»   » ಕಾಮಿ ಸ್ವಾಮಿ ಸಿಡಿಗೆ ಸಖತ್ ಡಿಮ್ಯಾಂಡ್ ಗುರು

ಕಾಮಿ ಸ್ವಾಮಿ ಸಿಡಿಗೆ ಸಖತ್ ಡಿಮ್ಯಾಂಡ್ ಗುರು

Posted By:
Subscribe to Filmibeat Kannada

ಮಿಮಿಕ್ರಿ ದಯಾನಂದ್ ಮುಖ್ಯಭೂಮಿಕೆಯಲ್ಲಿರುವ ಹಾಸ್ಯಭರಿತ 'ಕಾಮಿ ಸ್ವಾಮಿ' ವಿಡಿಯೋ ಸಿಡಿ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಕಾಮಿ ಸ್ವಾಮಿಯನ್ನು ನೋಡಲು ಜನ ಮುಗಿಬಿದ್ದಿದ್ದು ವಿಸಿಡಿಗೆ ಎಲ್ಲಿಲ್ಲದ ಬೇಡಿಕೆ ಉಂಟಾಗಿದೆ. ಮುಂಬೈ ಮತ್ತು ಯುಎಸ್ ಎ ನಿಂದಲೂ ಸಿಡಿ ಬೇಕೆಂದು ಕರೆಗಳು ಬರುತ್ತಿರುವುದಾಗಿ ಆನಂದ್ ಆಡಿಯೋದ ಮಾಲೀಕ ಮೋಹನ್ ತಿಳಿಸಿದ್ದಾರೆ.

ಒಂದು ಗಂಟೆ ಹತ್ತು ನಿಮಿಷಗಳ ಕಾಲಾವಧಿಯ ಈ ವಿಸಿಡಿ ನೋಡುಗರನ್ನು ನಕ್ಕು ನಲಿಸಲಿದೆ. ಮಾಸ್ಟರ್ ಹಿರಣ್ಣಯ್ಯ ಅವರ ಸಲಹೆ ಸೂಚನೆಗಳು 'ಕಾಮಿ ಸ್ವಾಮಿ' ವಿಸಿಡಿ ಅತ್ಯುತ್ತಮವಾಗಿ ಮೂಡಿಬರಲು ಸಾಧ್ಯವಾಯಿತು ಎಂದು ಮಿಮಿಕ್ರಿ ದಯಾನಂದ್ ತಿಳಿಸಿದ್ದಾರೆ. ಕಾಲಿಗೆ ಪೆಟ್ಟು ಮಾಡಿಕೊಂಡು ಎರಡು ತಿಂಗಳು ಹಾಸಿಗೆ ಹಿಡಿದಿದ್ದರೂ ದಯಾನಂದ್ ಅವರು ಹಾಸ್ಯ ರಸಕ್ಕೇನು ಕೊರತೆಯಾಗಿಲ್ಲ.

ಎಲ್ಲಾ ಸ್ವಾಮೀಜಿಗಳು ಹೀಗೆ ಇರುತ್ತಾರೆ ಎಂದು ಹೇಳಲಿಕ್ಕಾಗದು. ಆದರೂ ಸ್ವಾಮೀಜಿಗಳನ್ನು ಅನುಮಾನದಿಂದ ನೋಡುವಂತಾಗಿದೆ. ಸ್ವಾಮೀಜಿಗಳೆಂದರೆ ಸಮಾಜದಲ್ಲಿ ಗೌರವಯುತವಾಗಿ ಕಾಣುತ್ತೇವೆ ಎಂದು ವಿಸಿಡಿ ಬಿಡುಗಡೆ ಸಮಯದಲ್ಲಿ ದಯಾನಂದ್ ಹೇಳಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada