»   »  ಶಿವಣ್ಣನ ಪ್ರೇಯಸಿಯಾಗಿ ಪದ್ಮಪ್ರಿಯಾ

ಶಿವಣ್ಣನ ಪ್ರೇಯಸಿಯಾಗಿ ಪದ್ಮಪ್ರಿಯಾ

Subscribe to Filmibeat Kannada

ಇದೇ ಮೊದಲ ಬಾರಿಗೆ ಅಗ್ನಿ ಶ್ರೀಧರ್ ನಿರ್ದೇಶಿಸುತ್ತಿರುವ 'ತಮಸ್ಸು' ಚಿತ್ರದ ಮೂಲಕ ತಮಿಳು ಬೆಡಗಿ ಪದ್ಮಪ್ರಿಯಾ ಕನ್ನಡಕ್ಕೆ ಅಡಿಯಿಡುತ್ತಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆ ಈಕೆ ಪ್ರೇಯಸಿಯಾಗಿ ಚಿತ್ರದಲ್ಲಿ ದರ್ಶನ ನೀಡಲಿದ್ದಾರೆ. ಎನ್ ಕೌಂಟರ್ ಸ್ಪೆಷಲಿಸ್ಟ್ ಆಗಿ ಶಿವರಾಜ್ ಕುಮಾರ್ ತಮಸ್ಸಿನಲ್ಲಿ ಕಾಣಿಸಲಿದ್ದಾರೆ.

ಈ ಚಿತ್ರದಲ್ಲಿ ಪದ್ಮಪ್ರಿಯಾ ಅವರದು ಮಾನವ ಹಕ್ಕುಗಳ ಕಾರ್ಯಕರ್ತೆಯ ಪಾತ್ರ. ಚಿತ್ರದಲ್ಲಿ ತಮ್ಮ ಪಾತ್ರ ವಿಭಿನ್ನವಾಗಿದೆ ಎನ್ನುವ ಪದ್ಮಪ್ರಿಯಾ ಈಗಾಗಲೇ ತಮಿಳು ಮತ್ತು ಮಳಯಾಳಂ ಚಿತ್ರರಂಗದಲ್ಲೂ ಬ್ಯುಸಿಯಾಗಿದ್ದಾರೆ. ಈಗಾಗಲೇ ಈಕೆಯ ಖಾತೆಯಲ್ಲಿ ಇಪ್ಪತ್ತೊಂದು ಚಿತ್ರಗಳು ಜಮೆಯಾಗಿವೆ.

ಈಕೆಯ ಪೂರ್ಣ ಹೆಸರು ಪದ್ಮಪ್ರಿಯಾ ಜಾನಕಿರಾಮನ್. ಅಂದಹಾಗೆ ಈಕೆ ಓದಿದ್ದು ಬೆಂಗಳೂರಿನಲ್ಲೇ! ಕಿರ್ಲೋಸ್ಕರ್ ಇನಿಸ್ಟಿಟ್ಯೂಟ್ ಆಫ್ ಅಡ್ವಾನ್ಸ್ ಡ್ ಮ್ಯಾನೇಜ್ ಮೆಂತ್ ಸ್ಟಡೀಸ್ ಸಂಸ್ಥೆಯಲ್ಲಿ ಎಂಬಿಎ ಪದವೀಧರೆ. ಇದಕ್ಕೂ ಮುನ್ನ ಬಿ.ಕಾಂ ಪದವಿಯನ್ನು ಆಂಧ್ರಪ್ರದೇಶದ ಸಿಕಿಂದ್ರಾಬಾದ್ ನಲ್ಲಿ ಪಡೆದಿದ್ದರು.

ಗುಜರಾತ್ ನಲ್ಲಿ ನಡೆದ ಹಿಂದು ಮತ್ತು ಮುಸ್ಲಿಂ ಕೋಮುಗಲಭೆ ಆಧಾರವಾಗಿ ತಮಸ್ಸು ಚಿತ್ರಕತೆ ಹೆಣೆಯಲಾಗಿದ್ದು ತಪ್ತ ಮನಸ್ಸಿನ ತಪಸ್ಸು ಎಂಬ ಅಡಿಬರಹವನ್ನು ಚಿತ್ರಕ್ಕೆ ನೀಡಲಾಗಿದೆ. ಕ್ರೌರ್ಯದಿಂದ ಮನುಷ್ಯತ್ವದೆಡೆಗೆ ಪಯಣ ಎಂಬುದೇ ಈ ಚಿತ್ರದ ತಾತ್ಪರ್ಯ ಎನ್ನುತ್ತಾರೆ ಅಗ್ನಿ ಶ್ರೀಧರ್.

ಚಿತ್ರದಲ್ಲಿ ಜೈಜಗದೀಶ್ ಅವರದು ಪೊಲೀಸ್ ಕಮೀಷನರ್ ಪಾತ್ರ. ಚೌಟ ಸಂಗೀತ ನಿರ್ದೇಶನವಿರುವ ಈ ಚಿತ್ರದಲ್ಲಿ ಶರತ್ ಲೋಹಿತಾಶ್ವ ಅವರು ಭಯೋತ್ಪಾದಕನಾಗಿ ಕಾಣಿಸಲಿದ್ದಾರೆ. ಸುಂದರನಾಥ್ ಸುವರ್ಣ ಅವರ ಛಾಯಾಗ್ರಹ ತಮಸ್ಸು ಚಿತ್ರಕ್ಕಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada