»   » ಕೆಎಫ್ ಸಿಸಿ ಡಬ್ಬಿಂಗ್‌ಗೆ ಅನುಮತಿ ನೀಡಲಿ...!

ಕೆಎಫ್ ಸಿಸಿ ಡಬ್ಬಿಂಗ್‌ಗೆ ಅನುಮತಿ ನೀಡಲಿ...!

Posted By: * ಎಮ್.ಎಮ್.ಆರ್.ಬೆಂಗಳೂರು
Subscribe to Filmibeat Kannada

ಡಾ. ರಾಜಕುಮಾರ್, ಶಂಕರನಾಗ್ ಕಾಲದಲ್ಲಿ ಆಗಿನ ಪರಿಸ್ಥಿತಿಗೆ ಅನುಗುಣವಾಗಿ ಮೀಸಲಾಗಿದ್ದ ಡಬ್ಬಿಂಗ್ ಮೇಲಿನ ನಿಷೇಧವನ್ನು ತೆರವುಗೊಳಿಸಲು ಇದು ಸಕಾಲ. ರಾಜ್ಯದಲ್ಲಿ ನಡೆಯುತ್ತಿರುವ ರಾವಣನ ರಂಪಾಟದಿಂದ ಈ ಅಂಶ ಸ್ಪಷ್ಟವಾಗುತ್ತದೆ.

ಪರಭಾಷೆಯ ದೊಡ್ದ ಚಿತ್ರಗಳ ಬಿಡುಗಡೆ ಸಂಧರ್ಭದಲ್ಲಿ ಇದು ಸಹಕಾರಿಯಾಗುತ್ತದೆ. ಹೇಗೆಂದರೆ ಒಂದು ವೇಳೆ ಇದೇ 'ರಾವಣ್' ಚಿತ್ರ ಡಬ್ ಆಗಿದ್ದಿದ್ದರೆ ಜನರು ಕನ್ನಡದಲ್ಲೇ ಅದನ್ನು ನೋಡಬಹುದಿತ್ತು.

ಆದರೆ ಈಗ ರಾವಣ ಚಿತ್ರದವರು ಕೊಟ್ಟ ಪಬ್ಲಿಸಿಟಿಗೆ ಜನ ನೂರೆಂಟು ಭಾಷೆಯಲ್ಲೆಲ್ಲ ನೋಡ್ತಾ ಇದ್ದಾರೆ. ಇಲ್ಲಿ ಒಂದು ಅಂಶ ಅಂತೂ ಸ್ಪಷ್ಟ. ಡಬ್ಬಿಂಗ್ ನಿಷೇಧದಿಂದ ಒಂದು ವಿಧದಲ್ಲಿ ಅವಲೋಕಿಸಿದಾಗ ಜನರು ಕನ್ನಡದಿಂದ ದೂರ ಸರಿಯುತ್ತಿದ್ದಾರೆ.

ಪರಿಣಾಮವಾಗಿ ಕನ್ನಡ ಚಿತ್ರರಂಗದಿಂದ ಕೂಡ. ಜನರು ಕನ್ನಡಕ್ಕೆ ಹತ್ತಿರವಾದಾಗ ಮಾತ್ರ ಕನ್ನಡ ಚಿತ್ರಗಳಿಗೆ ಹತ್ತಿರ ಆಗಲೂ ಸಾದ್ಯ. ಈ ನಿಟ್ಟಿನಲ್ಲಿ ಡಬ್ಬಿಂಗ್‌ಗೆ ಅವಕಾಶ ಕೊಡುವುದು ಉತ್ತಮ. ಹಾಗಂತ ಸಿಕ್ಕಿದ್ದೆಲ್ಲ ಚಿತ್ರಗಳಿಗೆ ಅವಕಾಶ ಕೊಡದೇ ಅದಕ್ಕೂ ಒಂದು ನೀತಿ ನಿಯಮಗಳನ್ನು ರೂಪಿಸಬೇಕು.

ದೊಡ್ದ ಬಜೆಟ್ಟಿನ, ಕನ್ನಡ ಚಿತ್ರಗಳಿಗೆ ಹಾನಿ ಮಾಡಬಲ್ಲ, ಕನ್ನಡ ಚಿತ್ರಗಳ ಮಾರುಕಟ್ಟೆಯನ್ನು ಕಸಿದುಕೊಳ್ಳುವ ಭೀತಿ ಇರುವ ಚಿತ್ರಗಳನ್ನು ಮಾತ್ರ ಡಬ್ಬಿಂಗ್ ಮಾಡಿ, ಅದರನ್ವಯ ನಮ್ಮ ಕಲಾವಿದರಿಗೆ ಅಗ್ರ ಸ್ಥಾನ ದೊರಕಿಸಿಕೊಟ್ಟು, ಕನ್ನಡದ ಬೆಳವಣಿಗೆಗೂ ಕಾರಣವಾಗಬೇಕು.

ಈ ನಿಟ್ಟಿನಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ(ಕೆಎಫ್ ಸಿಸಿ) ಒಂದಿಷ್ಟು ಚಿಂತನೆ ನಡೆಸಬೇಕಾಗಿರುವುದು ಇಂದಿನ ಅಗತ್ಯ ಕೂಡ ಹೌದು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada