»   »  ಗೆಜ್ಜೆ ಹಾಡಿಗೆ ಹೆಜ್ಜೆ ಹಾಕಿದ ಸುಧಾರಾಣಿ, ಅನು

ಗೆಜ್ಜೆ ಹಾಡಿಗೆ ಹೆಜ್ಜೆ ಹಾಕಿದ ಸುಧಾರಾಣಿ, ಅನು

Posted By:
Subscribe to Filmibeat Kannada
Anu Prabhakar
'ಭಾಗ್ಯದ ಬಳೆಗಾರ' ಚಿತ್ರದ ಜಾನಪದ ಗೀತೆಗೆ ಜನಪ್ರಿಯ ನಟಿಯರಾದ ಸುಧಾರಾಣಿ ಮತ್ತು ಅನು ಪ್ರಭಾಕರ್ ಹೆಜ್ಜೆಹಾಕಿದ್ದಾರೆ. ಚಿತ್ರದ ಶೀರ್ಷಿಕೆ ಗೀತೆ ''ಭಾಗ್ಯದ ಬಳೆಗಾರ ಬಾಗಿಲಿಗೆ ಬಂದ...'' ಹಾಡಿಗೆ ಜಾನಪದ ದಿರಿಸಿನಲ್ಲಿದ್ದ ಸುಧಾರಾಣಿ ಹೆಜ್ಜೆಹಾಕಿದ್ದಾರೆ.

ತಮ್ಮ ಸಿನಿಮಾ ವೃತ್ತಿಜೀವನದ ಮೊದಲ ಹೀರೋ ಶಿವರಾಜ್ ಕುಮಾರ್ ಅವರೊಂದಿಗೆ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.ಶಿವರಾಜ್ ಕುಮಾರ್ ಅಭಿನಯದ ಆನಂದ್ ಚಿತ್ರ ಸುಧಾರಾಣಿ ಅವರ ಮೊದಲ ಚಿತ್ರ ಎಂಬುದು ಗೊತ್ತೇ ಇದೆ. ಮತ್ತೊಬ್ಬ ನಾಯಕಿ ಅನು ಪ್ರಭಾಕರ್ ಸಹ ಮತ್ತೊಂದು ಜಾನಪದ ಗೀತೆ ''ಘಲ್ಲು ಘಲ್ಲೆನುತಾ ಗೆಜ್ಜೆ ಗಲ್ಲು ಘಲ್ಲೆನುತಾ...'' ಹಾಡಿಗೆ ಹೆಜ್ಜೆಹಾಕಿದರು. ಈ ಎರಡು ಹಾಡುಗಳು ಚಿತ್ರದ ಬೇರೆ ಬೇರೆ ಸನ್ನಿವೇಶಗಳಲ್ಲಿ ಬರಲಿವೆ ಎಂದು ನಿರ್ಮಾಪಕರು ತಿಳಿಸಿದರು.

'ಭಾಗ್ಯದ ಬಳೆಗಾರ ಹೋಗಿ ಬಾ ನನ್ನ ತವರಿಗೆ' ಈ ಸುಂದರ ಜಾನಪದ ಗೀತೆಯನ್ನು ಕೇಳದ ಕಿವಿಗಳು ಕನ್ನಡ ನೆಲದಲ್ಲಿ ಸಿಗಲಾರದು. ಈ ಗೀತೆಯ ಮೊದಲ ಪದವನ್ನು ಚಿತ್ರದ ಶೀರ್ಷಿಕೆಗೆ ಬಳಸಿಕೊಂಡಿದ್ದಾರೆ ನಿರ್ಮಾಪಕ ರಮೇಶ್‌ಕಶ್ಯಪ್. ಹಿಂದಿನ ವರ್ಷದಲ್ಲಿ ತೆರೆ ಕಂಡು ಯಶಸ್ಸು ಕಂಡ ಕೆಲವೇ ಚಿತ್ರಗಳಲ್ಲೊಂದಾದ 'ನಂದ ಲವ್ಸ್ ನಂದಿತಾ' ಚಿತ್ರವನ್ನು ನಿರ್ಮಿಸಿದ್ದ ರಮೇಶ್‌ಕಶ್ಯಪ್ ಪ್ರಸಕ್ತ ವರ್ಷದಲ್ಲಿ ಈ ಚಿತ್ರದ ನಿರ್ಮಾಣಕ್ಕೆ ಮುಂದಾಗಿರುವುದು ಗೊತ್ತೇ ಇದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಶಿವಣ್ಣ 'ಬಳೆಗಾರ'ನ ಹಾಡುಗಳ ದಿಬ್ಬಣ
ಶಿವಣ್ಣನಿಗೆ ಜೋಡಿಯಾಗಿ ನವ್ಯಾ ನಾಯರ್!
ಕನ್ನಡಕ್ಕೆ ಶೂರ್ಪನಖಿಯಾದ ಪ್ರಿಯಾಮಣಿ

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X