»   »  ಅಣ್ಣಾವ್ರ ಹುಟ್ಟುಹಬ್ಬಕ್ಕೆ ರಾಜ್ ಬಿಡುಗಡೆ ಇಲ್ಲ

ಅಣ್ಣಾವ್ರ ಹುಟ್ಟುಹಬ್ಬಕ್ಕೆ ರಾಜ್ ಬಿಡುಗಡೆ ಇಲ್ಲ

Subscribe to Filmibeat Kannada
ನಿಶಾ ಕೊಠಾರಿ ಕಾಲಿಗೆ ಪೆಟ್ಟಾಗಿರುವ ಕಾರಣ 'ರಾಜ್'ಚಿತ್ರೀಕರಣಕ್ಕೆ ಕೊಂಚ ಅಡೆತಡೆಯಾಗಿದೆ. ಇನ್ನೂ ಎರಡು ಹಾಡುಗಳ ಚಿತ್ರೀಕರಣ ಬಾಕಿ ಇದ್ದು ಆ ಎರಡು ಹಾಡುಗಳಿಗೆ ನಿಶಾ ಅಗತ್ಯವಾಗಿ ಬೇಕಾಗಿದ್ದಾರೆ.ಆದರೆ ಅವರ ಅನುಪಸ್ಥಿತಿಯಿಂದ ಚಿತ್ರೀಕರಣಕ್ಕೆ ಪ್ಯಾಕಪ್ ಹೇಳಲಾಗಿದೆ.

ಈ ಕುರಿತು ವಿವರ ನೀಡಿದ ನಿರ್ದೇಶಕ ಪ್ರೇಮ್, ಅಣ್ಣಾವ್ರ ಹುಟ್ಟುಹಬ್ಬಕ್ಕೆ(ಏಪ್ರಿಲ್ 24) ರಾಜ್ ಚಿತ್ರ ಬಿಡುಗಡೆಯಾಗುತ್ತಿಲ್ಲ. ರಾಜ್ ಚಿತ್ರದ ಹಾಡುಗಳು ಅದ್ದೂರಿತನದಿಂದ ಕೂಡಿದ್ದು,ನಿರ್ಮಾಪಕರಾದ ಸುರೇಶ್ ಗೌಡ ಮತ್ತು ಶ್ರೀನಿವಾಸ ಮೂರ್ತಿ ನಾಲ್ಕು ಹಾಡುಗಳಿಗೆ ರು. 1.5 ಕೋಟಿ ಖರ್ಚು ಮಾಡಿದ್ದಾರೆ ಎಂದರು.

ಹಾಡುಗಳ ಧ್ವನಿಮುದ್ರಣಕ್ಕೇ ರು.35 ಲಕ್ಷ ಖರ್ಚಾಗಿದೆ ಎಂಬ ಮಾಹಿತಿಯನ್ನು ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ನೀಡಿದರು. ಪ್ರತಿ ಹಾಡಿಗೂ ನಾಲ್ಕು ಮಂದಿ ಕೀಬೋರ್ಡ್ ಸಂಯೋಜನೆ ಮಾಡಿದ್ದು ಎ ಆರ್ ರೆಹಮಾನ್ ಶೈಲಿಯಲ್ಲಿ ಸಂಗೀತ ಸಂಯೋಜನೆ ಮಾಡಲಾಗಿದೆ ಎಂದು ಪ್ರೇಮ್ ಹೆಮ್ಮೆಯಿಂದ ಹೇಳಿಕೊಂಡರು.

ರಾಜ್ ಧ್ವನಿಸುರುಳಿಗಿರುವ ಬೇಡಿಕೆಯನ್ನು ಪೂರೈಸುವಲ್ಲಿ ಅಶ್ವಿನಿ ಆಡಿಯೋ ಹಗಲು ರಾತ್ರಿ ಶ್ರಮಿಸುತ್ತಿದೆ ಎಂದು ನಿರ್ಮಾಪಕ ಸುರೇಶ್ ಗೌಡ ಮೆಚ್ಚುಗೆ ವ್ಯಕ್ತಪಡಿಸಿದರು. ರಾಜ್ ಆಡಿಯೋಗೆ ಉತ್ತಮ ಪ್ರತಿಕ್ರಿಯೆ ಬಂದಿರುವುದಕ್ಕೆ ಅವರು ಖುಷಿಯಾಗಿದ್ದರು. ಚಿತ್ರಕ್ಕೆ ಪ್ರೇಮ್ ಮತ್ತು ವಿ.ಹರಿಕೃಷ್ಣ ಅವರೇ ಪ್ರೇರಕ ಶಕ್ತಿ ಎಂದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ದಾಖಲೆ ಮಾರಾಟ ಕಂಡರಾಜ್ ಧ್ವನಿಸುರುಳಿ
ರಾಜ್ ನಲ್ಲಿ ಬೆಳ್ಳಿತೆರೆಯ ಬಂಗಾರಿಯರ ಥೈಥೈ
ಪುನೀತ್ ತಲೆಗೆ 1 ಲಕ್ಷ ರು. ಬೆಲೆಯ ವಿಶೇಷ ವಿಗ್!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada