ಶಾಂತಿ ಕಾಪಾಡಿ, ಸಿಎಂ, ಭಾರತಿ

ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ವಿಷ್ಣುವರ್ಧನ್ ಅವರ ಹೆಸರಿನಲ್ಲಿ ಶಾಶ್ವತ ಕಾರ್ಯಕ್ರಮ ಸರಕಾರ ವತಿಯಿಂದ ಹಮ್ಮಿಕೊಳ್ಳಲಾಗುವುದು. ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆಯನ್ನು ಸಕಲ ಸರಕಾರಿ ಗೌರವಗಳೊಂದಿಗೆ ನಡೆಸಿಕೊಡಲು ನಿರ್ಧರಿಸಲಾಗಿದೆ. ಎಲ್ಲರೂ ಶಾಂತಿ ಕಾಪಾಡಬೇಕು ಎಂದು ಹೇಳಿದರು.
ವಿಷ್ಣುವರ್ಧನ್ ಗೆ ಅಭಿಮಾನಿಗಳ ಬಗ್ಗೆ ಅಪಾರ ಗೌರವ ಮತ್ತು ಅಭಿಮಾನವಿತ್ತು. ಅವರ ನಮ್ಮೊಂದಿಗಿಲ್ಲ. ಅವರನ್ನು ಶಾಂತಿಯುತವಾಗಿ ಕಳುಹಿಸಿಕೊಡಬೇಕಿದೆ. ಅಭಿಮಾನಿಗಳಲ್ಲಿ ಅಪಾರ ಗೌರವ ಹೊಂದಿರುವ ಅವರಿಗೆ ನಿಮ್ಮ ಸಹಕಾರ ಅಗತ್ಯ. ಯಾರೂ ಕೂಡಾ ಗಲಾಟೆ ಮಾಡದೆ, ಅವರನ್ನು ಶಾಂತಿಯಿಂದ ಕಳುಹಿಕೊಡೋಣ ಎಂದು ವಿಷ್ಣುವರ್ಧನ್ ಪತ್ನಿ ಭಾರತಿ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಕನ್ನಡ ಚಿತ್ರರಂಗದ ಜನನಾಯಕ ವಿಷ್ಣುವರ್ಧನ್ ಅವರ ಅಕಾಲಿಕ ಮರಣವನ್ನು ಭರಿಸಲು ಅಸಾಧ್ಯ. ಕನ್ನಡ ಚಿತ್ರರಂಗದ ಅನೇಕ ಗಣ್ಯರು ಸಾಹಸಸಿಂಹನ ಅನಿರೀಕ್ಷಿತ ಸಾವಿಗೆ ಕಂಬನಿ ಮಿಡಿಯುತ್ತಿದೆ. 200 ಚಿತ್ರಗಳಲ್ಲಿ ಅಭಿನಯಿಸಿ ಕನ್ನಡದ ಅಮರ ಕಲಾವಿದನಾಗಿರುವ ವಿಷ್ಣುವರ್ಧನ್ 59ನೇ ವರ್ಷದಲ್ಲಿ ಸಾವಿಗೆ ಶರಣಾಗಿರುವುದು ವಿಪರ್ಯಾಸದ ಸಂಗತಿ.


Click it and Unblock the Notifications











