»   » ಕುಸಿದು ಬಿದ್ದ ಭಾರತಿ, ಜಯಂತಿ

ಕುಸಿದು ಬಿದ್ದ ಭಾರತಿ, ಜಯಂತಿ

Subscribe to Filmibeat Kannada

ಬೆಂಗಳೂರು, ಡಿ. 30 : ಪತಿ ವಿಷ್ಣುವರ್ಧನ್ ನಿಧನದಿಂದ ತೀವ್ರ ಒತ್ತಡಕ್ಕೊಳಗಾಗಿರುವ ಪತ್ನಿ ಭಾರತಿ ಅವರು ಕುಸಿದು ಬಿದ್ದು ಆಸ್ಪತ್ರೆ ದಾಖಲಾಗಿರುವ ಘಟನೆ ನಡೆದಿದೆ. ಅತ್ತ ನಟಿ ಜಯಂತಿ ಕೂಡಾ ವಿಷ್ಣು ನಿಧನ ಸುದ್ದಿ ತಿಳಿದು ಅಘಾತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಸವನಗುಡಿ ಮೇಲ್ಸೇತುವೆ ಬಳಿ ನಡೆದ ನೂಕುನುಗ್ಗಲಿನಲ್ಲಿ ಒಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿರುವ ಘಟನೆಯೂ ನಡೆದಿದೆ.

ನ್ಯಾಷನಲ್ ಕಾಲೇಜ್ ಬಳಿ ಅಭಿಮಾನಿಗಳ ಅತಿರೇಕ ಮುಂದುವರಿದಿದ್ದು, ನೂಕುನುಗ್ಗಲು ಹೆಚ್ಚಿದೆ. ಜನರ ನಿಯಂತ್ರಣ ಪೊಲೀಸರಿಗೆ ದೊಡ್ಡ ತಲೆನೋವಾಗಿದ್ದು, ರಾಜ್ಯದ್ಯಂತ ಲಕ್ಷಾಂತರ ಜನ ವಿಷ್ಣುವರ್ಧನ್ ಅವರ ಅಂತಿಮ ದರುಶನ ಪಡೆಯಲು ಸಾಗಾರೋಪಾದಿಯಲ್ಲಿ ಹರಿದು ಬರುತ್ತಿದ್ದಾರೆ. ಬಿಗಿ ಬಂದೋಬಸ್ತ್ ಗಾಗಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.

ಜಯನಗರದಲ್ಲಿ ನಾಲ್ಕು ಬಸ್ ಗಳ ಮೇಲೆ ಕಲ್ಲು ತೂರಾಟ. 8ನೇ ಮೈಲಿನಲ್ಲಿ ಉದ್ರಿಕ್ತ ವಾತಾವರಣ, ಬಸ್ ಗಳಿಗೆ ಕಲ್ಲೂ ತೂರಾಟ, ಚಾಮರಾಜಪೇಟೆ, ಬನಶಂಕರಿ, ತ್ಯಾಗರಾಜನಗರ, ಬಸವನಗುಡಿ ವಾತಾವರಣ ಬಿಗುವಿನಿಂದ ಕೂಡಿದೆ. ಉಳಿದಂತೆ ಮೈಸೂರಿನಲ್ಲಿ ಕರ್ಪ್ಯೂ ವಾತಾವರಣ ಉಂಟಾಗಿದ್ದು, ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಸ್ ಗೆ ಕಲ್ಲು ತೂರಾಟ, ಬೆಂಕಿ ಹಚ್ಚುವ ಕೆಲಸ ನಡೆಯುತ್ತಲಿವೆ. ಪರಿಸ್ಥಿತಿ ಬಿಗುವಿನಿಂದ ಕೂಡಿದ್ದು, ಬಿಗಿ ಬಂದೋಬಸ್ತ್ ನಿಯೋಜಿಸಿಲಾಗಿದೆ. ರಾಯಚೂರಿನ ಶಕ್ತಿನಗರ, ಗುಲ್ಬರ್ಗಾದಲ್ಲಿ ಬಂದ್ ಆಚರಿಸಲಾಗುತ್ತಿದೆ.

Pay your tributes to Dr. Vishnuvardhan. Click Here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada