For Quick Alerts
  ALLOW NOTIFICATIONS  
  For Daily Alerts

  ಪುನೀತ್ ರಾಜ್‌ಕುಮಾರ್ ಮತ್ತೊಂದು ರೀಮೇಕ್

  By Rajendra
  |

  ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಮತ್ತೊಂದು ರೀಮೇಕ್ ಚಿತ್ರದಲ್ಲಿ ನಟಿಸಲಿದ್ದಾರೆ. ತಮಿಳಿನ ಯಶಸ್ವಿ ಚಿತ್ರ 'ಪೊರಲಿ'ಯನ್ನು ಕನ್ನಡಕ್ಕೆ ತರುತ್ತಿದ್ದಾರೆ. ಮೂಲ ಚಿತ್ರದಲ್ಲಿ ಶಶಿಕುಮಾರ್ ಮುಖ್ಯಪಾತ್ರ ಪೋಷಿಸಿದ್ದರು.

  ತಮಿಳಿನ 'ಪೊರಲಿ' ಚಿತ್ರವನ್ನು ನಿರ್ದೇಶಿಸಿದ್ದ ಸಮುತ್ತಿರಕನಿ ಕನ್ನಡ ಚಿತ್ರಕ್ಕೂ ಆಕ್ಷನ್ ಕಟ್ ಹೇಳಲಿದ್ದಾರೆ. ಈ ಚಿತ್ರ ಸೆಟ್ಟೇರಬೇಕಾದರೆ ದುನಿಯಾ ಸೂರಿ ನಿರ್ದೇಶನದ 'ಅಣ್ಣಾ ಬಾಂಡ್' ಬಿಡುಗಡೆಯಾಗುವವರೆಗೂ ಕಾಯಬೇಕು. ಬಹುಶಃ ಮೇ ತಿಂಗಳಲ್ಲಿ ಸೆಟ್ಟೇರುವ ಸಾಧ್ಯತೆಗಳಿವೆ.

  ಈ ಚಿತ್ರ ಪುನೀತ್ ಅವರ ಸ್ವಂತ ಬ್ಯಾನರ್ ವಜ್ರೇಶ್ವರಿ ಕಂಬೈನ್ಸ್ ನಿರ್ಮಿಸಲಿದೆ. 'ನಾಡೋಡಿಗಳ್' ಚಿತ್ರದ ರೀಮೇಕ್ ಆದ 'ಹುಡುಗರು' ಮೂಲ ಚಿತ್ರವನ್ನು ಸಮುತ್ತಿರಕನಿ ನಿರ್ದೇಶಿಸಿದ್ದರು. 'ಪೊರಲಿ' ಚಿತ್ರ ಭಾವನಾತ್ಮಕವಾಗಿ, ಆಕ್ಷನ್ ಹಾಗೂ ಪ್ರತೀಕಾರದ ಕಥಾಹಂದರವನ್ನು ಒಳಗೊಂಡಿದೆ. ಪುನೀತ್‌ಗೆ ತಕ್ಕ ಸಬ್ಜೆಕ್ಟ್ ಅನ್ನಿಸಿರುವ ಕಾರಣ ರಾಘವೇಂದ್ರ ರಾಜ್‌ಕುಮಾರ್ ಓಕೆ ಎಂದಿದ್ದಾರೆ. (ಒನ್‌ಇಂಡಿಯಾ ಕನ್ನಡ)

  English summary
  Tamil film Porali is likely to be remade in Kannada soon. Director Samuththirakani, who is the director of the original Tamil film “Paroli’ is directing the film. Power Star Puneeth Rajkumar is all set to work in the remake of the Tamil film Porali

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X