twitter
    For Quick Alerts
    ALLOW NOTIFICATIONS  
    For Daily Alerts

    ಯೂ ಟ್ಯೂಬ್ ನಲ್ಲಿ ದೇವ್, ಸನ್ ಆಫ್ ಮುದ್ದೇಗೌಡ

    |

    ದಿಗಂತ್, ಚಾರ್ಮಿ ಹಾಗೂ ಅನಂತ್ ನಾಗ್ ತಾರಾಗಣ, ಇಂದ್ರಜಿತ್ ಲಂಕೇಶ್ ನಿರ್ದೇಶನದ 'ದೇವ್, ಸನ್ ಆಫ್ ಮುದ್ದೇಗೌಡ' ಚಿತ್ರವು ಇನ್ನೂ ಒಂದು ಕಾರಣಕ್ಕೆ ಸುದ್ದಿಯಾಗಿದೆ. ಪಿಕೆ ಆನ್ ಲೈನ್ ಜೊತೆ ಕೈಜೋಡಿಸಿರುವ ಜಡೆ ಪ್ಲಾಂಟ್, ಈ ಚಿತ್ರವನ್ನು ಭಾರತ ಹೊರತುಪಡಿಸಿ ಜಗತ್ತಿನಾದ್ಯಂತ 'ಯೂ ಟ್ಯೂಬ್' ನಲ್ಲಿ ಬಿಡುಗಡೆ ಮಾಡಲಿದೆ.

    ಇಲ್ಲಿಯವೆರೆಗೆ ಕೇವಲ ಹಾಲಿವುಡ್ ಮತ್ತು ಬಾಲಿವುಡ್ ಚಿತ್ರಗಳು ಮಾತ್ರ ಬಿಡುಗಡೆ ಪೂರ್ವದಲ್ಲಿ 'ಯೂ ಟ್ಯೂಬ್' ನಲ್ಲಿ ಅಪ್ ಲೋಡ್ ಆಗುತ್ತಿದ್ದು ಆ ಜಾಗದಲ್ಲಿ ಪ್ರಾದೇಶಿಕ ಭಾಷೆಯ ಚಿತ್ರಗಳು ನೋಡಲು ಸಿಗುತ್ತಿರಲಿಲ್ಲ. ಆದರೆ ಕನ್ನಡದ ದೇವ್, ಸನ್ ಆಫ್ ಮುದ್ದೇ ಗೌಡ ಚಿತ್ರ ಅದನ್ನು ಬದಲಾಯಿಸಲಿದೆ. ಜೊತೆಗೆ ಚಿತ್ರಮಂದಿರದಿಂದ ಹೊರತಾದ ಗಳಿಕೆಗೂ ದಾರಿ ಕಂಡುಕೊಂಡಿದೆ.

    ಈ ಚಿತ್ರದ ವಿಡಿಯೋ, ಏಪ್ರಿಲ್ 6, 2012ರಿಂದ 'CineCurry"s' ಯೂ ಟ್ಯೂಬ್ ನಲ್ಲಿ $1 ಬಾಡಿಗೆ ಬೆಲೆಗೆ ಅಮೆರಿಕಾದಲ್ಲಿ ನೋಡಲು ಲಭ್ಯ. ಆದರೆ ಜಗತ್ತಿನ ಮಿಕ್ಕೆಲ್ಲ ದೇಶಗಳಲ್ಲಿ ಉಚಿತ ವೀಕ್ಷಣೆಗೆ ಅವಕಾಶವಿದೆ. ಸಿನಿಕರಿ ಎಂಟರ್ ಟೈನ್ ಮೆಂಟ್ ಬ್ರಾಂಡ್ ಮೂಲಕ ಈ ಅವಕಾಶವನ್ನು ಕನ್ನಡಿಗರು ಬಳಸಿಕೊಂಡಂತಾಗಿದೆ.

    ಈ ಮೂಲಕ ಇಂದ್ರಜಿತ್ ಅವರ ದೇವ್, ಸನ್ ಆಫ್ ಮುದ್ದೇ ಗೌಡ ಬಿಡುಗಡೆಗಿಂತ ಮೊದಲೇ ಹೆಚ್ಚಿನ ಗಳಿಕೆಗೆ ದಾರಿಯನ್ನೂ ಮಾಡಿಕೊಂಡಂತಾಗಿದೆ. ಏಪ್ರಿಲ್ 6, 2012ರಂದು ಈ ಚಿತ್ರ ಕರ್ನಾಟಕದಲ್ಲಿ ಬಿಡಗಡೆ ಆಗಲಿದೆ. ಚಿತ್ರ ಬಿಡುಗಡೆಗಿಂತ ಮೊದಲೇ ಪ್ರೀಮಿಯರ್ ಶೋ ರೀತಿಯಲ್ಲಿ ಇದು ಕೆಲಸ ಮಾಡಲಿರುವುದು ವಿಶೇಷ ಎನಿಸಿಕೊಂಡಿದೆ. (ಒನ್ ಇಂಡಿಯಾ ಕನ್ನಡ)

    English summary
    CineCurry, the entertainment brand owned by Percept Knorigin or PK Online has collaborated with Jade Plant Ventures producers to premiere a Kannada movie, ’Dev s/o Mudde Gowda‘ on movie streaming site, YouTube, worldwide except India.
 
    Friday, March 30, 2012, 13:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X