»   »  ನಾಗತಿಹಳ್ಳಿಯ ಸಂಸ್ಕೃತಿ ಹಬ್ಬ, ಶಿಬಿರ ಯಶಸ್ವಿ

ನಾಗತಿಹಳ್ಳಿಯ ಸಂಸ್ಕೃತಿ ಹಬ್ಬ, ಶಿಬಿರ ಯಶಸ್ವಿ

Subscribe to Filmibeat Kannada
Nagathihalli Chandrashekar
ಜನಪ್ರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ನಾಗತಿಹಳ್ಳಿಯಲ್ಲಿ ನಡೆಸಿಕೊಂಡು ಬರುತ್ತಿರುವ ಸಂಸ್ಕೃತಿ ಹಬ್ಬ ಹಾಗೂ ರಾಜ್ಯ ಮಟ್ಟದ ಚಿತ್ರಕಥಾ ಶಿಬಿರದ 5ನೇ ವಾರ್ಷಿಕೋತ್ಸವ ಯಶಸ್ವಿಯಾಗಿ ಮುಕ್ತಾಯವಾಗಿದೆ.

ಮೂರು ದಿನಗಳು ನೆಡೆದ ಈ ಸಮಾರಂಭದಲ್ಲಿ ಸಿನೆಮಾ ಅಕಾಡಮಿಯ ಅಧ್ಯಕ್ಷ ನಾಗಾಭರಣ, ಸಾಹಿತ್ಯ ಅಕಾಡಮಿಯ ಅದ್ಯಕ್ಷ ಪ್ರೊಫೆಸರ್ ಎಂ.ಎಚ್.ಕೃಷ್ಣಯ್ಯ, ಖ್ಯಾತ ನಿರ್ದೇಶಕರುಗಳಾದ 'ದುನಿಯಾ ಸೂರಿ, ಪಿ.ಶೇಷಾದ್ರಿ, ಛಾಯಾಗ್ರಾಹಕ ಕೃಷ್ಣ, ಸಂಕಲನಕಾರರಾದ ಬಸವರಾಜ್ ಅರಸ್, ಬಿ.ಎಸ್.ಕೆಂಪರಾಜ್ ಸೇರಿದಂತೆ ಇತರ ಗಣ್ಯರು ಈ ಉತ್ಸವದಲ್ಲಿ ಪಾಲ್ಗೊಂಡು ಶಿಬಿರಾರ್ಥಿಗಳಿಗೆ ಉಪಯುಕ್ತ ವಿಷಯಗಳನ್ನು ತಿಳಿಸಿದರು.

ಮೂರನೇ ದಿನದ ಸಮಾರಂಭದಲ್ಲಿ ಪಾಪುಲಾನ್ ಸಂಸ್ಥೆಯ ಮೂಲಕ ಚಿತ್ರಕಥಾ ಶಿಬಿರದ ವೆಬ್‌ಸೈಟ್ ಖ್ಯಾತ ಸಾಹಿತಿ ಜಯಂತ ಕಾಯ್ಕಿಣಿ ಅವರಿಂದ ಅನಾವರಣಗೊಂಡಿತ್ತು. ಸಂಸ್ಥೆಯ ಮುಖ್ಯಸ್ಥೆ ದೀಪ್ತಿರವಿ ವೆಬ್‌ಸೈಟ್‌ನ ಅನುಕೂಲತೆಗಳನ್ನು ಪರಿಚಯಿಸಿದರು. ವೆಬ್‌ಸೈಟ್ ಉದ್ಘಾಟಿಸಿ ಮಾತನಾಡಿದ ಜಯಂತ್ ಕಾಯ್ಕಿಣಿ 'ಕನ್ನಡ ಚಿತ್ರರಂಗದಲ್ಲಿ ಕಥೆಗಾರರಿಲ್ಲ ಎಂಬ ಮಾತು ಕೇಳಿ ಬರುತ್ತಿರುವ ಸಮಯದಲ್ಲಿ ಈ ವೆಬ್‌ಸೈಟ್ ಬಹಳ ಉಪಯುಕ್ತವಾಗಲಿದೆ ಎಂದರು.

'ಬೆಂಗಳೂರಿನಂತ ನಗರಗಳಲ್ಲೇ ಪ್ರತಿಭಾವಂತರಿರುವುದು ಎಂದು ತಿಳಿಯುವುದು ತಪ್ಪು. ಗ್ರಾಮೀಣ ಪ್ರದೇಶಗಳಲ್ಲೂ ಪ್ರತಿಭಾಶಾಲಿಗಳು ಇದ್ದಾರೆ ಎಂದು ನನ್ನ ಸ್ನೇಹಿತ ನಾಗತಿಹಳ್ಳಿ ಚಂದ್ರಶೇಖರ್ ತೋರುತ್ತಿದ್ದಾರೆ ಎಂದು ಪ್ರಶಂಸಿದ ಕಾಯ್ಕಿಣಿ ಅವರು ಗ್ರಾಮೀಣ ಪ್ರದೇಶಗಳು ಈಗ ಎಲ್ಲಾ ರೀತಿಯಲ್ಲೂ ಮುಂದುವರೆಯುತ್ತಿದೆ. ಅದಕ್ಕೆ ನಾಗತಿಹಳ್ಳಿ, ಹೆಗ್ಗೋಡು ಮುಂತಾದ ಗ್ರಾಮಗಳೇ ಸಾಕ್ಷಿ ಎಂದು ಬಣ್ಣಿಸಿದರು. ಈ ಸಂದರ್ಭದಲ್ಲಿ ಖ್ಯಾತ ಅಂಕಣಕಾರ ಚಂದ್ರೇಗೌಡ, ಐಡಿಯಲ್ ಹೋಂನ ರಾಜಕುಮಾರ್ ಉಪಸ್ಥಿತರಿದ್ದು, ಸಮಾರಂಭದ ಬಗ್ಗೆ ಹಿತನುಡಿಗಳನಾಡಿದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಉಡುಪಿಯಲ್ಲಿ ನಾಗತಿಹಳ್ಳಿ ಚಲನಚಿತ್ರೋತ್ಸವ
ಒಲವೇ ಜೀವನ ಸಾಕ್ಷಾತ್ಕಾರ ಅಲ್ಲ ಲೆಕ್ಕಾಚಾರ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada