»   » ಪ್ರೇಕ್ಷಕರ ಮುಂದೆ ಅಮೂಲ್ಯ 'ಪ್ರೇಮಿಸಂ'

ಪ್ರೇಕ್ಷಕರ ಮುಂದೆ ಅಮೂಲ್ಯ 'ಪ್ರೇಮಿಸಂ'

Posted By:
Subscribe to Filmibeat Kannada

ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ 'ಪ್ರೇಮಿಸಂ' ಚಿತ್ರ ಈ ವಾರ(ಏ.2) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕಲ್ಪನಾಶಕ್ತಿ ಲಾಂಛನದಲ್ಲಿಅಜಯ್ ಆರ್ ಗೌಡ ಅವರು ನಿರ್ಮಿಸಿರುವ ಈ ಚಿತ್ರವನ್ನು 'ನೆನಪಿರಲಿ' ಖ್ಯಾತಿಯ ರತ್ನಜ ನಿರ್ದೇಶಿಸಿದ್ದಾರೆ.

ನಿರ್ದೇಶಕರೇ ಕಥೆ, ಚಿತ್ರಕಥೆ ಬರೆದಿರುವ ಚಿತ್ರಕ್ಕೆ ಶೀತಲ್‌ಜೈನ್ ಅವರ ಛಾಯಾಗ್ರಹಣವಿದೆ. 'ಪಿಯುಸಿ' ಚಿತ್ರದ ನಾಯಕ ಚೇತನ್ ಹಾಗೂ ಕೊಡಗಿನ ಹುಡುಗ ವರುಣ್ ಈ ಚಿತ್ರದ ನಾಯಕರು. 'ಚೆಲುವಿನ ಚಿತ್ತಾರ'ದ ಬೆಡಗಿ ಅಮೂಲ್ಯ ಪ್ರೇಮಿಸಂನ ನಾಯಕಿ. ಹಂಸಲೇಖ ಅವರು ಈ ಚಿತ್ರಕ್ಕೆ ಗೀತರಚನೆ ಮಾಡಿ ಸಂಗೀತ ಸಂಯೋಜಿಸಿದ್ದಾರೆ.

ಕೆಂಪರಾಜ್ ಸಂಕಲನ, ಇಮ್ರಾನ್, ದೇವರಾಜ್ ನೃತ್ಯ, ಡಿಫರೆಂಟ್ ಡ್ಯಾನಿ ಸಾಹಸ, ಚಂದ್ರಪ್ಪ ನಿರ್ಮಾಣ ನಿರ್ವಹಣೆ, ರವಿಕುಮಾರ್ ಅವರ ನಿರ್ಮಾಣ ಮೇಲ್ವಿಚಾರಣೆಯಿರುವ ಚಿತ್ರದ ಉಳಿದ ತಾರಾಬಳಗದಲ್ಲಿ ಅನಂತನಾಗ್, ಅವಿನಾಶ್, ರೇಖಾ.ವಿ.ಕುಮಾರ್, ಸಂಗೀತ, ಶೋಭ್‌ರಾಜ್, ಶರಣ್, ಪ್ರಸಾದ್, ಸುನಿತಾ ಮುಂತಾದವರಿದ್ದಾರೆ.

ಚಿತ್ರದ ಹಾಡುಗಳು ವಿವಿಧ ಚಾನೆಲ್ ಗಳ ಟಾಪ್ ಟೆನ್ ಪಟ್ಟ್ಟಿಯಲ್ಲಿ ಸ್ಥಾನಪಡೆದಿವೆ. ಹಂಸಲೇಖ ಅವರ ಸಂಗೀತ ಮತ್ತೊಮ್ಮೆ ಪ್ರೇಕ್ಷಕರ ಹೃದಯ ತಟ್ಟುತ್ತಿದೆ ಎಂಬುದುದಕ್ಕೆ ಇದೇ ಸಾಕ್ಷಿ. ಕರ್ನಾಟಕದ ಸುಂದರ ತಾಣಗಳು ಹಾಗೂ ಚೀನಾದಲ್ಲಿ ಪ್ರೇಮಿಸಂ ಚಿತ್ರವನ್ನು ಚಿತ್ರೀಕರಿಸಲಾಗಿದೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada