»   » 'ಪಂಚರಂಗಿ' ಗುಂಗಿನಲಿ ಯೋಗರಾಜಭಟ್

'ಪಂಚರಂಗಿ' ಗುಂಗಿನಲಿ ಯೋಗರಾಜಭಟ್

Posted By:
Subscribe to Filmibeat Kannada

ಯೋಗರಾಜಭಟ್ಟರ ಚೊಚ್ಚಲ ನಿರ್ಮಾಣದ 'ಪಂಚರಂಗಿ'ಚಿತ್ರೀಕರಣ ಮುಗಿದಿದೆ. ಈ ಬಾರಿ ಬದುಕಿನ ಐದು ಬಣ್ಣಗಳನ್ನು ಭಟ್ಟರು ತೆರೆಯ ಮೇಲೆ ಅನಾವರಣ ಮಾಡಲಿದ್ದಾರೆ. ಕರಾವಳಿ ತೀರದ ಸುಂದರ ತಾಣಗಳಲ್ಲಿ 'ಪಂಚರಂಗಿ' ಚಿತ್ರೀಕರಣ ನಡೆದಿದೆ. ಇದೊಂದು ಸ್ವಮೇಕ್ ಚಿತ್ರ ಎಂಬುದು ವಿಶೇಷ.

ಭಟ್ಟರು ಮೆಚ್ಚ್ಚಿದ ಹುಡುಗ ದಿಗಂತ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದು ಉಳಿದ ತಾರಾಗಣದಲ್ಲಿ ಅನಂತನಾಗ್, ಸುಧಾ ಬೆಳವಾಡಿ ಮತ್ತು ರಾಜು ತಾಳಿಕೋಟೆ ಇದ್ದಾರೆ. ಸತ್ವಭರಿತ ಕತೆ ಸಿಗದ ಕಾರಣ ನಿಧಿ ಸುಬ್ಬಯ್ಯ ಹಲವಾರು ಚಿತ್ರಗಳನ್ನು ತಿರಸ್ಕರಿಸಿದ್ದರು. ಕಡೆಗೆ ಭಟ್ಟರ 'ಪಂಚರಂಗಿ'ಗೆ ಮನಸೋತಿದ್ದಾರೆ. ತಮ್ಮ ವೃತ್ತಿ ಜೀವನಕ್ಕೆ 'ಪಂಚರಂಗಿ' ಹೊಸ ತಿರುವು ನೀಡಲಿದೆ ಎನ್ನುತ್ತಾರೆ ಅವರು.

ಮುಂಗಾರು ಮಳೆ, ಗಾಳಿಪಟ, ಮನಸಾರೆ ಚಿತ್ರಗಳ ಬಳಿಕ ಭಟ್ಟರ ಜೊತೆ ದಿಗಂತ್ ನಟಿಸುತ್ತಿರುವ ನಾಲ್ಕನೆ ಚಿತ್ರ ಇದಾಗಿದೆ. ಭಟ್ಟರು ನಿರ್ದೇಶನದ ಈ ಮೂರು ಯಶಸ್ವಿ ಚಿತ್ರಗಳು. ಇದೀಗ 'ಪಂಚರಂಗಿ' ಮೂಲಕ ಭಟ್ಟರ ಮ್ಯಾಜಿಕ್ ಮುಂದುವರಿಯಲಿದೆಯೇ? ಕಾದು ನೋಡಬೇಕು.

ಇನ್ನು ಭಟ್ಟರ ಚಿತ್ರ ಎಂದರೆ ಪ್ರಮುಖ ಆಕರ್ಷಣೆ ಹಾಡುಗಳು. ಮನೋಮೂರ್ತಿ ಅವರ ಸಂಗೀತ ಚಿತ್ರಕ್ಕಿದೆ. ನಿಗದಿತ ಮುವ್ವತ್ತು ದಿನಗಳಲ್ಲಿ ಪಂಚರಂಗಿ ಚಿತ್ರೀಕರಣವನ್ನು ಭಟ್ಟರು ಮುಗಿಸಿದ್ದಾರೆ. ಇನ್ನೇನಿದ್ದರೂ ತೆರೆಗೆ ಅಪ್ಪಳಿಸುವುದೊಂದೆ ಬಾಕಿ. ಭಟ್ಟರ ಚೊಚ್ಚಲ ನಿರ್ಮಾಣದ ಸ್ವಮೇಕ್ ಚಿತ್ರ 'ಪಂಚರಂಗಿ' ಪ್ರೇಕ್ಷಕರ ನಿರೀಕ್ಷೆಗಳನ್ನು ನಿಜ ಮಾಡಲಿ ಎಂದು ಹಾರೈಸೋಣ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada