»   » ಕಂಠೀರವದಲ್ಲಿ ರಾಜ್, ಅಭಿಮಾನ್ ದಲ್ಲಿ ವಿಷ್ಣು

ಕಂಠೀರವದಲ್ಲಿ ರಾಜ್, ಅಭಿಮಾನ್ ದಲ್ಲಿ ವಿಷ್ಣು

Posted By:
Subscribe to Filmibeat Kannada
Vishnu with Raj
ಬೆಂಗಳೂರು, ಡಿ. 30 : ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆಯನ್ನು ಬಾಲಕೃಷ್ಣ ಅವರ ಅಭಿಮಾನ್ ಸ್ಟುಡಿಯೋದಲ್ಲಿ ನಡೆಸಲು ಭಾರತಿ ವಿಷ್ಣುವರ್ಧನ್ ಅವರು ಸಮ್ಮತಿಸಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಕೂಡಾ ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆನ್ನು ಅಭಿಮಾನದಲ್ಲಿ ನಡೆಸಲು ಸರಕಾರಿ ಸಿದ್ಧತೆಗಳನ್ನು ಮಾಡಿಕೊಳ್ಳಲು ಸೂಚನೆ ನೀಡಿದ್ದಾರೆ.

ನಟಸಾರ್ವಭೌಮ ಡಾ ರಾಜ್ ಕುಮಾರ್ ತೀರಿ ಹೋದಾಗಲೂ ಅವರ ಅಂತ್ಯಕ್ರಿಯೆ ಎಲ್ಲಿ ನಡೆಸಬೇಕು ಎಂದು ಜಿಜ್ಞಾಸೆ ತಲೆದೋರಿತ್ತು. ಬಹುದೊಡ್ಡ ಅಭಿಮಾನಿ ಬಳಗ ಹೊಂದಿದ್ದ ರಾಜ್ ಕುಮಾರ್ ಅವರ ಅಂತ್ಯಕ್ರಿಯೆವನ್ನು ಅಂದಿನ ಸರಕಾರದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ರಾಜ್ ಧರ್ಮಪತ್ನಿ ಪಾರ್ವತಮ್ಮ ಅವರೊಂದಿಗೆ ಚರ್ಚಿಸಿ ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಕ್ರಿಯ ನಡೆಸಲು ಅಂತಿಮ ತೀರ್ಮಾನ ಕೈಗೊಳ್ಳಲಾಯಿತು. ಇದೀಗ ಸಾಹಸಸಿಂಹ ವಿಷ್ಣವರ್ಧನ್ ಅವರ ಸರದಿ. ವಿಷ್ಣು ಕೂಡಾ ರಾಜ್ಯಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಅಭಿಮಾನಿಗಳು ಹಿತೈಷಿಗಳು ಹಾಗೂ ಕುಟುಂಬ ವರ್ಗದ ಆಶಯದಂತೆ ಸರಕಾರ ನಡೆದುಕೊಳ್ಳಬೇಕಿರುವುದು ಅವಶ್ಯವಾಗಿದೆ.

ಇದಕ್ಕೂ ಮುಂಚೆ ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆಯನ್ನು ಬನಶಂಕರಿ ಚಿತಾಗಾರದಲ್ಲಿ ನಡೆಸಲು ಅವರ ಕುಟುಂಬ ವರ್ಗ ನಿರ್ಧರಿಸಿತ್ತು. ಆದರೆ, ವಿಷ್ಣು ಅಭಿಮಾನಿಗಳು ಕಂಠೀರವ ಸ್ಟುಡಿಯೋ ಮತ್ತು ಅಭಿಮಾನ್ ಸ್ಟುಡಿಯೋದಲ್ಲಿ ತಮ್ಮ ನೆಚ್ಚಿನ ನಾಯಕನ ಅಂತ್ಯಕ್ರಿಯೆ ನಡೆಯಬೇಕು ಎಂದು ಪಟ್ಟುಹಿಡಿದರು. ಆಗ ವಿಷ್ಣು ಪತ್ನಿ ಭಾರತಿ ಅವರೊಂದಿಗೆ ಚರ್ಚೆ ನಡೆಸಿದ ಹಿರಿಯ ನಟ ಅಂಬರೀಷ್ ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣು ಅಂತ್ಯಕ್ರಿಯೆ ನಡೆಯುವ ಸಂಗತಿಯನ್ನು ಅವರ ಸ್ಪಷ್ಟಪಡಿಸಿದರು. ಈ ವಿಷಯವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಮಾತನಾಡಿದ ಅಂಬರೀಷ್, ಅಬಿಮಾನ್ ಸ್ಟುಡಿಯೋದಲ್ಲಿ ಅಂತ್ಯಕ್ರಿಯೆ ನಡೆಯುವುದನ್ನು ಖಚಿತಪಡಿಸಿದರು.

ಎಚ್ ಡಿ ಕುಮಾರಸ್ವಾಮಿ ಅಸಮಾಧಾನ

ಸರಿ ಸುಮಾರು 30 ವರ್ಷಗಳ ಕಾಲ ಕನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ ಹಿರಿಯ ನಟನಿಗೆ ಎಲ್ಲೂ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಸುವುದು ಸರಿಯಲ್ಲ. ವಿಷ್ಣುವರ್ಧನ್ ಅವರು ರಾಜ್ಯಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರ ಅಶಯದಂತೆ ವಿಷ್ಣು ಅವರ ಅಂತ್ಯಕ್ರಿಯೆ ನಡೆಯಬೇಕು. ವಿಷ್ಣು ಸಾರ್ವಜನಿಕ ವ್ಯಕ್ತಿ, ಕುಟುಂಬದ ಅನುಮತಿ ಪಡೆದು ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯ ನಡೆಸಬೇಕು. ಅಭಿಮಾನ್ ಸ್ಟುಡಿಯೋದಲ್ಲಿ ನೆರವೇರಿಸುವುದು ಸೂಕ್ತ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. ಎಚ್ ಡಿ ಕುಮಾರಸ್ವಾಮಿ ನಿರ್ಮಾಣದ ಸೂರ್ಯವಂಶ ಚಿತ್ರದಲ್ಲಿ ವಿಷ್ಣುವರ್ಧನ್ ನಾಯಕ ನಟರಾಗಿ ಅಭಿನಯಿಸಿದ್ದರು.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X