»   » ಪೌರಾಣಿಕ ಗೆಟಪ್ ನಲ್ಲಿ ಪ್ರಕಾಶ್ ರೈ ಪ್ರಾರ್ಥನೆ

ಪೌರಾಣಿಕ ಗೆಟಪ್ ನಲ್ಲಿ ಪ್ರಕಾಶ್ ರೈ ಪ್ರಾರ್ಥನೆ

Posted By:
Subscribe to Filmibeat Kannada

ಪತ್ರಕರ್ತ ಸದಾಶಿವ ಶೆಣೈ ನಿರ್ದೇಶಿಸುತ್ತಿರುವ ಚೊಚ್ಚಲ ಚಿತ್ರ 'ಪ್ರಾರ್ಥನೆ' ಚಿತ್ರದ ಚಿತ್ರೀಕರನದಲ್ಲಿ ಖ್ಯಾತ ನಟ ಪ್ರಕಾಶ್ ರೈ ಪಾಲ್ಗೊಂಡಿದ್ದರು. ಚಿತ್ರಕ್ಕಾಗಿ ಅವರು ಪೌರಾಣಿಕ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದರು. ಪ್ರಕಾಶ್ ರೈ ಅವರ ನಟನೆ ಬಗ್ಗೆ ನಿರ್ದೇಶಕ ಶೆಣೈ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಾರ್ಥನೆ ಚಿತ್ರದಲ್ಲಿ ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾ ಮೂರ್ತಿ ಅಭಿನಯಿಸುತ್ತಿರುವುದು ಗೊತ್ತೆ ಇದೆ. ಕನ್ನಡ ಮತ್ತು ಕರ್ನಾಟಕದ ಜಾಗತಿಕ ಮಟ್ಟದ ರಾಯಭಾರಿಯಾಗಿ ಸುಧಾಮೂರ್ತಿ ಅವರು ಚಿತ್ರದಲ್ಲಿ ಪಾತ್ರ ಪೋಷಣೆ ಮಾಡಿದ್ದಾರೆ. ಇದೀಗ ಪ್ರಕಾಶ್ ರೈ ಅವರು ಪೌರಾಣಿಕ ಪಾತ್ರದಲ್ಲಿ ಕಾಣಿಸುತ್ತಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.

ನಾಲ್ಕು ದಿನಗಳ ಕಾಲ ಪ್ರಕಾಶ್ ರೈ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ. ಪ್ರಾರ್ಥನೆ ಚಿತ್ರೀಕರಣ ಸಹ ಕೊನೆಯ ಹಂತಕ್ಕೆ ತಲುಪಿದೆ ಎಂದು ಚಿತ್ರದ ನಿರ್ದೇಶಕ ಸದಾಶಿವ ಶೆಣೈ ತಿಳಿಸಿದ್ದಾರೆ. ಈ ಚಿತ್ರವನ್ನು ಹರೀಶ್ ನಿರ್ಮಿಸುತ್ತಿದ್ದಾರೆ. ಚಿತ್ರದ ತಾರಾಬಳಗದಲ್ಲಿಅನಂತನಾಗ್, ಬಿ ಸಿ ಪಾಟೀಲ್, ಪವಿತ್ರಾ ಲೋಕೇಶ್, ಮಾಸ್ಟರ್ ಸಚಿನ್ ಇದ್ದಾರೆ. ವೀರ್ ಸಮರ್ಥ್ ಅವರ ಸಂಗೀತ ಪ್ರಾರ್ಥನೆಗಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada