For Quick Alerts
  ALLOW NOTIFICATIONS  
  For Daily Alerts

  ರು.50 ಲಕ್ಷ ಪ್ರಾಫಿಟ್ ಮಾಡಿದ ಗಣೇಶ್ ಶೈಲೂ

  By Rajendra
  |

  ಗೋಲ್ಡನ್ ಸ್ಟಾರ್ ಗಣೇಶ್‌ ಅವರನ್ನು 'ಶೈಲೂ' ಚಿತ್ರ ಕೈಹಿಡಿದೆ, ಹಾಗೆಯೇ ನಿರ್ಮಾಪಕ ಕೊಬ್ರಿ ಮಂಜು ಅವರನ್ನು. 'ಶೈಲೂ' ಚಿತ್ರ ರು.50 ಲಕ್ಷ ಪ್ರಾಫಿಟ್ ಮಾಡಿದೆ ಮಂಜು ಪ್ರಕಟಿಸಿದ್ದಾರೆ. ಡಾ.ವಿಷ್ಣುವರ್ಧನ್ ಮುಖ್ಯಭೂಮಿಕೆಯಲ್ಲಿದ್ದ 'ಮಾತಾಡ್ ಮಾತಾಡ್ ಮಲ್ಲಿಗೆ' ಚಿತ್ರ ಮಂಜಣ್ಣನಿಗೆ ರು. 2 ಕೋಟಿ ಲುಕ್ಸಾನ್ ಮಾಡಿತ್ತಂತೆ.

  ಆದರೆ ಈ ಮಾತನ್ನು ಮಾತಾಡ್ ಮಾತಾಡ್ ಮಲ್ಲಿಗೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸುತಾರಾಂ ಒಪ್ಪಲ್ಲ. ನಷ್ಟದ ಮಾತನ್ನು ಒಪ್ಪುತ್ತಾರಾದರೂ, ಮಂಜಣ್ಣನ ಲೆಕ್ಕವನ್ನು ಮಾತ್ರ ಒಪ್ಪಲ್ಲ ಎನ್ನುತ್ತಾರೆ ಒಲವೇ ಜೀವನ ಲೆಕ್ಕಾಚಾರದ ನಿರ್ದೇಶಕರು.

  'ಶೈಲೂ' ಚಿತ್ರದ ಕಲೆಕ್ಷನ್‌ಗೆ ಸುದೀಪ್ ಅವರ 'ವಿಷ್ಣುವರ್ಧನ' ಚಿತ್ರ ಎಲ್ಲಿ ಹೊಡೆತ ನೀಡುತ್ತದೋ ಎಂಬ ಭಯ ಮಂಜಣ್ಣನ್ನು ಕಾಡುತ್ತಿತ್ತಂತೆ. ಆದರೆ ಆ ನಿರೀಕ್ಷೆ ಹುಸಿಯಾಗಿದ್ದು ಮಂಜಣ್ಣ ಗೆಲುವಿನ ನಗೆ ಬೀರಿದ್ದಾರೆ. ಈ ಮೂಲಕ ನೆಲಕಚ್ಚಿದ್ದ ಗೋಲ್ಡನ್ ಸ್ಟಾರ್ ಕೆರೀರ್ ಗ್ರಾಫ್‌ ಕೊಂಚ ಚೇತರಿಸಿಕೊಂಡಂತಾಗಿದೆ. (ಏಜೆನ್ಸೀಸ್)

  English summary
  Golden Star Ganesh lead Shailoo made Rs 50 lakh profit said the producer of the movie K Manju. He has openly declared that he made profit that is near to Rs.50 lakhs. I had the big opposition from ‘Vishnuvardhana’ of Kichcha Sudeep.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X