»   »  ರಾಜ್ಯೋತ್ಸವಕ್ಕೆ ಮೇನಕಾದಲ್ಲಿ ಉಚಿತ ಪ್ರದರ್ಶನ!

ರಾಜ್ಯೋತ್ಸವಕ್ಕೆ ಮೇನಕಾದಲ್ಲಿ ಉಚಿತ ಪ್ರದರ್ಶನ!

Subscribe to Filmibeat Kannada

ನವೆಂಬರ್ 1ರ ಕನ್ನಡ ರಾಜ್ಯೋತ್ಸವದಂದು ಬೆಂಗಳೂರಿನ ಮೇನಕಾ ಚಿತ್ರಮಂದಿರದಲ್ಲಿ(ಬೆಳಗಿನ ಆಟ) ಉಚಿತವಾಗಿ ಕನ್ನಡ ಚಿತ್ರವೊಂದನ್ನು ವೀಕ್ಷಿಸಬಹುದು. ಈ ಸದವಕಾಶವನ್ನು ಚಿತ್ರದ ನಿರ್ಮಾಪಕ ಮಹೇಂದ್ರ ಮುನೋತ್ ಕಲ್ಪಿಸಿದ್ದಾರೆ. ಇಷ್ಟಕ್ಕೂ ಆ ಚಿತ್ರದ ಹೆಸರೇನು ಅಂತೀರಾ? ವೀಲ್ಸ್ ಅಂಡ್ ಬಾಟಲ್ಸ್ ಎಂಬ ಅಡಿ ಬರಹವುಳ್ಳ 'ಆಟೋ'.

ಈ ಚಿತ್ರ ಈಗಾಗಲೇ ಅರ್ಧ ಶತಕ ಬಾರಿಸಿದೆ. ಐವತ್ತು ದಿನ ಪೂರೈಸಿದ್ದಕ್ಕೆ ಆಟೋ ಚಿತ್ರತಂಡ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿತ್ತು. ಆನಂದ್ ಸಿನಿಮಾಜ್ ಲಾಂಛನದಲ್ಲಿ ಮಹೇಂದ್ರ ಮುನೋತ್ ನಿರ್ಮಿಸಿರುವ ಚಿತ್ರಕ್ಕೆ ಮಲ್ಲಿಕಾರ್ಜುನ್ ಮುತ್ತಲಗೇರಿ ನಿರ್ದೇಶನವಿದೆ.

ತಾರಾಗಣದಲ್ಲಿ ಸತ್ಯ, ಶ್ರಾವಣಿ, ಸ್ವರ್ಣ, ರೋಶಿನಿ, ಕೃತ್ತಿಕಾ, ದತ್ತಣ್ಣ, ಸುಂದರ್‌ರಾಜ್, ಶ್ರೀನಿವಾಸ್ ಪ್ರಭು, ಭರತ್ ಭಾಗವತರ್, ಸುಧಾ ಬೆಳವಾಡಿ, ಪದ್ಮ ವಾಸಂತಿ, ಗುರುರಾಜ್ ಹೊಸಕೋಟೆ ಹಾಗೂ ಮಹೇಂದ್ರ ಮುನೋತ್ ಅಭಿನಯಿಸಿದ್ದಾರೆ.

(ದಟ್ಸ್ ಕನ್ನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada