»   »  ನವೀನ್ ಕೃಷ್ಣರ ಶಂಭೋ ಶಂಕರ

ನವೀನ್ ಕೃಷ್ಣರ ಶಂಭೋ ಶಂಕರ

Subscribe to Filmibeat Kannada

ಚಿತ್ರದ ಶೀರ್ಷಿಕೆ ಕೇಳಿದರೆ ಆಧ್ಯಾತ್ಮಿಕ ಚಿತ್ರ ಎಂದು ಅನಿಸುವುದು ಸಹಜ. ಆದರೆ ಇದು ನೂರಕ್ಕೆನೂರರಷ್ಟು ಮನೋರಂಜನೆಯ ಚಿತ್ರ ಅಂತಾರೆ ಈ ನೂತನ ಚಿತ್ರವನ್ನು ನಿರ್ಮಿಸುತ್ತಿರುವ ಚಿಂದೋಡಿ ಶ್ರೀಕಂಠೇಶ್ ಅವರು. ಹಿಂದೆ ಇವರು ನಿರ್ಮಿಸಿದ 'ಎಷ್ಟು ನಗ್ತಿ ನಗು' ಚಿತ್ರ ಹಾಸ್ಯಪ್ರಿಯರಿಗೆ ಮುದ ನೀಡಿತ್ತು.

ಸಂಸ್ಥೆಯ ಎರಡನೇ ಕಾಣಿಕೆಯಾಗಿ ಹೊರಹೊಮ್ಮುತ್ತಿರುವ ಈ ಚಿತ್ರಕ್ಕೆ ಶ್ರವಣ್ ಸ್ಟೂಡಿಯೋದಲ್ಲಿ ಹಾಡುಗಳ ಧ್ವನಿಮುದ್ರಣ ಸಂಗೀತ ನಿರ್ದೇಶಕ ಎಂ.ಎಸ್.ಮಾರುತಿ ಅವರ ಸಾರಥ್ಯದಲ್ಲಿ ನಡೆಯುತ್ತಿದೆ. ಬಂಗಾರೇಶ್, ಹಂಸಪ್ರಿಯ, ಸಿ.ವಿ.ಶಿವಶಂಕರ್ ಹಾಗೂ ಮೋಹನ್ ಅವರು ಬರೆದಿರುವ 5ಹಾಡುಗಳು ಚಿತ್ರದಲಿದ್ದು, ರಾಜೇಶ್‌ಕೃಷ್ಣನ್, ನಂದಿತಾ, ಅಪೂರ್ವ, ಶಮಿತಾ ಹಾಗೂ ಸಂತೋಷ್ ಈ ಹಾಡುಗಳನ್ನು ಹಾಡುತ್ತಿದ್ದಾರೆ.

ಅಕ್ಟೋಬರ್ 20ರಿಂದ ಚಿತ್ರದ ಚಿತ್ರೀಕರಣ ಆರಂಭವಾಗಲಿದ್ದು, ಚಿಂದೋಡಿ ಬಂಗಾರೇಶ್ ಪ್ರಧಾನ ನಿರ್ದೇಶನದ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಪ್ರಚಾರಕರಾಗಿ ಗುರುತಿಸಿಕೊಂಡಿರುವ ಮಸ್ತಾನ್ ಅವರು ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ನವೀನ್‌ಕೃಷ್ಣ, ಮೋಹನ್, ಚಿಂದೋಡಿ ವಿಜಯಕುಮಾರ್, ಶ್ರೀನಿವಾಸಮೂರ್ತಿ ಹಾಗೂ ರೂಪಶ್ರೀ 'ಶಂಭೋ ಶಂಕರ ಚಿತ್ರದಲ್ಲಿ ನಟಿಸುತ್ತಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada