For Quick Alerts
  ALLOW NOTIFICATIONS  
  For Daily Alerts

  ಎದೆಗಾರಿಕೆಗೆ ಭಾವನಾ ಗುಡ್ ಬೈ, ಆಕಾಂಕ್ಷಾ ಹಾಯ್

  |

  ಎದೆಗಾರಿಕೆ ಚಿತ್ರದಿಂದ ಕನ್ನಡತಿ ಭಾವನಾ ಹೊರಬಂದಿದ್ದಾರೆ. ಕಾರಣ ಯಾವುದೇ ವಿವಾದವಲ್ಲ, ಅನಾರೋಗ್ಯ. ಭಟ್ಟರ 'ಡ್ರಾಮಾ' ಚಿತ್ರದಿಂದ ಭಾಮಾ ಹೊರಗೆ, ರಾಧಿಕಾ ಒಳಗೆ ಆದ ಬೆನ್ನಲ್ಲೇ ಈ ಬೆಳವಣಿಗೆಯೂ ನಡೆದಿದೆ. ಮುಹೂರ್ತದ ದಿನ ಸಖತ್ತಾಗಿ ಮಿಂಚಿದ್ದ ಭಾವನಾಗೆ ಅನಾರೋಗ್ಯ ಕಾಡಿದ್ದರಿಂದ ಅವರ ಭಾಗದ ಶೂಟಿಂಗ್ಸ್ ಮುಂದಕ್ಕೆ ಹಾಕಿ ಮಿಕ್ಕ ಶೂಟಿಂಗ್ಸ್ ಮುಗಿಸಿದ್ದರಂತೆ. ಆದರೀಗ ಭಾವನಾ ಜಾಗಕ್ಕೆ ಆಕಾಂಕ್ಷಾ ಬಂದಿದ್ದಾರೆ.

  ಈ ಸಂಬಂಧ ನಿರ್ದೆಶಕಿ ಸುಮನಾ ಕಿತ್ತೂರ್ ಹೇಳುವುದಿಷ್ಟು. "ಭಾವನಾಗೆ ಮೀಸಲ್ಸ್ ಆಗಿತ್ತು. ತುಂಬಾ ಬೆಳಕಿಗೆ ಹೋಗಬೇಡಿ ಎಂದು ವೈದ್ಯರು ಹೇಳಿದ್ದಾರೆ. ಮುಂಬೈನಲ್ಲಿ ಚಿತ್ರೀಕರಣವಿದೆ. ಭಾವನಾ ಹಾಸಿಗೆ ಹಿಡಿದಲ್ಲವಾದರೂ ಸದ್ಯ ಶೂಟಿಂಗ್ ಸಾಧ್ಯವಿಲ್ಲ. ಏಪ್ರಿಲ್ ಹೊತ್ತಿಗೆ ಚಿತ್ರ ಬಿಡುಗಡೆ ಮಾಡಬೇಕು. ಹಾಗಾಗಿ ಭಾವನಾ ಜಾಗಕ್ಕೆ ಆಕಾಂಕ್ಷಾ ಬಂದಿದ್ದಾರೆ."

  ಮುಹೂರ್ತದ ದಿನ 2 ಗಂಟೆ ಅಭಿನಯಿಸಿದ್ದು ಬಿಟ್ಟರೆ ಭಾವನಾ ಈ ಚಿತ್ರದ ಚಿತ್ರೀಕರಣದಲ್ಲಿ ಹೆಚ್ಚೇನೂ ಪಾಲ್ಗೊಂಡಿಲ್ಲವಾದ್ದರಿಂದ ಸಮಸ್ಯೆ ಇಲ್ಲ. 'ಒಲವೇ ಮಂದಾರ' ಚಿತ್ರದಲ್ಲಿ ಚೆನ್ನಾಗಿ ನಟಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದ ನಟಿ ಆಕಾಂಕ್ಷ ಈಗ ಈ ಚಿತ್ರದ ನಾಯಕಿ. ಆಕಾಂಕ್ಷಾ 'ಎದೆ'ಗಾರಿಕೆಯನ್ನು ಪ್ರೇಕ್ಷಕರು ಮೆಚ್ಚುತ್ತಾರಾ ಎಂಬುದನ್ನು ಕಾದು ನೋಡಬೇಕು. (ಒನ್ ಇಂಡಿಯಾ ಕನ್ನಡ)

  English summary
  Actress Bhavana Out from the movie 'Edegarike' from sickeness. Olave Mandara fame Actress Akanksha came for the replacement of Bhavana.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X