For Quick Alerts
  ALLOW NOTIFICATIONS  
  For Daily Alerts

  ಕೊಳ್ಳೆಗಾಲದಲ್ಲಿ ಪ್ರೇಮ್ ಅಡ್ಡಾ ಮೊದಲ ಶೆಡ್ಯೂಲ್

  By Rajendra
  |

  ನಟ, ನಿರ್ದೇಶಕ ಪ್ರೇಮ್ ಮತ್ತೊಮ್ಮೆ ತಮ್ಮ ಅದೃಷ್ಟ ಪರೀಕ್ಷೆಗೆ ಕೈಹಾಕಿದ್ದಾರೆ. ಪ್ರೇಮ್ ಈ ಬಾರಿ ನಟನೆಗಷ್ಟೇ ಸೀಮಿತವಾಗಿದ್ದು ನಿರ್ದೇಶನದಿಂದ ದೂರ ಸರಿದಿದ್ದಾರೆ. 'ಪ್ರೇಮ್ ಅಡ್ಡಾ' ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಜವಾಬ್ದಾರಿಯನ್ನು ಮಹೇಶ್ ಬಾಬು ಹೆಗಲಿಗೆ ಹೊರೆಸಿದ್ದಾರೆ.

  ಮುರಳಿ ಕೃಷ್ಣ ನಿರ್ಮಿಸುತ್ತಿರುವ ಪ್ರೇಮ್ ಅಡ್ಡಾ ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ಪ್ರೇಮ್‌ಗೆ ಈ ಬಾರಿ ನಾಯಕಿ ಕೀರ್ತಿ ಖರಬಂಧ. ಕೀರ್ತಿಗೆ ಚೊಚ್ಚಲ ಕನ್ನಡ ಚಿತ್ರವಿದು. ಮೇಕಾ ಫಿಲಂಸ್ ಲಾಂಛನದಲ್ಲಿ ಶ್ರೀಮತಿ ರಕ್ಷಿತಾ ಪ್ರೇಮ್ ಅರ್ಪಿಸುತ್ತಿರುವ ಚಿತ್ರವಿದು.

  ಪ್ರೇಮ್ ಅಡ್ಡಾ ಚಿತ್ರದ ಲೇಟೆಸ್ಟ್ ಸುದ್ದಿ ಏನೆಂದರೆ ಪ್ರಥಮ ಹಂತದ ಚಿತ್ರೀಕರಣ ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲದ ಸುಂದರ ತಾಣಗಳಲ್ಲಿ ಭರದಿಂದ ಸಾಗಿದೆ. 'ಪ್ರೀತಿ ಏಕೆ ಭೂಮಿ ಮೇಲಿದೆ' ಚಿತ್ರದ ಬಳಿಕ ಪ್ರೇಮ್ ನಾಯಕ ನಟನಾಗಿ ಕಾಣಿಸುತ್ತಿರುವ ಎರಡನೇ ಚಿತ್ರವಿದು. (ಏಜೆನ್ಸೀಸ್)

  English summary
  Kannada movie Prem Adda directing by Mahesh Babu is on floors with its first shooting schedule commencing in Kollegal. The movie is being produced by Meka Murali Krishna. The film is a remake of Tamil hit Subramanyapuram directed by Shashikumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X