For Quick Alerts
  ALLOW NOTIFICATIONS  
  For Daily Alerts

  ಪಡ್ಡೆಗಳ ನಿದ್ದೆ ಕೆಡಿಸಲು ಬರುತ್ತಿದ್ದಾರೆ ಪದ್ಮಾವತಿ ರಮ್ಯಾ

  By Rajendra
  |

  ಇದೇ ಮೊದಲ ಬಾರಿಗೆ ರಮ್ಯಾ ಮತ್ತು ದುನಿಯಾ ವಿಜಯ್ ಕಾಂಬಿನೇಷನಲ್ಲಿ ಬರುತ್ತಿರುವ ಚಿತ್ರ ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್. ಹಲವು ವಿಶೇಷಗಳ ಈ ಚಿತ್ರ ಈ ವಾರ (ಜೂ.3) ತೆರೆಗೆ ಲಗ್ಗೆ ಹಾಕುತ್ತಿದೆ. ರಮ್ಯಾ ಐಟಂ ಹಾಡು ಪಡ್ಡೆಗಳಿಗೆ ರಸದೌತಣ ನೀಡಲಿದೆ. ಇನ್ನು ವಿಜಯ್ ಆಕ್ಷನ್ ಸನ್ನಿವೇಶಗಳು ಪ್ರೇಕ್ಷಕರ ಕಣ್ಣಿಗೆ ಹಬ್ಬ.

  ಸಮುದ್ರದಲ್ಲಿ ಚಿತ್ರೀಕರಿಸಿರುವ ಹಾಡು ಚಿತ್ರದ ಮತ್ತೊಂದು ಆಕರ್ಷಣೆ. ಈ ಹಾಡನ್ನು ಪಟ್ಟಾಯದಲ್ಲಿ ಚಿತ್ರೀಕರಿಸಲಾಗಿದೆ. ಅಂಡರ್ ವಾಟರ್‌ನಲ್ಲಿ ಸ್ಲೋ ಮೋಷನ್‌ನಲ್ಲಿ ಚಿತ್ರೀಕರಿಸಿರುವ ಹಾಡಿನ ಬಗ್ಗೆ ಮೆಚ್ಚುಗೆ ಮಾತುಗಳು ಕೇಳಿಬರುತ್ತಿವೆ. 1000 ಫ್ರೇಮ್‌ನಲ್ಲಿ ಈ ಹಾಡನ್ನು ಚಿತ್ರೀಕರಿಸಲಾಗಿದೆಯಂತೆ.

  ಜಯಣ್ಣ ಕಂಬೈನ್ಸ್ ಲಾಂಛನದಲ್ಲಿ ಜಯಣ್ಣ ಹಾಗೂ ಭೋಗೇಂದ್ರ ಅವರು ನಿರ್ಮಿಸಿರುವ ಚಿತ್ರವಿದು. ಪ್ರೀತಂಗುಬ್ಬಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಮೈಸೂರಿನ ಬಳಿ ನಿರ್ಮಾಣವಾಗಿರುವ ಸಂಧ್ಯಾರಾಗ ಕಲಾ ದೇಗುಲ ಸ್ಟುಡಿಯೋದಲ್ಲೇ ಬಹುತೇಕ ಚಿತ್ರೀಕರಣ ನಡೆದಿದೆ. ವಿದೇಶದಲ್ಲಿ ಎರಡು ಹಾಡುಗಳನ್ನು ಚಿತ್ರಿಸಲಾಗಿದೆ.

  ಎಸ್.ಕೃಷ್ಣ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ವಿ.ಹರಿಕೃಷ್ಣರ ಸಂಗೀತವಿದೆ. ಹರ್ಷ ನೃತ್ಯ ನಿರ್ದೇಶನ ಹಾಗೂ ದೀಪು ಎಸ್ ಕುಮಾರ್ ಸಂಕಲನವಿರುವ 'ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್' ಚಿತ್ರದ ತಾರಾಬಳಗದಲ್ಲಿ ವಿಜಯ್, ರಮ್ಯಾ, ರಂಗಾಯಣ ರಘು, ದತ್ತಣ್ಣ, ಅಚ್ಯುತಕುಮಾರ್, ಸಾಧುಕೋಕಿಲಾ, ಶರಣ್ ಮುಂತಾದವರಿದ್ದಾರೆ.(ದಟ್ಸ್‌ಕನ್ನಡ ಸಿನಿವಾರ್ತೆ)

  English summary
  Johny Mera Naam Preethi Mera Kaam Kannada romantic movie directed by Preetham Gubbi, is all set to grace theatres on 3rd June. Duniya Vijay and Ramya starrer Johny Mera Naam item song Oorigella Padmavathy...has become hugely popular. Ramya is looking very hot in this song.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X