»   »  ಮದುವೆ ಹಾಡಿನ ಸಂಭ್ರಮದಲ್ಲಿ 'ಹೋರಿ'

ಮದುವೆ ಹಾಡಿನ ಸಂಭ್ರಮದಲ್ಲಿ 'ಹೋರಿ'

Subscribe to Filmibeat Kannada

ಚಿತ್ರೋದ್ಯಮದಲ್ಲಿ ಪಾಂಡು ಎಂದೇ ಹೆಸರಾದ ನಿರ್ದೇಶಕ ನಾಗೇಂದ್ರ ಮಾಗಡಿ ಇತ್ತೀಚೆಗೆ ಟಾಟಾ ಬಿರ್ಲಾ, ಹನಿಮೂನ್ ಎಕ್ಸ್‌ಪ್ರೆಸ್‌ನಂತಹ ಕಾಮಿಡಿ ಚಿತ್ರಗಳನ್ನು ನಿರ್ದೇಶಿಸಿದ್ದರು. ಈಗ ಆಕ್ಷನ್-ಕಾಮಿಡಿ ಮಿಶ್ರಿತ 'ಹೋರಿ'ಎಂಬ ಹೆಸರಿನ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ.

ಈ ಚಿತ್ರದಲ್ಲಿ ಟೈಗರ್ ಪ್ರಭಾಕರ್ ಅವರ ಪುತ್ರ ವಿನೋದ್ ಪ್ರಭಾಕರ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಈಗಾಗಲೇ ಬೆಂಗಳೂರು ಸುತ್ತಮುತ್ತ ಈ ಚಿತ್ರಕ್ಕೆ ಭರದಿಂದ ಚಿತ್ರೀಕರಣ ನಡೆಯುತ್ತಿದ್ದು, ಕಳೆದ ವಾರ ಬೆಂಗಳೂರು ಹೊರವಲಯದ ನಿಸರ್ಗ ಹೌಸ್‌ನಲ್ಲಿ ನಾಯಕಿ ರಮಣೀತೋ ಚೌಧರಿ, ಹರೀಶ್ ರಾಜ್, ಹಾಗೂ 30 ಜನ ನೃತ್ಯ ಕಲಾವಿದರ ಅಭಿನಯದಲ್ಲಿ ಮದುವೆ ಸಂಭ್ರಮದ ಹಾಡೊಂದನ್ನು 4 ದಿನಗಳ ಕಾಲ ಚಿತ್ರೀಕರಿಸಲಾಯಿತು.

ಚಿತ್ರದ 6 ಹಾಡುಗಳಿಗೆ ರೇಣುಕುಮಾರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಎಂ.ಆರ್. ಸೀನು ಅವರ ಛಾಯಾಗ್ರಹಣ, ಕೆ. ರಾಮನಾರಾಯಣ್ ಅವರ ಸಾಹಿತ್ಯ, ರವಿವರ್ಮರ ಸಾಹಸ ಸಂಯೋಜನೆ ಈ ಚಿತ್ರಕ್ಕಿದ್ದು, ಬಹಳ ದಿನಗಳಿಂದ ಒಂದು ಸದಭಿರುಚಿಯ ಚಿತ್ರ ನಿರ್ಮಿಸುವ ಆಸೆ ಹೊತ್ತಿದ್ದ ಲಿಂಗೇಗೌಡರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ನಾಗೇಂದ್ರ ಮಾಗಡಿ ಅವರ ಚಿತ್ರಕಥೆ ಹಾಗೂ ನಿರ್ದೇಶನ ಇದ್ದು, ಪಲ್ಲಕ್ಕಿ, ಪಯಣ ಚಿತ್ರಗಳಲ್ಲಿ ಅಭಿನಯಿಸಿದ ಬೊಗಸೆ ಕಣ್ಣುಗಳ ಚೆಲುವೆ ರಮಣೀತೋ ಚೌಧರಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada