»   » ಸುದೀಪ್, ಚಿಂಗಾರಿ ಹರ್ಷ 'ಕಿಕ್' ಕೊಡುತ್ತಾರಾ?

ಸುದೀಪ್, ಚಿಂಗಾರಿ ಹರ್ಷ 'ಕಿಕ್' ಕೊಡುತ್ತಾರಾ?

Posted By:
Subscribe to Filmibeat Kannada

'ಚಿಂಗಾರಿ' ಚಿತ್ರದ ಮೂಲಕ ಯಶಸ್ವಿ ನಿರ್ದೇಶಕರಾಗಿ ಬದಲಾಗಿರುವ ಡ್ಯಾನ್ಸ್ ಮಾಸ್ಟರ್ ಎ ಹರ್ಷ, ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಈ ಬಾರಿ ಅವರು ಕಿಚ್ಚ ಸುದೀಪ್‌ಗೆ ಆಕ್ಷನ್ ಕಟ್ ಹೇಳುತ್ತಿರುವುದು ಗೊತ್ತೇ ಇದೆ. ತೆಲುಗಿನ ಯಶಸ್ವಿ ಚಿತ್ರ 'ಕಿಕ್' ಕನ್ನಡಕ್ಕೆ ತರುತ್ತಿದ್ದಾರೆ ಎಂಬ ಸುದ್ದಿ ಇತ್ತು. ಈಗ ಆ ಸುದ್ದಿಯನ್ನು ಹರ್ಷ ಅಲ್ಲಗಳೆದಿದ್ದಾರೆ ಎಂದು ಸುದ್ದಿಯಾಗಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗಿನ 'ಚಿಂಗಾರಿ' ಚಿತ್ರ ಹಾಲಿವುಡ್ 'ಟೇಕನ್' ಚಿತ್ರದ ಪ್ರೇರಣೆಯಾಗಿತ್ತು. ಈ ಬಾರಿಯೂ ಮತ್ತೊಂದು ಹಾಲಿವುಡ್ ಚಿತ್ರದ ಪ್ರೇರಣೆಯೊಂದಿಗೆ ಚಿತ್ರ ಮಾಡುವ ಸೂಚನೆಯನ್ನು ಹರ್ಷ ಕೊಟ್ಟಿದ್ದಾರೆ. ಆದರೆ ನಿರ್ಮಾಪಕರಾದ ಕೆಸಿಎನ್ ಕುಮಾರ್ ಚಿತ್ರ ಮಾಡುವ ಸುದ್ದಿ ಹೌದೆಂದು ಹೇಳಿದ್ದಾರೆ.

ಸುದೀಪ್ ಜೊತೆ 'ಕಿಕ್' ಚಿತ್ರ ಮಾಡುತ್ತಿರುವ ಪಕ್ಕಾ ಮಾಡಿರುವ ಕೆಸಿಎನ್ ಕುಮಾರ್, ಈ ಚಿತ್ರದ ಶೂಟಿಂಗ್ ಏಪ್ರೀಲ್ 15 ರಿಂದ ಪ್ರಾರಂಭವಾಗಲಿದೆ ಎಂದು ತಿಳಿಸಿದ್ದಾರೆ. ಚಿತ್ರ ಮಾಡುತ್ತಿರುವು ಹೌದೋ ಅಲ್ಲವೋ ಎಂಬುದು ಈಗ ನಿಜವಾಗಿಯೂ ಸಂಶಯವಾಗಿ ಮಾರ್ಪಟ್ಟಿದೆ. ಸದ್ಯದಲ್ಲಿಯೇ ಸತ್ಯ ಹೊರಬೀಳಬಹುದು ಎಂದು ನಿರೀಕ್ಷಿಸಲಾಗಿದೆ. (ಏಜೆನ್ಸೀಸ್)

English summary
Chingari' Kannada movie director A Harsha told that he is not doing Telugu Kick with Sudeep. But, the producer KCN Kumar told, kick will starts from April 15, 2012. 
 
Please Wait while comments are loading...