»   » ವಿಷ್ಣು ಕನಸು ನನಸು ಮಾಡದ ಎಸ್ಸೆಂ ಕೃಷ್ಣ

ವಿಷ್ಣು ಕನಸು ನನಸು ಮಾಡದ ಎಸ್ಸೆಂ ಕೃಷ್ಣ

Posted By:
Subscribe to Filmibeat Kannada

ನವದೆಹಲಿ, ಡಿ. 30 : ನಟ ವಿಷ್ಣುವರ್ಧನ್ ಅವರ ಅಕಾಲಿಕ ನಿಧನಕ್ಕೆ ಭಾರತದ ವಿದೇಶಾಂಗ ಸಚಿವ ಎಸ್ ಎಂ ಕೃಷ್ಣ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ವಿಷ್ಣುವರ್ಧನ್ ಸಜ್ಜನಿಕೆ ನಟ ಮತ್ತು ಸ್ನೇಹಿತ.

ಕೃಷ್ಣ ರಾಜಕಾರಣದ ಅತ್ಯಂತ ಗಂಭೀರ ಸ್ವಭಾವದ ವ್ಯಕ್ತಿ ಮತ್ತು ವ್ಯಕ್ತಿತ್ವ. ಆದರೆ, ಸಾಹಸಸಿಂದ ವಿಷ್ಣುವರ್ಧನ್ ಅವರ ಸಾವಿನ ಸಂದರ್ಭದಲ್ಲಿ ತಮ್ಮ ನೆನಪಿನಾಳವನ್ನು ಬಿಚ್ಚಿಟ್ಟ ಅವರು, ಹಿಂದಿನ ಕಥೆಯನ್ನೆಲ್ಲಾ ವಿವರಿಸಿದರು. 1999 ರಾಜ್ಯ ಮುಖ್ಯಮಂತ್ರಿಯಾಗಿ ಎಸ್ ಎಂ ಕೃಷ್ಣ ರಾಜ್ಯಭಾರ ಮಾಡುತ್ತಿರುವ ಸಮಯವದು. ಆಗ ಆಕಸ್ಮಿಕವಾಗಿ ನಾನು ನಟ ವಿಷ್ಣುವರ್ಧನ್ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತು. ನನಗೆ ಅವರು ಸಾವಿನ ಸುದ್ದಿ ಕೇಳಿದಾಗನಿಂದಲೂ ಪಾಪ ಪ್ರಜ್ಞೆ ಕಾಡತೊಡಗಿದೆ. ಅವರಾಸೆಯನ್ನು ಈಡೇರಿಸಲು ನನ್ನ ಕೈಲಿ ಸಾಧ್ಯವಾಗಲಿಲ್ಲ ಎಂದು ಕೊರಗು ನನ್ನನ್ನು ಕಾಡತೊಡಗಿದೆ.

ಅದೇನೆಂದರೆ, ಮುಖ್ಯಮಂತ್ರಿಯಾಗಿದ್ದ ಹೊತ್ತಿನಲ್ಲಿ ನನಗೊಂದು ಸೂಟ್ ನ್ನು ತಮ್ಮ ಟೈಲರ್ ನಿಂದ ಹೊಲಿಸುವ ಆಸೆ ವಿಷ್ಣು ಅವರದು. ಆದರೆ, ಅದು ಕನಸಾಗಿಯೇ ಉಳಿಯಿತು. ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿದ ನಂತರ ನಾನು ರಾಜ್ಯಪಾಲನಾದೆ. ನಂತರ ದಿಲ್ಲಿ ರಾಜಕೀಯದಲ್ಲಿ ಬಿಜಿಯಾದೆ. ಹೀಗಾಗಿ ಅವರ ನನಗೆ ಹೊಲಿಸಬೇಕು ಎಂದು ಸೂಟ್ ನ ಕನಸು ಕನಸಾಗಿಯೇ ಉಳಿಯಿತು. ನಂತರ ಅಂಬರೀಷ್ ಜೊತೆಗೆ ವಿಷ್ಣು ಭೇಟಿಯಾಗಿದ್ದರು. ವಿಷ್ಣು ಸ್ನೇಹ ಜೀವಿ. ಸಜ್ಜನಿಕೆ. ಅವರ ಮರಣದಿಂದ ಚಿತ್ರರಂಗ ಅನಾಥವಾಗಿದೆ ಎಂದು ಕೃಷ್ಣ ಅಭಿಪ್ರಾಯಪಟ್ಟರು.

ವಿಷ್ಣು ವರ್ಧನ್ ಅವರ ಒಡನಾಡಿ ಎಂದೇ ಕರೆಸಿಕೊಂಡಿರುವ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ವಿಷ್ಣು ನಿಧನದ ಸಂಗತಿಯೇ ಅವರಿಗೆ ಅರಗಿಸಿಕೊಳ್ಳುವುದು. ವಿಷ್ಣುಗೆ ಸೋಮವಾರವಷ್ಟೇ ಹೊಸ ಪ್ರಾಜೆಕ್ಟ್ ನ ಬಗ್ಗೆ ಮಾತನಾಡಿದ್ದೆ. ಮೈಸೂರಿನಿಂದ ಬಂದ ನಂತರ ಮಾತಾಡೋಣ ಎಂದು ಹೋದ ಗಳೆಯ ಮರಳಿ ಬಾರದು ಜಾಗಕ್ಕೆ ತೆರಳಿದ್ದಾನೆ ಎಂದು ಕಂಬನಿ ಮಿಡಿದರು. ವಿಷ್ಣುವರ್ಧನ್ ಮತ್ತು ತಮ್ಮ ನಡುವೆ ಹಳೆಯ ಸ್ನೇಹ, ಸೈಕಲ್ ನಲ್ಲಿ ಓಡಾಡಿರುವ ಸಂಗತಿಗಳನ್ನ ಸಿಂಗ್ ಬಾಬು ನೆನಪಿಸಿಕೊಂಡರು.

ಕುಚುಕು ಗಳೆಯ ಅಂಬರೀಷ್ ಅವರಿಗೆ ಮಾತೇ ಹೊರಡುತ್ತಿಲ್ಲ. ಕಣ್ಣಲ್ಲಿ ದಳದಳಂತ ನೀರು ಸುರಿಯಲಾರಂಭಿಸಿದವು, ಅವನ ಬಗ್ಗೆ ಏನಂತ ಹೇಳಲಿ. ವಿಷ್ಣು ನನ್ನ ಗೆಳೆಯ ಮಾತ್ರವಲ್ಲ, ಹಿತೈಷಿ, ಬಂಧು, ಇಂತಹ ಸ್ನೇಹಿತನನ್ನ ಕಳೆದುಕೊಂಡಿರುವುದು ಭರಿಸಲು ಆಗುತ್ತಿಲ್ಲ ಎಂದು ಅಂಬರೀಷ್ ಹೇಳಿದರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada