»   »  ಸಾವಿರ ಚಿತ್ರಗಳ ಸರದಾರ ನಾಗೇಶ್ ಇನ್ನಿಲ್ಲ

ಸಾವಿರ ಚಿತ್ರಗಳ ಸರದಾರ ನಾಗೇಶ್ ಇನ್ನಿಲ್ಲ

Posted By:
Subscribe to Filmibeat Kannada
Veteran actor Nagesh passes away!
ಚೆನ್ನೈ, ಜ.31: ಕನ್ನಡ, ತೆಲುಗು, ತಮಿಳು, ಮಲಯಾಳಂ ಚಿತ್ರರಂಗದ ಪ್ರಮುಖ ಹಾಸ್ಯ ನಟ ತಾಯ್ ನಾಗೇಶ್(ಗುಂಡೂರಾವ್) ಶನಿವಾರ ನಿಧನರಾದರು. ನಾಗೇಶ್ ಒಂದು ಸಾವಿರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಘನತೆ ನಾಗೇಶ್ ಅವರದು. ಅವರು ಹೃದಯ ಕಾಯಿಲೆಯಿಂದ ಬಳಲುತ್ತಿದ್ದರು. ಅವರಿಗೆ 75 ವರ್ಷ ವಯಸ್ಸಾಗಿತ್ತು.

ಕನ್ನಡ ಬ್ರಾಹ್ಮಣ ಮಧ್ವ ಕುಟುಂಬದಲ್ಲಿ ಜನಿಸಿದ ನಾಗೇಶ್ ಚಿತ್ರರಂಗದೆಡೆಗೆ ಆಕರ್ಷಿತರಾಗಿ ಚಿಕ್ಕಂದಿನಲ್ಲೇ ಮನೆ ತೊರೆದಿದ್ದರು. ತಮಿಳಿನ ಎಂಜಿಆರ್ ಮತ್ತು ಶಿವಾಜಿ ಗಣೇಶನ್ ಜತೆ ನಟಿಸಿದ ಚಿತ್ರಗಳು ಬಹಳಷ್ಟು ಜನಪ್ರಿಯವಾಗಿದ್ದವು. ಗಡಿಬಿಡಿ ಗಂಡ ಸೇರಿದಂತೆ ಕನ್ನಡದ ಹಲವಾರು ಚಿತ್ರಗಳಲ್ಲಿ ನಟಿಸಿದ್ದರು.ಬರೀ ಹಾಸ್ಯ ಪಾತ್ರಕ್ಕಷ್ಟೇ ಸೀಮಿತವಾಗದೆ ಗಂಭೀರ ಪಾತ್ರಗಳಲ್ಲೂ ನಟಿಸಿದ್ದರು.

ಕನ್ನಡ ಚಿತ್ರರಂಗದ ಮತ್ತೊಬ್ಬ ಹಾಸ್ಯ ನಟ ನರಸಿಂಹರಾಜು ಅವರ ನಟನೆಗೂ ನಾಗೇಶ್ ನಟನೆಗೂ ಸಾಮ್ಯತೆ ಇತ್ತು. ಕನ್ನಡವನ್ನು ನಿರರ್ಗಳವಾಗಿ ಮಾತನಾಡಲು ಬರದಿದ್ದರೂ ತಾವು ನಟಿಸಿದ ಕನ್ನಡ ಚಿತ್ರಗಳಿಗೆ ತಾವೇ ಸಂಭಾಷಣೆ ಹೇಳುತ್ತಿದ್ದದ್ದು ಅವರ ವಿಶೇಷತೆಯಾಗಿತ್ತು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada