For Quick Alerts
  ALLOW NOTIFICATIONS  
  For Daily Alerts

  ಜುಲೈನಲ್ಲಿ ಪ್ರಭುದೇವ ಜತೆ ನಯನತಾರಾ ಮದುವೆ

  By Rajendra
  |

  ನಟ, ನೃತ್ಯ ನಿರ್ದೇಶಕ, ನಿರ್ದೇಶಕ ಪ್ರಭುದೇವ ಮತ್ತು ಆತನ ಪತ್ನಿ ರಾಮಲತಾ ವಿವಾಹ ವಿಚ್ಛೇದನಕ್ಕೆ ಕಡೆಗೂ ಗ್ರೀನ್ ಸಿಗ್ನಲ್ ಸಿಕ್ಕಿದೆ. ಇವರಿಬ್ಬರೂ ಪರಸ್ಪರ ವಿವಾಹ ವಿಚ್ಛೇದನಕ್ಕೆ ಅಂಗೀಕರಿಸಿದ್ದಾರೆ. ರಾಮಲತಾ ಅವರಿಗೆ ರು. 25 ರಿಂದ 30 ಕೋಟಿಯಷ್ಟು ಪರಿಹಾರ ಕೊಡಲು ಪ್ರಭುದೇವ ಒಪ್ಪಿದ್ದು ಇಬ್ಬರ ನಡುವೆ ಡೀಲ್ ಓಕೆ ಆಗಿದೆ. ಈ ರೋಚಕ ಬೆಳವಣಿಗೆಗೆ ನಟಿ ನಯನತಾರಾ ಆನಂದಬಾಷ್ಪ ಹರಿಸಿದ್ದಾರೆ.

  ರು.30 ಕೋಟಿ ಡೀಲ್ ಓಕೆಯಾದ ಹಿನ್ನೆಲೆಯಲ್ಲಿ ಪ್ರಭುದೇವ ಅವರಿಂದ ರಾಮಲತಾ ಏನನ್ನು ಬಯಸುತ್ತಿದ್ದರು ಎಂಬುದು ಕಡೆಗೂ ಇಡೀ ಜಗತ್ತಿಗೆ ಗೊತ್ತಾಗಿದೆ. ಹಣ ಹಾಗೂ ಆಸ್ತಿ ತೆಗೆದುಕೊಂಡು ಡೈವೋರ್ಸ್ ಪೇಪರ್‌ಗಳಿಗೆ ಸಹಿಹಾಕುವುದಾಗಿ ರಾಮಲತಾ ತಿಳಿಸಿದ್ದಾರೆ. ಅತ್ತ ಪ್ರಭುದೇವ ಗೆಳತಿ ನಯನತಾರಾ ಮನೆಯಲ್ಲಿ ಸಂಭ್ರಮದ ವಾತಾವರಣ ನೆಲೆಗೊಂಡಿದೆ.

  ಕನ್ನಡ ಚಿತ್ರಗಳು : ನಿಮ್ಮ ಅಮೂಲ್ಯ ಮತ ಯಾರಿಗೆ?

  ಪ್ರಭುದೇವ ವಿವಾಹ ವಿಚ್ಛೇದನ ಇತ್ಯರ್ಥವಾದ ಹಿನ್ನೆಲೆಯಲ್ಲಿ ನಯನತಾರಾ ಹೈದರಾಬಾದ್‌ನಲ್ಲಿ ಅದ್ದೂರಿ ಸಮಾರಂಭವನ್ನು ಹಮ್ಮಿಕೊಂಡಿದ್ದಾರೆ. ಜೂನ್‌ನಲ್ಲಿ ರಾಮಲತಾ ಜೊತೆಗಿನ ಸಂಬಂಧ ವಿಚ್ಛೇದನದಲ್ಲಿ ಅಂತ್ಯವಾಗಲಿದೆ ಎನ್ನುತ್ತವೆ ಮೂಲಗಳು. ಅದಾದ ಬಳಿಕ ನಯನತಾರಾ ಮತ್ತು ಪ್ರಭುದೇವ ಜುಲೈ 2011ರಲ್ಲಿ ಸಪ್ತಪದಿ ತುಳಿಯಲಿದ್ದಾರೆ.

  ಪ್ರಭುದೇವ ಹೆಸರಿನಲ್ಲಿರುವ ಚೆನ್ನೈನ ಇಂಜಂಬಾಕಂನಲ್ಲಿನ ಸಮುದ್ರ ತೀರದ ವಿಲ್ಲಾ, ಅಣ್ಣಾ ನಗರ್‌ನ ಬಂಗಲೆ, ಹೈದರಾಬಾದ್‌ನಲ್ಲಿ ಮೂರು ಫ್ಲಾಟ್‌ಗಳು ಹಾಗೂ ಎರಡು ಕಾರುಗಳನ್ನು ರಾಮಲತಾ ಅವರಿಗೆ ಬರೆದುಕೊಡಲಿದ್ದಾರೆ. ಜೊತೆಗೆ ರು.10 ಲಕ್ಷ ಹಣವನ್ನು ಒಂದೇ ಕಂತಿನಲ್ಲಿ ಪಾವತಿಸಲು ಒಪ್ಪಿದ್ದಾರೆ. ಹಣ, ಆಸ್ತಿಯ ಇಂದಿನ ಒಟ್ಟಾರೆ ಮಾರುಕಟ್ಟೆ ಮೌಲ್ಯ ರು.25ರಿಂದ 30 ಕೋಟಿ ಎನ್ನಲಾಗಿದೆ. [ನಯನತಾರಾ]

  English summary
  Here is the divorce settlement details of Ramlath and Prabhu Deva: As per the deal worked Prabhu will give his sea side villa at Injambakkam on ECR, a bungalow in upmarket Anna Nagar, three flats and a property in Hyderabad, and two cars. The buzz is that the market price for all the real estates put together will be anywhere in the region of Rs 25 to 30 Crore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X