For Quick Alerts
  ALLOW NOTIFICATIONS  
  For Daily Alerts

  ಅಭಿನಯ ಶಾರದೆ ಜಯಂತಿಗೆ ಗೌರವ ಡಾಕ್ಟರೇಟ್

  By Rajendra
  |

  ಅಭಿನಯ ಶಾರದೆ ಜಯಂತಿ ಅವರಿಗೆ ಮೈಸೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿದೆ. ಏಪ್ರಿಲ್ 7ರಂದು ನಡೆಯಲಿರುವ ಮೈಸೂರು ವಿಶ್ವವಿದ್ಯಾಲಯ ಘಟಿಕೋತ್ಸವದಲ್ಲಿ ಡಾಕ್ಟರೇಟನ್ನು ಪ್ರದಾನ ಮಾಡಲಾಗುತ್ತದೆ.

  ಏ.7ರಂದು ಬೆಳಗ್ಗೆ 11ಕ್ಕೆ ಆರಂಭವಾಗುವ ಘಟಿಕೋತ್ಸವಲ್ಲಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಭಾಗವಹಿಸಲಿದ್ದಾರೆ. ಕೇಂದ್ರ ಸಚಿವೆ ಪುರಂದೇಶ್ವರಿ ಅವರು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಆದರೆ ಕುಲಾಧಿಪತಿಗಳು ಆದ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ.

  ಈಗಾಗಲೆ ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪುರಸ್ಕಾರಕ್ಕೆ ಖ್ಯಾತ ಹಿನ್ನೆಲೆ ಗಾಯಕಿ ಎಸ್.ಜಾನಕಿ ಪಾತ್ರರಾಗಿದ್ದಾರೆ. ಕನ್ನಡ ಚಿತ್ರಗಳ ಹಿರಿಯ ಕಲಾವಿದೆ ಲೀಲಾವತಿ (ತುಮಕೂರು ವಿವಿ), ನಟ ಸುಂದರರಾಜ್ (ಕೊಲಂಬೋದ ಓಪನ್ ಯೂನಿವರ್ಸಿಟಿ ) ಸೇರಿದಂತೆ ಹಲವರು ಗೌರವ ಡಾಕ್ಟರೇಟ್‌ಗೆ ಪಾತ್ರರಾಗಿದ್ದಾರೆ. (ಒನ್‌ಇಂಡಿಯಾ ಕನ್ನಡ)

  English summary
  Kannada actress Jayanthi has been given an honorary doctorate by Mysore University for an outstanding contribution to Kannada cinema, in Mysore on April 7, 2012. The felicitation function took place in Mysore University premises along with the convocation ceremony for the year 2011.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X