For Quick Alerts
  ALLOW NOTIFICATIONS  
  For Daily Alerts

  ಸಿನಿಮಾ ತಾರೆ ಊರ್ವಶಿ ಸುಪರ್ದಿಗೆ ಮಾಜಿ ಪತಿ ಮಗಳು

  By Rajendra
  |

  ಕನ್ನಡ, ತೆಲುಗು ಹಾಗೂ ಮಲಯಾಳಂ ಚಿತ್ರಗಳ ತಾರೆ ಊರ್ವಶಿ ತನ್ನ ಮಗಳನ್ನು ವಶಕ್ಕೆ ಪಡೆದುಕೊಳ್ಳಿವಲ್ಲಿ ಯಶಸ್ವಿಯಾಗಿದ್ದಾರೆ. ತನ್ನ ಮಗಳನ್ನು ತನ್ನ ಸುಪರ್ದಿಗೆ ಒಪ್ಪಿಸಬೇಕು ಎಂದು ಆಕೆ ಕೋರ್ಟ್ ಮೆಟ್ಟಿಲೇರಿದ್ದರು. ಈಕೆಯ ವಾದವನ್ನು ಆಲಿಸಿದ ಕೇರಳ ಹೈಕೋರ್ಟ್‌ನ ವಿಭಾಗೀಯ ಪೀಠ, ಊರ್ವಶಿ ಮಗಳನ್ನು ಆಕೆಯ ಸುಪರ್ದಿಗೆ ಒಪ್ಪಿಸುವಂತೆ ಆಕೆಯ ಮಾಜಿ ಪತಿ ಮನೋಜ್ ಕೆ ಜಯನ್ ಅವರಿಗೆ ಆದೇಶಿಸಿದೆ.

  ಏಪ್ರಿಲ್ 13ರಿಂದ ನಾಲ್ಕು ದಿನಗಳ ಮಟ್ಟಿಗೆ ಕುಂಜತಾ ಅವರು ತಾಯಿ ಊರ್ವಶಿ ಅವರೊಂದಿಗೆ ಕಳೆಯಲು ಕೋರ್ಟ್ ಅವಕಾಶ ಕಲ್ಪಿಸಿದೆ. ತನ್ನ ಪತಿಯಿಂದ ಊರ್ವಶಿ ವಿವಾಹ ವಿಚ್ಛೇದನ ಪಡೆದ ಮೇಲೆ ಮಗಳನ್ನ್ನು ಮನೋಜ್ ಸುಪರ್ದಿಗೆ ಒಪ್ಪಿಸಲಾಗಿತ್ತು. ಕೌಟುಂಬಿಕ ನ್ಯಾಯಾಲಯ ಆದೇಶದ ಪ್ರಕಾರ ತನ್ನ ಮಗಳನ್ನು ಮನೋಜ್ ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಊರ್ವಶಿ ಇತ್ತೀಚೆಗೆ ಹೈಕೋರ್ಟ್ ಮೆಟ್ಟಿಲೇರಿದ್ದರು.

  ಇವರಿಬ್ಬರ ವಾದವನ್ನು ಆಲಿಸಿದ ಘನ ನ್ಯಾಯಾಲಯ ಕುಂಜತಾ ಅವರನ್ನು ನಾಲ್ಕು ದಿನಗಳ ಮಟ್ಟಿಗೆ ಊರ್ವಶಿ ಅವರ ಸುಪರ್ದಿಗೆ ಒಪ್ಪಿಸಲು ಮನೋಜ್ ಅವರಿಗೆ ಆದೇಶಿಸಿದೆ. ಅಂದಹಾಗೆ ಊರ್ವಶಿ ಕನ್ನಡದ ಬಹಳಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವುಗಳಲ್ಲಿ ಮುಖ್ಯವಾಗಿ ಪ್ರೇಮಲೋಕ, ರಾಮ ಶಾಮ ಭಾಮ, ಟಾಟಾ ಬಿರ್ಲಾ ಚಿತ್ರಗಳನ್ನು ಹೆಸರಿಸಬಹುದು.

  English summary
  South Indina film star Urvashi gets custody of her daughter Kunjatta. A Division Bench of the Kerala High Court on Thursday ordered actor Manoj K. Jayan to hand over custody of his daughter to his ex-wife actress Urvashi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X