»   » ಗರುಡಾ ಮಾಲ್ ನಲ್ಲಿ ವಿಷ್ಣುವರ್ಧನ್ ಚಿತ್ರೋತ್ಸವ

ಗರುಡಾ ಮಾಲ್ ನಲ್ಲಿ ವಿಷ್ಣುವರ್ಧನ್ ಚಿತ್ರೋತ್ಸವ

Posted By:
Subscribe to Filmibeat Kannada

ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿಗಳ ಪಾಲಿಗೆ ಸೆಪ್ಟೆಂಬರ್ 18 ಮರೆಯಲಾಗದ ದಿನ. ಕಾರಣ ಅಂದು ವಿಷ್ಣುವರ್ಧನ್ ಅವರ ಅರುವತ್ತನೆ ಜನುಮದಿನ. ಕನ್ನಡ ಚಿತ್ರರಂಗವನ್ನು ವಿಷ್ಣು ಅಗಲಿದ ಬಳಿಕ ಆಚರಿಸುತ್ತಿರುವ ಮೊದಲ ಹುಟ್ಟುಹಬ್ಬವಿದು. ಈ ಬಾರಿ ವಿಷ್ಣು ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲು ಸಮರೋಪಾದಿ ಸಿದ್ಧತೆಗಳು ನಡೆಯುತ್ತಿವೆ.

ಈ ಬಾರಿಯ ಪ್ರಮುಖ ಆಕರ್ಷಣೆ 'ವಿಷ್ಣು ಚಿತ್ರೋತ್ಸವ'. ಈ ಚಿತ್ರೋತ್ಸವಕ್ಕೆ ನೇತೃತ್ವ ವಹಿಸುತ್ತಿರುವವರು ವಿಷ್ಣು ಅಳಿಯ ಹಾಗೂ ನಟ ಅನಿರುದ್ಧ್. ಸೆಪ್ಟೆಂಬರ್ 17, 18 ಮತ್ತು 19ರಂದು ಮೂರು ದಿನಗಳ ಕಾಲ ವಿಷ್ಣು ಚಿತ್ರೋತ್ಸವ ಸಡಗರ, ಸಂಭ್ರಮದಿಂದಬೆಂಗಳೂರಿನ ಗರುಡಾ ಮಾಲ್ ನಲ್ಲಿ ನಡೆಯಲಿದೆ.

ಚಿತ್ರೋತ್ಸವದಲ್ಲಿ ನಾಗರಹಾವು, ಮಲಯ ಮಾರುತ, ಬಂಧನ, ಲಾಲಿ, ಬಂಗಾರದ ಜಿಂಕೆ, ದಿಗ್ಗಜರು ಸೇರಿದಂತೆ ಡಾ.ವಿಷ್ಣುವರ್ಧನ್ ಅಭಿನಯದ ಅಪರೂಪದ 12 ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಉಚಿತವಾಗಿ ನಡೆಯಲಿರುವ ಈ ಪ್ರದರ್ಶನದಲ್ಲಿ ವಿಷ್ಣು ಕುಟುಂಬದವರು ಭಾಗವಹಿಸಲಿರುವುದು ವಿಶೇಷ.

"ಹುಟ್ಟುಹಬ್ಬದ ದಿನ ಪ್ರದರ್ಶಿಸಲಿರುವ ಚಿತ್ರಗಳ ಹಕ್ಕುಗಳನ್ನು ತೆಗೆದುಕೊಳ್ಳಲು ತೀರ್ಮಾನಿಸಿದ್ದೇವೆ. ಕೆಲವು ಸಿಕ್ಕಿವೆ ಇನ್ನೂ ಕೆಲವು ಚಿತ್ರಗಳಿಗಾಗಿ ಪ್ರಯತ್ನಿಸಲಾಗುತ್ತಿದೆ. ನಾವು ಅಂದುಕೊಂಡಿರುವ ಎಲ್ಲಾ ಚಿತ್ರಗಳನ್ನು ಮೂರು ದಿನಗಳ ಕಾಲ ಪ್ರದರ್ಶಿಸುತ್ತೇವೆ. ಆಯಾ ಚಿತ್ರಗಳ ನಿರ್ಮಾಪರಿಂದ ಈಗಾಗಲೆ ಒಳ್ಳೆಯ ಪ್ರತಿಕ್ರಿಯೆ ಸಹ ಬಂದಿದೆ. ಶೀಘ್ರದಲ್ಲೆ ಕಾರ್ಯಕ್ರಮದ ರೂಪರೇಷೆಗಳು ಅಂತಿಮವಾಗಲಿದೆ" ಎಂದಿದ್ದಾರೆ ಅನಿರುದ್ಧ್.

Please Wait while comments are loading...