For Quick Alerts
  ALLOW NOTIFICATIONS  
  For Daily Alerts

  ಭಾವಚಿತ್ರ ಹರಿದು ಹಾಕಿ ವಿಷ್ಣುವರ್ಧನ್‌ಗೆ ಅವಮಾನ

  By Prasad
  |

  ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಚೇರಿಯಲ್ಲಿ ಯಾರೋ ಕಿಡಿಗೇಡಿಗಳು ಸಾಹಸಸಿಂಹ ದಿ. ವಿಷ್ಣುವರ್ಧನ್ ಅವರ ಭಾವಚಿತ್ರವನ್ನು ಹರಿದುಹಾಕಿ ಅವಮಾನಿಸಿದ್ದಾರೆ. ಇದರ ಪರಿಣಾಮ ಶುಕ್ರವಾರ ಮಂಡಳಿ ಕಚೇರಿಯಲ್ಲಿ ಉದ್ರಿಕ್ತ ವಾತಾವರಣ ಸೃಷ್ಟಿಯಾಗಿತ್ತು.

  ಈ ಸುದ್ದಿ ತಿಳಿಯುತ್ತಿದ್ದಂತೆ ಮಂಡಳಿಯ ಕಚೇರಿಯ ಮುಂದೆ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ ವಿಷ್ಣುವರ್ಧನ್ ಅಭಿಮಾನಿಗಳು ವಾಣಿಜ್ಯ ಮಂಡಳಿಯ ವಿರುದ್ಧ ಘೋಷಣೆಗಳನ್ನು ಕೂಗಿ, ಮಂಡಳಿಯ ಅಧ್ಯಕ್ಷ ಕೆವಿ ಚಂದ್ರಶೇಖರ್ ವಿರುದ್ಧ ಧಿಕ್ಕಾರ ಕೂಗಿದರು.

  ವಿಷ್ಣು ಅಭಿಮಾನಿಗಳಿಗೆ ಈ ಘಟನೆ ಕುರಿತಂತೆ ಸ್ಪಷ್ಟನೆ ನೀಡಿ, ಅವರನ್ನು ಸಾಂತ್ವನಗೊಳಿಸುವಲ್ಲಿ ಮಂಡಳಿ ಸದಸ್ಯರು ಹರಸಾಹಸಪಡಬೇಕಾಯಿತು. ತಮ್ಮ ಆರಾಧ್ಯ ದೈವವನ್ನು ಅಪಮಾನಿಸಿದ್ದಕ್ಕಾಗಿ ಕೋಪೋದ್ರಿಕ್ತರಾಗಿದ್ದ ಅಭಿಮಾನಿಗಳು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರನ್ನು ಕೂಡ ದಾಖಲಿಸಿದ್ದಾರೆ.

  ವಿಷ್ಣುವರ್ಧನ್ ಅವರ ಭಾವಚಿತ್ರ ಹರಿದ ಘಟನೆ ಬಗ್ಗೆ ವಿಷಾದಿಸಿರುವ ಕೆವಿ ಚಂದ್ರಶೇಖರ್ ಅವರು, ಕಿಡಿಗೇಡಿಗಳನ್ನು ಗುರುತಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು ಮತ್ತು ಬೇರೆ ಭಾವಚಿತ್ರವನ್ನು ಮಂಡಳಿಯ ಕಚೇರಿಯಲ್ಲಿ ಹಾಕುವುದಾಗಿ ವಾಗ್ದಾನ ನೀಡಿದರು.

  English summary
  Unknown miscreants tear off Late Vishnuvardhan's portrait at Karnataka film chamber of commerce. KFCC president has assured fans of Vishnu to replace torn portrait. A case has been registered at High Ground Police Station, Bangalore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X