»   »  ಮೊಗ್ಗಿನ ಮನಸು ಚಿತ್ರಕ್ಕೆ ಐದು ಸೌತ್ ಫಿಲಂಫೇರ್ ಪ್ರಶಸ್ತಿ!

ಮೊಗ್ಗಿನ ಮನಸು ಚಿತ್ರಕ್ಕೆ ಐದು ಸೌತ್ ಫಿಲಂಫೇರ್ ಪ್ರಶಸ್ತಿ!

Subscribe to Filmibeat Kannada

ಈ ಕೃಷ್ಣಪ್ಪ ನಿರ್ಮಾಣದ 'ಮೊಗ್ಗಿನ ಮನಸು' ಚಿತ್ರ ಐದು ಸೌತ್ ಫಿಲಂಫೇರ್ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. 'ಬನ್ನಿ' ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಈ ಕೃಷ್ಣಪ್ಪ ಈ ವಿಷಯನ್ನು ಬಹಿರಂಗಪಡಿಸಿದರು. ಈ ಹಿಂದೆ ಅವರ ನಿರ್ಮಾಣದ 'ಮುಂಗಾರು ಮಳೆ' ಚಿತ್ರ ಎರಡು ಫಿಲಂಫೇರ್ ಪ್ರಶಸ್ತಿಗಳನ್ನು ಪಡೆದುಕೊಂಡಿತ್ತು.

ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಜುಲೈ 31ರಂದು ಹೈದರಾಬಾದ್ ನಲ್ಲಿ ಹಮ್ಮಿಕೊಳ್ಳಲಾಗಿದೆ. ಸಾಮಾನ್ಯವಾಗಿ ಪ್ರಶಸ್ತಿ ಪ್ರದಾನ ದಿನದಂದು ದಕ್ಷಿಣದ ಫಿಲಂಫೇರ್ ಪ್ರಶಸ್ತಿಗಳನ್ನು ಪ್ರಕಟಿಸಲಾಗುತ್ತದೆ. ಪ್ರಶಸ್ತಿ ವಿಜೇತರಿಗೆ ಮಾತ್ರ ಎರಡು ದಿನ ಮುಂಚಿತವಾಗಿ ವಿಷಯ ತಿಳಿಸಲಾಗುತ್ತದೆ. ಹಾಗಾಗಿ ಜು.29ರಂದೇ ಈ ಕೃಷ್ಣಪ್ಪನವರಿಗೆ ತಮ್ಮ ಚಿತ್ರ ಐದು ಪ್ರಶಸ್ತಿಗಳನ್ನು ಗಳಿಸಿರುವ ವಿಷಯವನ್ನು ತಿಳಿಸಲಾಗಿತ್ತು.

'ಮೊಗ್ಗಿನ ಮನಸು 'ಚಿತ್ರದನಟನೆಗಾಗಿ ರಾಧಿಕಾ ಪಂಡಿತ್ ಅವರಿಗೆ ಅತ್ಯುತ್ತಮ ನಟಿ, ಈ ಕೃಷ್ಣಪ್ಪನವರಿಗೆ ಅತ್ಯುತ್ತಮ ಚಿತ್ರ, ಶಶಾಂಕ್ ಗೆ ಅತ್ಯುತ್ತಮ ನಿರ್ದೇಶಕ , ಶುಭಾ ಪೂಂಜಾ ಅವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ, ಯಶ್ ಅವರಿಗೆಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಮೂಲಗಳ ಪ್ರಕಾರ 'ಗಾಳಿಪಟ' ಚಿತ್ರದ ನಟನೆಗಾಗಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಗಣೇಶ್ ಪಡೆದುಕೊಂಡಿದ್ದಾರೆ. ಗೀತ ಸಾಹಿತಿ ಜಯಂತ ಕಾಯ್ಕಿಣಿ, ಸಂಗೀತ ನಿರ್ದೇಶಕ ವಿ ಹರಿಕೃಷ್ಣ, ಹಿನ್ನೆಲೆ ಗಾಯಕರಾದ ಸೋನು ನಿಗಂ ಮತ್ತು ಶ್ರೇಯಾ ಘೋಷಾಲ್ ಅವರು ಪ್ರಶಸ್ತಿ ವಿಜೇತರ ಪಟ್ಟಿಯಲ್ಲಿದ್ದಾರೆ. ಶುಕ್ರವಾರ(ಜು.31) ರಾತ್ರಿ ಹೈದಾರಾಬಾದ್ ನಲ್ಲಿ ಅದ್ದೂರಿಯಾಗಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada