»   » ಉಪೇಂದ್ರ ಕಠಾರಿವೀರನಿಗೆ ಕಿಚ್ಚ ಸುದೀಪ್ ಕಂಠದಾನ

ಉಪೇಂದ್ರ ಕಠಾರಿವೀರನಿಗೆ ಕಿಚ್ಚ ಸುದೀಪ್ ಕಂಠದಾನ

Posted By:
Subscribe to Filmibeat Kannada

ಕರುನಾಡ ಕಿಂಗ್ ಸುದೀಪ್ ತಮ್ಮ ಪ್ರತಿಸ್ಪರ್ಧಿ ತಾರೆಗಳ ಜೊತೆಗೆ ಕೈಜೋಡಿಸಿ ಒಳ್ಳೆಯ ಬೆಳವಣಿಗೆಗೆ ನಾಂದಿ ಹಾಡುತ್ತಿರುವುದು ಗೊತ್ತೇ ಇದೆ. ಈಗ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಗೋಲ್ಡನ್ ಗರ್ಲ್ ರಮ್ಯಾ ಅಭಿನಯದ 'ಕಠಾರಿವೀರ ಸುರಸುಂದರಾಂಗಿ' ಚಿತ್ರದಲ್ಲೂ ಸುದೀಪ್ ಕಾಣಿಸುತ್ತಿಲ್ಲ, ಆದರೆ ತಮ್ಮ ಧ್ವನಿಯನ್ನು ಕೇಳಿಸಲಿದ್ದಾರೆ.

'ಕಠಾರಿವೀರ' ಚಿತ್ರದ ಇಂಟ್ರಡಕ್ಷನ್ ಸೀನ್‌ಗೆ ಸುದೀಪ್ ಕಂಠದಾನ ಮಾಡಿದ್ದಾರೆ. ಈ ಮೂಲಕ 'ಕಠಾರಿವೀರ' ಚಿತ್ರದ ಮತ್ತೊಂದು ಕುತೂಹಲಕ್ಕೆ ಕಾರಣವಾಗಿವೆ. ಈ ಚಿತ್ರವನ್ನು ಏ.27ರಂದು ತೆರೆಗೆ ತರುತ್ತಿರುವುದಾಗಿ ಚಿತ್ರದ ನಿರ್ಮಾಪಕ ಮುನಿರತ್ನ ತಿಳಿಸಿದ್ದಾರೆ. ಪುನೀತ್ ರಾಜ್ ಕುಮಾರ್ ಅಭಿನಯದ ಭಾರಿ ಬಜೆಟ್ ಚಿತ್ರ 'ಅಣ್ಣಾಬಾಂಡ್' ಏ.26ರಂದು ತೆರೆಕಾಣಲಿದೆ.

ಆದರೆ ಈ ಬಗ್ಗೆ ಮುನಿರತ್ನ ಅವರಿಗೆ ಯಾವುದೇ ಅಳುಕಿಲ್ಲ. ತಮ್ಮ ಚಿತ್ರದ ಬಗ್ಗೆ ಅಖಂಡ ವಿಶ್ವಾಸ ಅವರಿಗೆ ಇದ್ದೇ ಇದೆ. ವಿ ಹರಿಕೃಷ್ಣ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಎರಡು ಹಾಡುಗಳ ಚಿತ್ರೀಕರಣಕ್ಕಾಗಿ 'ಕಠಾರಿವೀರ ಸುರಸುಂದರಾಂಗಿ' ಜೋರ್ಡಾನ್‌ಗೆ ಏ.2ರಂದು ಹಾರಲಿದ್ದಾರೆ. ಕನ್ನಡದ ಮೊಟ್ಟ ಮೊದಲ ಪೂರ್ಣ ಪ್ರಮಾಣದ 3D ಚಿತ್ರವಿದು ಎನ್ನಲಾಗಿದೆ. (ಒನ್‌ಇಂಡಿಯಾ ಕನ್ನಡ)

English summary
Karunada King Sudeep lends his voice to Upenda and Ramya lead Kannada movie Katari Veera Surasundarangi. It will be introduction scene said the producer Munirathna. Veteran actor Ambarish also plays a vital role.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X