Don't Miss!
- Sports
ಭಾರತ vs ಐರ್ಲೆಂಡ್: ಸೊನ್ನೆ ಸುತ್ತಿದ್ದರೂ ದಿನೇಶ್ ಕಾರ್ತಿಕ್ಗೆ ನೆಟ್ಟಿಗರಿಂದ ಪ್ರಶಂಸೆಯ ಸುರಿಮಳೆ: ಕಾರಣ?
- News
8000 ಉದ್ಯೋಗಗಳ ಕಡಿತಗೊಳಿಸಲು ನೋವಾರ್ಟಿಸ್ ತೀರ್ಮಾನ
- Finance
ಜೂನ್ 29: ಭಾರತದ ಪ್ರಮುಖ ನಗರಗಳಲ್ಲಿನ ಇಂಧನ ದರ ಸ್ಥಿರ
- Lifestyle
ಉಪ್ಪಿನಕಾಯಿ ತಿಂದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? ಆದರೆ ಈ ಸಮಸ್ಯೆ ಇದ್ದರೆ ಸೇವಿಸಬೇಡಿ
- Automobiles
ಜುಲೈ 1ರಿಂದ ವಾಣಿಜ್ಯ ವಾಹನಗಳ ಬೆಲೆ ಹೆಚ್ಚಳ ಘೋಷಣೆ ಮಾಡಿದ ಟಾಟಾ ಮೋಟಾರ್ಸ್
- Technology
ಎಂಟ್ರಿ ಲೆವೆಲ್ ಫೋನ್ ಖರೀದಿಸುವ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ಕೊಟ್ಟ ಜಿಯೋ!
- Education
Cochin Shipyard Limited Recruitment 2022 : 106 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಬನ್ನೇರುಘಟ್ಟ - ಹೈಟೆಕ್ ನಗರ ಬೆಂಗಳೂರಿನಲ್ಲಿರುವ ಒಂದು ನೈಸರ್ಗಿಕ ತಾಣ
ಪಿ ವಾಸು ಮೂಲಕ ಪುನರಾಗಮನಕ್ಕೆ 'ರಾಧಿಕಾ' ಸಜ್ಜು?
ನಟಿ ರಾಧಿಕಾ ಮತ್ತೆ ಕನ್ನಡ ಚಿತ್ರದಲ್ಲಿ ನಟಿಸುತ್ತಾರಾ? ಈ ಪ್ರಶ್ನೆಯನ್ನು ಸಮಸ್ತ ಕನ್ನಡಿಗರೆಲ್ಲರೂ ಬಹಳ ಕಾಲದಿಂದಲೂ ಕೇಳುತ್ತಲೇ ಬಂದಿದ್ದಾರೆ. ಆದರೆ ಉತ್ತರ ಸಿಕ್ಕಿಲ್ಲ. ಮದುವೆ, ಮಗು ಎಂಬೆಲ್ಲ ಸುದ್ದಿ, ಫೋಟೋಗಳ ಮೂಲಕ ರಾಧಿಕಾ ಬಗ್ಗೆ ಪ್ರಶ್ನೆ ಮೂಡಿದ್ದ ಅಭಿಮಾನಿಗಳಿಗೆ 'ಲಕ್ಕಿ' ಚಿತ್ರ ನಿರ್ಮಾಣ ಮಾಡುವ ಮೂಲಕ ತಾನು ಚಿತ್ರರಂಗದಲ್ಲಿ ಇನ್ನೂ ಸಕ್ರಿಯವಾಗಿದ್ದೇನೆಂಬ ಉತ್ತರ ಕೊಟ್ಟಿದ್ದಾರೆ ರಾಧಿಕಾ.
ಯಶ್ ಮತ್ತು ರಮ್ಯಾ ತಾರಾಗಣದಲ್ಲಿ ಲಕ್ಕಿ ಚಿತ್ರದ ನಿರ್ಮಾಣ ಮುಗಿಸಿರುವ ರಾಧಿಕಾ ಸದ್ಯದಲ್ಲೇ ಮತ್ತೆ ಕನ್ನಡ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ನಿರ್ದೇಶಕ ಪಿ. ವಾಸು, ರಾಧಿಕಾ ಮತ್ತೆ ಬಣ್ಣಹಚ್ಚಲಿರುವ ಚಿತ್ರದ ನಿರ್ದೆಶನದ ಜವಾಬ್ದಾರಿ ವಹಿಸಲಿದ್ದಾರೆ, ರಾಧಿಕಾ ಹೆಸರಿನಲ್ಲಿ ಈ ಚಿತ್ರ ನಿರ್ಮಾಣವಾಗಲಿದೆ ಎಂಬುದು ಕೇಳಿಬಂದಿರುವ ಮಾತು.
ಈ ಸುದ್ದಿಗೆ ಪುಷ್ಠಿಕೊಡುವ ಘಟನೆಯೂ ತೀರಾ ಇತ್ತೀಚಿಗೆ ನಡೆದಿದೆ. ಪಿ ವಾಸು ನಿರ್ದೇಶನದ 'ಆರಕ್ಷಕ' ಚಿತ್ರದ ಆಡಿಯೋ ಬಿಡುಗಡೆಗೆ ಅದಕ್ಕೆ ಸಂಬಂಧವೇ ಇಲ್ಲದ ಕುಮಾರಸ್ವಾಮಿ ಬಂದಿದ್ದರು. ಆಶ್ಚರ್ಯದ ಸಂಗತಿಯಾದರೂ ಅದರ ಹಿಂದೆ ರಾಧಿಕಾ ಪುನರಾಗಮನದ ಕಥೆಯಿದೆ ಎಂಬುದು ಬಲ್ಲವರ ಅಂಬೋಣ. ಎಲ್ಲದಕ್ಕೂ ಕಾಲವೇ ಉತ್ತರ ಹೇಳಲಿದೆ. (ಒನ್ ಇಂಡಿಯಾ ಕನ್ನಡ)