»   » 3ನೇ ಅಂತರಾಷ್ಟ್ರೀಯ ಕಿರುಚಿತ್ರೋತ್ಸವಕ್ಕೆ ಜ.27 ರಂದು ಚಾಲನೆ

3ನೇ ಅಂತರಾಷ್ಟ್ರೀಯ ಕಿರುಚಿತ್ರೋತ್ಸವಕ್ಕೆ ಜ.27 ರಂದು ಚಾಲನೆ

Posted By:
Subscribe to Filmibeat Kannada

'3ನೇ ಅಂತರಾಷ್ಟ್ರೀಯ ಶಾರ್ಟ್ ಫಿಲ್ಮ್ ಫೆಸ್ಟಿವಲ್ ಬೆಂಗಳೂರು'(ISFFB) ಇಂದು (ಜನವರಿ 27) ಬೆಂಗಳೂರು ರಾಜಾಜಿ ನಗರದ ಆರ್ ಟಿ ಒ ಕಾಂಪ್ಲೆಕ್ಸ್ ನಲ್ಲಿರುವ ರಾಜ್ ಕುಮಾರ್ ಕಲಾಕ್ಷೇತ್ರ ದಲ್ಲಿ ಚಾಲನೆಗೊಂಡಿದೆ. ಚಿತ್ರೋತ್ಸವಕ್ಕೆ ಆಗಮಿಸಿದ್ದ ಬೆಂಗಳೂರು ವಾರ್ಡ್‌ ನಂಬರ್ 99 ಕಾರ್ಪೋರೇಟರ್ ಜಿ.ಕೃಷ್ಣಮೂರ್ತಿ ಅವರು ಜ್ಯೋತಿ ಬೆಳಗುವ ಮೂಲಕ ಕಿರು ಚಿತ್ರೋತ್ಸವಕ್ಕೆ ಚಾಲನೆ ನೀಡಿದರು. ಫಿಲ್ಮ್ ಫೆಸ್ಟಿವಲ್ ಇಂದು ಮತ್ತು ನಾಳೆ ನಡೆಯಲಿದೆ.

ಮೂರನೇ ಅಂತರಾಷ್ಟ್ರೀಯ ಕಿರು ಚಿತ್ರೋತ್ಸವದಲ್ಲಿ 30 ದೇಶಗಳ 80 ಕಿರುಚಿತ್ರಗಳನ್ನು ಪ್ರದರ್ಶನ ಮಾಡಲಾಗುತ್ತಿದೆ. ಗೋವಾ ಫಿಲ್ಮ್ ಅಲಯನ್ಸ್ ಉಪಾಧ್ಯಕ್ಷರು ಮತ್ತು ಫ್ರಾನ್ಸ್ ನಟಿ ಆದ ಮಾರಿಯನ್ನೆ ಬೊರ್ಗೊ, ಇಟಲಿಯ ನಿರ್ದೇಶಕ ಮೆಕ್ಸಿನಿಲಿಯಾನೊ ಮಝ್ಜೊತ ಮತ್ತು ಮಹೇಶ್ ರಾವ್ ಕಿರು ಚಿತ್ರೋತ್ಸವದ ತೀರ್ಪುಗಾರರಾಗಿದ್ದಾರೆ.

3rd International Short Film Festival Bangalore Started today

ಚಿತ್ರೋತ್ಸವದಲ್ಲಿ ವಿಜೇತಗೊಂಡ ಮೂರು ಅತ್ಯುತ್ತಮ ಕಿರುಚಿತ್ರಗಳಿಗೆ ನಾಳೆ ಬಹುಮಾನ ನೀಡಲಾಗುವುದು. '3ನೇ ಅಂತರಾಷ್ಟ್ರೀಯ ಶಾರ್ಟ್ ಫಿಲ್ಮ್ ಫೆಸ್ಟಿವಲ್ ಬೆಂಗಳೂರು'(ISFFB) ಪ್ರಶಸ್ತಿ ಪ್ರದಾನ ಸಮಾರಂಭ ನಾಳೆ (ಜನವರಿ 28) ನಡೆಯಲಿದ್ದು, ಕಾರ್ಯಕ್ರಮಕ್ಕೆ ಕನ್ನಡದ ನಟಿಯರಾದ ಶೃತಿ ಹರಿಹರನ್, ನಟಿ ರಾಗಿಣಿ, ಕನ್ನಡ ನಟ Rank ಸ್ಟಾರ್ ಗುರುನಂದನ್, ಕ್ರಿಕೆಟರ್ ಎನ್.ಸಿ.ಅಯ್ಯಪ್ಪ ಮತ್ತು ಕರ್ನಾಟಕ ಮಕ್ಕಳ ಪಕ್ಷದ ಸಂಸ್ಥಾಪಕ ಅಶೋಕ್ ಖೇಣಿ ಅವರು ಆಗಮಿಸಲಿದ್ದಾರೆ.

'3ನೇ ಅಂತರಾಷ್ಟ್ರೀಯ ಶಾರ್ಟ್ ಫಿಲ್ಮ್ ಫೆಸ್ಟಿವಲ್ ಬೆಂಗಳೂರು' (ISFFB) ನಲ್ಲಿ 3 ಅತ್ಯುತ್ತಮ ಕಿರುಚಿತ್ರಗಳಿಗೆ ಪ್ರಶಸ್ತಿ ನೀಡಲಾಗುವುದು. ಮೊದಲನೇ ಬಹುಮಾನಕ್ಕೆ ಆಯ್ಕೆಗೊಂಡ ಅತ್ಯುತ್ತಮ ಕಿರುಚಿತ್ರಕ್ಕೆ ರೂ.20,000, ಎರಡನೇ ಅತ್ಯುತ್ತಮ ಕಿರುಚಿತ್ರಕ್ಕೆ ರೂ.15,000, ಮೂರನೇ ಅತ್ಯುತ್ತಮ ಕಿರುಚಿತ್ರಕ್ಕೆ ರೂ.10,000 ಪ್ರಶಸ್ತಿ ಲಭಿಸಲಿದೆ.

ಫಿಲ್ಮ್ ಫೆಸ್ಟಿವಲ್ ನಲ್ಲಿ ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಕಿರುಚಿತ್ರ ಛಾಯಾಗ್ರಾಹಕ, ಅತ್ಯುತ್ತಮ ಸಂಕಲನಕಾರ, ಅತ್ಯುತ್ತಮ ಸೈಲೆಂಟ್ ಫಿಲ್ಮ್ ಎಂಬಿತ್ಯಾದಿ ಪ್ರಶಸ್ತಿಗಳನ್ನು ನೀಡಲಾಗುವುದು.

English summary
3rd International Short Film Festival Bangalore (ISFFB)-2017 was started today in RajKumar Kalakshetra at Rajajinagar RTO Complex, Bengaluru.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada