For Quick Alerts
  ALLOW NOTIFICATIONS  
  For Daily Alerts

  ನಾರದ ವಿಜಯ ಸೆನ್ಸಾರ್ ನಲ್ಲಿ ದಿಗ್ವಿಜಯ!

  By Rajendra
  |

  'ನಾರದ ವಿಜಯ' ಚಿತ್ರ ಸೆನ್ಸಾರ್ ಮಂಡಳಿಯಲ್ಲಿ ದಿಗ್ವಿಜಯ ಸಾಧಿಸಿದೆ. ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ನಾರದ ವಿಜಯವನ್ನು ಕೊಂಡಾಡಿ 'ಯು' ಅರ್ಹತಾ ಪತ್ರವನ್ನು ನೀಡಿದೆ. ಈ ಚಿತ್ರ ಶ್ರೀಘ್ರದಲ್ಲೆ ತೆರೆ ಕಾಣಲಿದೆ. ಸಿಮ್ರಾನ್ ಮೂವೀ ಮೇಕರ್ಸ್ ಸಂಸ್ಥೆಯ ಮೂಲಕ ಈ ಚಿತ್ರವನ್ನು ನಿರ್ಮಿಸಲಾಗಿದೆ.

  ಶಶಿಕುಮಾರ್ ವಿಶೇಷ ಪಾತ್ರದಲ್ಲಿ ಅಭಿನಯಿಸಿರುವ ಈ ಚಿತ್ರದ ನಾಯಕನಾಗಿ ಸೂರ್ಯ ನಟಿಸಿದ್ದಾರೆ. ಮಧ್ಯಮ ವರ್ಗದ ಜನರ ನಿತ್ಯಜೀವನದ ಪ್ರಸಂಗಗಳನ್ನು ಆಧರಿಸಿ ನಿರ್ಮಾಣವಾಗಿರುವ ಈ ಚಿತ್ರವನ್ನು ಮಂಜು ದೈವಜ್ಞ ನಿರ್ದೇಶಿಸಿದ್ದಾರೆ.ನಿರ್ದೇಶಕರೇ 'ನಾರದ ವಿಜಯ ಚಿತ್ರಕ್ಕೆ ಕಥೆ ಚಿತ್ರಕಥೆ ಬರೆದಿದ್ದಾರೆ.

  ರಾಜ್‌ಭಾಸ್ಕರ್ ಸಂಗೀತ ನೀಡಿದ್ದಾರೆ. ಶಿವಕುಮಾರ್ ಛಾಯಾಗ್ರಹಣ, ಕುಮಾರ್ ಸಂಕಲನ, ಶ್ರೀನಿವಾಸ್ ಕಲೆ ಹಾಗೂ ಅಲ್ಟಿಮೆಟ್ ಶಿವು ಸಾಹಸ ಈ ಚಿತ್ರಕ್ಕಿದ್ದು, ಶ್ರೀಪ್ರಿಯ, ಕಾವ್ಯ, ಬ್ಯಾಂಕ್ ಜನಾರ್ದನ್, ಮೋಹನ್ ಜುನೇಜಾ, ಎಂ.ಎನ್.ಲಕ್ಷ್ಮೀದೇವಿ, ಬಿರದಾರ್, ಸುನಿತಾಶೆಟ್ಟಿ, ಜ್ಯೋತಿ, ರುದ್ರಾಣಿ ಮುಂತಾದವರು ಚಿತ್ರದ ತಾರಾಬಳಗದಲಿದ್ದಾರೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X