Just In
Don't Miss!
- Sports
ಐಎಸ್ಎಲ್: ಅಂಕ ಹಂಚಿಕೊಂಡ ಹೈದರಾಬಾದ್ ಮತ್ತು ಮುಂಬೈ ಸಿಟಿ
- News
ಅಮಿತ್ ಶಾ ಆಗಮನ; ಬೆಳಗಾವಿಯಲ್ಲಿ ರೈತರ ಪ್ರತಿಭಟನೆ
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Automobiles
2020ರ ಡಿಸೆಂಬರ್ ಅವಧಿಯಲ್ಲಿ ಕಾರು ಮಾರಾಟದಲ್ಲಿ ಭರ್ಜರಿ ಮುನ್ನಡೆ ಕಾಯ್ದುಕೊಂಡ ನ್ಯೂ ಜನರೇಷನ್ ಕ್ರೆಟಾ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಬಜೆಟ್ 2021: MSME ವಲಯಕ್ಕೆ ಏನು ಸಿಗಬಹುದು?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕನ್ನಡ ಚಲನಚಿತ್ರ ಪತ್ರಿಕೋದ್ಯಮದ ಗಡ್ಡಾಫಿ : ಉಮ-50
ಅಗಾಧ ನೆನಪಿನ ಶಕ್ತಿ. ಕವಿಗಳ ಬಗ್ಗೆ ಕಡುಕೋಪ, ಸಂಗೀತದ ಬಗ್ಗೆ ಮಡುಗಟ್ಟಿದ ಪ್ರೀತಿ. ಬದುಕೇ ಇಷ್ಟು ಅನ್ನುವ ನಿರ್ಭಾವುಕತೆ. ಇನ್ನಷ್ಟು ತೀವ್ರವಾಗಿ ಬದುಕುವ ಹುಮ್ಮಸ್ಸು. ದೂರದಿಂದ ನೋಡಿದವರು ಈತ ಕಟ್ಟುನಿಟ್ಟು ಮತ್ತು ಶಿಸ್ತಿನ ಅಪಾಯಕಾರಿ ಎಂದು ಭಾವಿಸುವುದುಂಟು. ಆ ಭಾವನೆಯನ್ನು ಹೋಗಲಾಡಿಸುವುದಕ್ಕೆ ಇದುವರೆಗೂ ಯಾವ ಪ್ರಯತ್ನವನ್ನೂ ಮಾಡಿದ್ದನ್ನು ನಾನಂತೂ ನೋಡಿಲ್ಲ. ಗೊತ್ತಿಲ್ಲದ ಫೋನ್ ನಂಬರನ್ನು ಯಾವತ್ತೂ ಎತ್ತದ, ಅಹಂಕಾರಿಗಳನ್ನು, ಕವಿಗಳನ್ನು, ಕುಹಕಿಗಳನ್ನು ಸದಾ ದೂರ ಇಡುವ, ತುಂಬ ಆಪ್ತರನ್ನೂ ಒಳಕೋಣೆಗೆ ಬಿಟ್ಟುಕೊಳ್ಳದ ಈ ಗೆಳೆಯನ ಹೆಸರು ಉದಯ ಮರಕಿಣಿ.
ನೀವು ಹತ್ತಾರು ವರ್ಷಗಳಿಂದ ಕನ್ನಡಪ್ರಭದ ಓದುಗರಾಗಿದ್ದರೆ ಉದಯ ಮರಕಿಣಿಯ ಹಾಸ್ಯದ ಪಟ್ಟಿಗೆ ಖಂಡಿತ ಸಿಲುಕಿರುತ್ತೀರಿ. ಏಕತಾನತೆ, ಅವವೇ ಮಾತುಗಳ ಚರ್ವಿತ ಚರ್ವಣ, ಓಬೀರಾಯನ ಕಾಲದ ಶೈಲಿಯಿಂದ ಸಿನಿಮಾ ವಿಮರ್ಶೆಯನ್ನು ಆಚೆಗೆಳೆದು ತಂದವರು ಉದಯ್. ಹಾಗೆ ನೋಡಿದರೆ ಸಿನಿಮಾ ಪತ್ರಿಕೋದ್ಯಮದಲ್ಲಿ ಮತ್ತೊಂದು ಅಧ್ಯಾಯವನ್ನು ಆರಂಭಿಸಿದವರು ಅವರೇ. ಅಲ್ಲಿಯ ತನಕ ಕೇವಲ ವರದಿಗಾರಿಕೆ ಮಾತ್ರ ಆಗಿದ್ದ, ಸಿನಿಮಾ ರಿಪೋರ್ಟಿಂಗ್ ಉದಯ್ ಬರಹಗಳಿಂದ ಹೊಸ ಹುಮ್ಮಸ್ಸು ಪಡಕೊಂಡಿತು. ಅನೇಕ ಕಲಾವಿದರು, ನಿರ್ದೇಶಕರು ಮರಕಿಣಿ ತಮ್ಮ ಬಗ್ಗೆ ಬರೆಯಬೇಕು ಎಂದು ಹಂಬಲಿಸುತ್ತಿದ್ದರು.