಗೆ 4 ಲಕ್ಷ ಷೇರುಗಳು ಬರುತ್ತಿವೆ. ಹೀಗಿರುವಾಗ ನಮಗೆ ಅನ್ಯಾಯವಾಗಿದೆ. ನ್ಯಾಯ ಹೇಳಬೇಕಾಗಿರುವವರಿಂದಲೇ ಅನ್ಯಾಯವಾದರೆ ಹೇಗೆ?" ಎಂದು ಸುರೇಶ್ ಬಾಬು ಅವಲತ್ತುಕೊಂಡಿದ್ದಾರೆ. ಮುಂದಿನ ಪುಟ ನೋಡಿ...

  <ul id="pagination-digg"><li class="next"><a href="/news/30-annabond-movie-release-govindaya-namaha-out-aid0172.html">Next »</a></li></ul>
  English summary
  Govindaya Namaha is being replaced by Puneet Rajkumar starrer Anna Bond in major theatres, which has irked the makers of Komal starrer film&#13; &#13;

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X