For Quick Alerts
  ALLOW NOTIFICATIONS  
  For Daily Alerts

  ನಮಿತಾ ಗಾತ್ರಕ್ಕೆ ಒಪ್ಪುವ ಪಾತ್ರ ನಮಿತಾ ಐ ಲವ್ ಯು!

  By Rajendra
  |

  ಈ ಚಿತ್ರದಲ್ಲಿ ದುಂಡು ಮಲ್ಲಿಗೆ ನಮಿತಾ ಯೋಗಾ ಟೀಚರ್. ಈ ಪಾತ್ರ ಅವರ ಗಾತ್ರಕ್ಕೆ ಒಪ್ಪಿಗೆ ಯಾಗಿದೆಯೋ ಇಲ್ಲವೋ ಗೊತ್ತಿಲ್ಲ. ಅದನ್ನು ಚಿತ್ರ ನೋಡಿದ ಬಳಿಕವಷ್ಟೆ ನಿರ್ಧರಿಸಬೇಕು. ಅದ್ಯಾವ ಚಿತ್ರ ಅಂದಿರಾ, ಅದೇ ರೀತಿ ನಮಿತಾ ಐ ಲವ್ ಯು! ಸತತ ನಲವತ್ತು ದಿನಗಳ ಚಿತ್ರೀಕರಣವನ್ನು ಪೂರೈಸಿದ್ದು ಈಗ ತೆರೆ ತುಂಬಲು ಸಿದ್ಧವಾಗಿದೆ.

  ಬೆಂಗಳೂರಿನ ರೇವಾ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ, ನಿಟ್ಟೆ ಮೀನಾಕ್ಷಿ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ಹಾಗೂ ಸಂಭ್ರಮ ಕಾಲೇಜುಗಳಲ್ಲಿ ಯೋಗಾ ಶಿಕ್ಷಕಿಯ ಸನ್ನಿವೇಶಗಳನ್ನು ಚಿತ್ರೀಕರಿಸಲಾಗಿದೆ. ಚಿತ್ರದಲ್ಲಿ ಒಟ್ಟು ಏಳು ಹಾಡುಗಳಿದ್ದು, ಒಂದು ಹಾಡನ್ನು ಹೈದರಾಬಾದ್‌ನಲ್ಲಿ ಚಿತ್ರೀಕರಿಸಿರುವುದು ವಿಶೇಷ.ರಮೇಶ್ ಚಂದ್ರ, ರಾಜೇಶ್ ಕೃಷ್ಣನ್, ಚಿತ್ರಾ, ಅನುರಾಧಾ ಭಟ್ ಮತ್ತು ಧನಂಜಯ ಕಂಠಸಿರಿಯಲ್ಲಿ ಹಾಡುಗಳು ಹೊರಹೊಮ್ಮಿವೆ.

  "ಪ್ರೀತಿ ಪ್ರೇಮ ಪ್ರಣಯ ಜೀವನದಲ್ಲಿ ಬಲು ಮುಖ್ಯ. ಆದರೆ ವಿದ್ಯಾರ್ಥಿಗಳು ಯಾವುದಕ್ಕೂ ಆತುರಪಡದೆ ಕೊಂಚ ಸಂಯಮ ವಹಿಸುವು ಒಳಿತು " ಎಂಬ ಸಂದೇಶವನ್ನು ಚಿತ್ರ ಯುವ ಪೀಳಿಗೆಗೆ ಮುಟ್ಟಿಸುತ್ತದೆ ಎನ್ನುತ್ತಾರೆ ನಮಿತಾ. ಸದ್ಯಕ್ಕೆ ಈ ಚಿತ್ರ ನಿರ್ಮಾಣೇತರ ಕೆಲಸಗಳಲ್ಲಿದ್ದು, ಶೀಘ್ರದಲ್ಲೆ ತೆರೆಗೆ ತರವ ಸಿದ್ಧತೆಗಳು ಭರದಿಂದ ಸಾಗಿವೆ.

  ಚಿತ್ರದ ಧ್ವನಿಸುರುಳಿಯನ್ನು ಆದಷ್ಟು ಬೇಗನೆ ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಚಿತ್ರದ ನಿರ್ದೇಶಕ ಜಯಸಿಂಹ ರೆಡ್ಡಿ ಹೇಳಿದ್ದಾರೆ. ನಿರ್ದೇಶಕರೇ ಕತೆ, ಚಿತ್ರಕತೆ ಹಾಗೂ ಸಂಗೀತ ಜವಾಬ್ದಾರಿಯನ್ನು ಹೊತ್ತಿರುವುದು ವಿಶೇಷ. ಈ ಚಿತ್ರವನ್ನು ರವಿತೇಜ ರೆಡ್ಡಿ ನಿರ್ಮಿಸಿದ್ದು ಥ್ರಿಲ್ಲರ್ ಮಂಜು ಸಾಹಸ ಚಿತ್ರಕ್ಕಿದೆ. ನಮಿತಾ ಕೇಂದ್ರ ಬಿಂದುವಾಗಿರುವ ಈ ಚಿತ್ರದ ಬಗ್ಗೆ ಕೊಂಚ ಕುತೂಹಲ ಇದ್ದೇ ಇದೆ.

  English summary
  Namitha lead Kannada film Namitha I Love You ready to hit the screen. Namitha plays the role of a Yoga teacher in a college. Jayasimha Reddy, director, story, screenplay writer and music director of Namitha I Love You, says the audio will be released soon.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X