»   » ನ್ಯಾಷನಲ್ ಮೈದಾನದ ಸುತ್ತಮುತ್ತ ಉದ್ರಿಕ್ತ ಸ್ಥಿತಿ

ನ್ಯಾಷನಲ್ ಮೈದಾನದ ಸುತ್ತಮುತ್ತ ಉದ್ರಿಕ್ತ ಸ್ಥಿತಿ

Posted By:
Subscribe to Filmibeat Kannada
Vishnu demise fans protest
ಬೆಂಗಳೂರು, ಡಿ. 30 : ವಿಧಿವಶರಾಗಿರುವ ಸಾಹಸಸಿಂಹ ವಿಷ್ಣುವರ್ಧನ್ ಅವರ ಅಂತಿಮ ದರ್ಶನಕ್ಕಾಗಿ ಬಸವನಗುಡಿಯ ನ್ಯಾಷನಲ್ ಕಾಲೇಜಿನ ಮೈದಾನದ ಬಳಿ ಸಾವಿರಾರು ಸಂಖ್ಯೆಯಲ್ಲಿ ನೆರೆದಿರುವ ಅಭಿಮಾನಿಗಳ ಆಕ್ರೋಶ ಮುಗಿಲು ಮುಟ್ಟಿದೆ. ನ್ಯಾಷನಲ್ ಕಾಲೇಜು, ಡಿವಿಜಿ ರಸ್ತೆ, ರಾಮಕೃಷ್ಣ ಆಶ್ರಮದ ಬಳಿ ನೆರೆದಿರುವ ವಿಷ್ಣು ಅಭಿಮಾನಿಗಳು ತಮ್ಮ ಆಕ್ರೋಶವನ್ನು ಪೊಲೀಸರ ಮೇಲೆ, ಅಲ್ಲಿ ನಿಲ್ಲಿಸಲಾಗಿದ್ದ ವಾಹನಗಳ ಮೇಲೆ ಮತ್ತು ಸುತ್ತಲಿನ ಕಟ್ಟಡಗಳ ಮೇಲೆ ತೀರಿಸಿಕೊಳ್ಳುತ್ತಿದ್ದಾರೆ.

ಪ್ರತಿಯಾಗಿ ಪೊಲೀಸರು 30 ಸುತ್ತು ಅಶ್ರವಾಯು ಸಿಡಿಸಿದ್ದಾರೆ. ಗಾಳಿಯಲ್ಲಿ ಗುಂಡು ಹಾರಿಸಿದ್ದು, ಉದ್ರಿಕ್ತ ಗುಂಪು ಚೆದುರಿಸಲು ಲಘು ಲಾಠಿ ಪ್ರಹಾರವನ್ನು ಮಾಡಿದ್ದಾರೆ, ಡಿವಿಜಿ ರಸ್ತೆಯಲ್ಲಿರುವ ಬ್ಯಾಂಕ್ ಕಟ್ಟಡ, ಕಚೇರಿಗಳಿಗೆ ಮೇಲೆ ಅಭಿಮಾನಿಗಳ ದಾಂಧಲೆ ನಡೆಸಿದ್ದು, ಪೊಲೀಸರ ಹಾರಿಸಿದ ಗುಂಡು ಒಬ್ಬ ಅಭಿಮಾನಿಯ ತೊಡೆಗೆ ತಗುಲಿದೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಿಗುವಿನ ವಾತಾವರಣ ಮುಂದುವರೆದಿದೆ. ರಾಜ್ಯದ ವಿವಿಧಡೆಯಿಂದ ಅಭಿಮಾನಿಗಳು ಹರಿದು ಬರುತ್ತಿದ್ದು, ಪೊಲೀಸರಿಗೆ ರಕ್ಷಣೆ ನೀಡುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ.

ಡಿವಿಜಿ ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನಗಳು ಎಲ್ಲಿ ಬೇಕೆಂದರಲ್ಲಿ ಚೆಲ್ಲಾಪಿಲ್ಲಿಯಾಗಿವೆ. ನಿಯಂತ್ರಿಸಲು ಬಂದಿರುವ ಪೊಲೀಸರ ಮೇಲೆ ಕಲ್ಲುಗಳ ಸುರಿಮಳೆಯಾಗುತ್ತಿದೆ. ಕಟ್ಟಡಗಳ ಗಾಜುಗಳು ಕೂಡ ಪುಡಿಪುಡಿಯಾಗಿವೆ. ಅಂತ್ಯಯಾತ್ರೆಯನ್ನು ಬನಶಂಕರಿಯಲ್ಲಿರುವ ವಿದ್ಯುತ್ ಚಿತಾಗಾರದಲ್ಲಿ ನಡೆಸಲಾಗುವುದೆಂಬ ಸುದ್ದಿಯೂ ಅವರ ಆಕ್ರೋಶಕ್ಕೆ ಕಾರಣವಾಗಿತ್ತು.

Pay your tributes to Dr. Vishnuvardhan. Click Here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada