For Quick Alerts
ALLOW NOTIFICATIONS  
For Daily Alerts

  ನಟಿ ಪ್ರಿಯಾಂಕಾ ಚಂದ್ರ ಗೌರಿ-ಗಣೇಶ ಹಬ್ಬದ ಸಂಭ್ರಮ

  |
  <ul id="pagination-digg"><li class="next"><a href="/news/30-heroine-priyanka-chandra-gowri-ganesh-celebration-aid0172.html">Next »</a></li></ul>
  ಗೌರಿ ಗಣೇಶ ಹಬ್ಬವನ್ನು ದೇಶದಾದ್ಯಂತ ಆಚರಿಸುವ ಜೊತೆಗೆ ನಮ್ಮ ನಾಡಿನಲ್ಲೂ ವಿಜೃಂಭಣೆಯಿಂದ ಆಚರಿಸುತ್ತಾರೆ. ರಾಷ್ಟ್ರೀಯ ಹಬ್ಬ ದೀಪಾವಳಿಯಷ್ಟೇ ಪ್ರಾಮುಖ್ಯತೆ ಪಡೆದಿದೆ ಈ ಗೌರಿ-ಗಣೇಶ ಹಬ್ಬ. ಸಮಾಜದ ಎಲ್ಲ ವರ್ಗದ ಜನರೂ ಆಚರಿಸುವ ಈ ಹಬ್ಬವನ್ನು ನಮ್ಮ ಕನ್ನಡ ಚಿತ್ರರಂಗದ ಸೆಲಿಬ್ರಟಿಗಳು ಹೇಗೆ ಆಚರಿಸಬಹುದೆಂಬ ಕತೂಹಲ ಎಲ್ಲರಿಗೂ ಸಹಜ ತಾನೇ!

  ಈಗಾಗಲೇ ನಾಯಕಿಯಾಗಿ ಕನ್ನಡ ಹಾಗೂ ತಮಿಳು ಚಿತ್ರರಂಗದಲ್ಲಿ ಹೆಸರು ಮಾಡಿರುವ ನಟಿ ಪ್ರಿಯಾಂಕಾ ಚಂದ್ರ ಮನೆಯಲ್ಲಿ ಗೌರಿ-ಗಣೇಶ ಹಬ್ಬವನ್ನು ಹೇಗೆ ಆಚರಿಸುತ್ತಾರೆ ಎಂಬ ಕುತೂಹಲದಿಂದ ಕೇಳಿದಾಗ ಅವರಿಂದ ಬಂದ ಉತ್ತರ ಇಲ್ಲಿದೆ...

  "ಹಬ್ಬದ ದಿನಕ್ಕೆ ಮೂರು ದಿನ ಮುಂಚೆ ಹಬ್ಬದ ವಾತಾವರಣ ನಿರ್ಮಾಣವಾಗುತ್ತೆ. ಹಬ್ಬಕ್ಕೆ ಬೇಕಾಗುವ ಸಾಮಾನುಗಳು ಹಾಗೂ ನಮಗೆ ಬೇಕಾಗುವ ಬಟ್ಟೆ-ಬರೆಗಳನ್ನೆಲ್ಲಾ ಅಂಗಡಿಯಿಂದ ಅಂಗಡಿಗೆ ಸುತ್ತಾಡಿ ಖರೀದಿ ಮಾಡುತ್ತೇವೆ. ಹೂವು, ಹಣ್ಣು, ಸಿಹಿತಿಂಡಿಗಳ ಖರೀದಿ ಜಾಸ್ತಿ.

  ಹಬ್ಬದ ಹಿಂದಿನ ದಿನ ಗೌರಿ-ಗಣೇಶನನ್ನು ತರುವಾಗ ಮನೆಯವರೆಲ್ಲ ಒಟ್ಟಿಗೆ ಹೋಗುತ್ತೇವೆ. ರೇಷ್ಮೆ ಸೀರೆಯುಟ್ಟು, ಆಭರಣ ತೊಟ್ಟು ಅಲಂಕಾರ ಮಾಡಿಕೊಂಡ ನಾವು ಬಹುಶಃ ಗೌರಿಯಂತೆ ಕಾಣಿಸಬಹುದು. ಅಕ್ಕಿ ತುಂಬಿದ ತಟ್ಟೆಯಲ್ಲಿ ತಂದಿರುವ ಗೌರಿ-ಗಣೇಶನಿಗೆ ಅರಿಶಿಣ-ಕುಂಕುಮ ಬೆರೆಸಿದ ನೀರಿನಲ್ಲಿ ದೀಪ ಇಟ್ಟು ಆರತಿ ಎತ್ತಿ ಮನೆಯೊಳಗೆ ಬರಮಾಡಿಕೊಳ್ಳುತ್ತೇವೆ.

  ಸಾಯಂಕಾಲ ಇಬ್ಬರಿಗೂ ಒಟ್ಟಿಗೆ ಪೂಜೆ ಮಾಡುತ್ತೇವೆ. (ಅಮ್ಮ-ಮಗನಿಗೆ ಬೇರೆ ಬೇರೆ ಪೂಜೆ ಮಾಡಿದರೆ ಕೋಪ ಬರುಬಹುದಲ್ಲ!). ಈ ರಾತ್ರಿಯ ಪೂಜೆಗೆ ಮಾರ್ಕೆಟ್ ನಿಂದ ತಂದಿರುವ ಹೂವು-ಹಣ್ಣು-ಸ್ವೀಟ್ಸ್ ಮಾತ್ರ ಉಪಯೋಗಿಸುತ್ತೇವೆ.

  ತಡರಾತ್ರಿಯವರೆಗೂ ಗೌರಿ-ಗಣೇಶನನ್ನು ನೋಡುತ್ತಾ ನಿದ್ದೆ ಮಾಡುವುದನ್ನೇ ಮರೆಯುತ್ತೇವೆ. ಏಕೆಂದರೆ ಮನೆಯವರೆಲ್ಲ ಹೇಳಿದರೂ ನಾನು ಚಿಕ್ಕ ಗೌರಿ-ಗಣೇಶ ಮೂರ್ತಿಯನ್ನು ತರಲು ಸುತಾರಾಂ ಒಪ್ಪುವುದಿಲ್ಲ, ದೊಡ್ಡದೇ ಬೇಕೆಂದು ಹಟ ಹಿಡಿಯುತ್ತೇನೆ. ಹಾಗಾಗಿ ನಾನು ಇಷ್ಟಪಟ್ಟು ತಂದಿರುವುದರಿಂದ ಎಷ್ಟು ಸಾರಿ ನೋಡಿದರೂ ಮತ್ತೆ ಮತ್ತೆ ನೋಡಬೇಕೆನಿಸುತ್ತದೆ.

  ಮರುದಿನ ಅವರು ಗಣೇಶ ಹಬ್ಬ ಹೇಗೆ ಆಚರಿಸುತ್ತಾರೆ ಎಂಬುದು ಮುಂದಿನ ಪುಟದಲ್ಲಿದೆ, ನೋಡಿ...

  <ul id="pagination-digg"><li class="next"><a href="/news/30-heroine-priyanka-chandra-gowri-ganesh-celebration-aid0172.html">Next »</a></li></ul>

  English summary
  We are all celebrating Gowri-Ganesha Festival around the nation as well as our state. There is curiosity for everybody, how it is celebrating by heroines of Sandlwood. Here is Details about celebration this, by Upcoming Artist Priyanka Chandra. &#13; &#13;

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more